ನವದೆಹಲಿ: ಶ್ರೀಲಂಕಾ ಪುರುಷರ ತಂಡದ ನೂತನ ಮುಖ್ಯ ಕೋಚ್ ಅನ್ನು ಘೋಷಿಸಲಾಗಿದೆ. ತಂಡದ ಮಾಜಿ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಅವರನ್ನು ನೂತನ ಕೋಚ್ ಆಗಿ ನೇಮಿಸಲಾಗಿದೆ. ಇದಕ್ಕೂ ಮೊದಲು ಸನತ್ ಜಯಸೂರ್ಯ ಕೆಲಕಾಲ ತಂಡದಲ್ಲಿ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿತ್ತಿದ್ದರು. ಈ ವೇಳೆ ಅವರ ಮಾರ್ಗದರ್ಶನದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಕಾರಣಕ್ಕಾಗಿ, ಅವರನ್ನು ಮಾರ್ಚ್ 2026ರವರೆಗೆ ಕಾಯಂ ಕೋಚ್ ಆಗಿ ನೇಮಿಸಲಾಗಿದೆ.
ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀಲಂಕಾ ಇತ್ತೀಚೆಗೆ ಟೀಮ್ ಇಂಡಿಯಾ ವಿರುದ್ಧ ಕಠಿಣ ಪೈಪೋಟಿ ನೀಡಿತ್ತು. ಭಾರತ ತಂಡವು ಏಕದಿನ ಮತ್ತು ಟಿ20 ಸರಣಿಗಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಎದುರಾಳಿ ತಂಡದಿಂದ ಸಾಕಷ್ಟು ಸವಾಲನ್ನು ಎದುರಿಸಿತು. ಈ ವೇಳೆ ಭಾರತ ತಂಡ T20 ಸರಣಿಯನ್ನು ಗೆದ್ದುಕೊಂಡಿತ್ತು ಆದರೆ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಹೀನಾಯ ಸೋಲನುಭವಿಸಿತು. ಇದಾದ ಬಳಿಕ ಇಂಗ್ಲೆಂಡ್ ಪ್ರವಾಸ ಕಕೈಗೊಂಡಿದ್ದ ಲಂಕಾ ಟೆಸ್ಟ್ ಸರಣಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿತ್ತು. ಇನ್ನು ಇತ್ತೀಚೆಗೆ ನಡೆದಿದ್ದ ನ್ಯೂಜಿಲೆಂಡ್ ತವರು ನೆಲದ ಟೆಸ್ಟ್ ಸರಣಿಯಲ್ಲೂ ಲಂಕಾ ಉತ್ತಮ ಪ್ರದರ್ಶನ ತೋರಿ ಸರಣಿ ಗೆದ್ದುಕೊಂಡಿತ್ತು.
Sri Lanka Cricket wishes to announce the appointment of Sanath Jayasuriya as the head coach of the national team.
— Sri Lanka Cricket 🇱🇰 (@OfficialSLC) October 7, 2024
The Executive Committee of Sri Lanka Cricket made this decision taking into consideration the team’s good performances in the recent tours against India, England,… pic.twitter.com/IkvAIJgqio
ಕಳೆದ ವರ್ಷ 2023ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಇಡೀ ವಿಶ್ವಕಪ್‌ನಲ್ಲಿ 9 ಪಂದ್ಯಗಳನ್ನು ಆಡಿದ್ದ ತಂಡವು 7 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಾದ ನಂತರ ಜಯಸೂರ್ಯ ಅವರನ್ನು ತಂಡದಲ್ಲಿ ಕ್ರಿಕೆಟ್ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು. ಇದಾದ ಬಳಿಕ ಹಂಗಾಮಿ ಕೋಚ್ ನೇಮಕವಾಗಿದ್ದು, ಇದೀಗ ಅವರಿಗೆ ಮುಖ್ಯ ಕೋಚ್ ಜವಾಬ್ದಾರಿ ನೀಡಲಾಗಿದೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದ್ದು ಸನತ್ ಜಯಸೂರ್ಯ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿತು. ಶ್ರೀಲಂಕಾದ ಕಾರ್ಯಕಾರಿ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಇವರ ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2026 ರವರೆಗೆ ಕೋಚ್ ಆಗಿ ಮುಂದುವರೆಯಲಿದ್ದಾರೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲೇ ಹೊಸ ದಾಖಲೆ ಬರೆದ ವೇಗಿ ಮಯಾಂಕ್ ಯಾದವ್ - Mayank Yadav Record