ನವದೆಹಲಿ: ಉದಾತ್ತ ವ್ಯಕ್ತಿ, ಕೊಡುಗೈ ದಾನಿ ಎಂದೇ ಕರೆಸಿಕೊಳ್ಳುವ ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿ ಹರದಾಡುತ್ತಿದೆ. ಇದರ ಬೆನ್ನಲ್ಲೇ ಸ್ವತಃ ರತನ್ ಟಾಟಾ ಅವರೇ "ತಾವು ಆರೋಗ್ಯವಾಗಿದ್ದಾಗಿ" ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ಉದ್ಯಮಿಯ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ರಕ್ತದೊತ್ತಡ ಗಣನೀಯ ಕುಸಿತ ಕಂಡು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ, ಇದು ಕೇವಲ ವದಂತಿ ಎಂದು ಟಾಟಾ ಅವರೇ ತಿಳಿಸಿದ್ದಾರೆ.
Thank you for thinking of me 🤍 pic.twitter.com/MICi6zVH99
— Ratan N. Tata (@RNTata2000) October 7, 2024
'ನಾನು ಆರೋಗ್ಯವಾಗಿದ್ದೇನೆ': ತಮ್ಮ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಅರಿತ ರತನ್ ಟಾಟಾ ಅವರು, ಆ ವೇದಿಕೆಯ ಮೂಲಕವೇ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ತಾವು ಆರೋಗ್ಯವಾಗಿದ್ದಾಗಿ, ವಯೋಸಹಜ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದೇನೆ. ಯಾವುದೇ ಆತಂಕವಿಲ್ಲ" ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ಖಾತೆ, ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಅವರು, "ಮುಂಬೈ ಆಸ್ಪತ್ರೆಯಲ್ಲಿ ತಮ್ಮನ್ನು ದಾಖಲು ಮಾಡಿದ್ದಾರೆ ಎಂಬುದು ಕೇವಲ ವದಂತಿ. ಇದೆಲ್ಲವೂ ನಿರಾಧಾರ. ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಯಾವುದೇ ಆತಂಕ ಬೇಡ. ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ" ಎಂದು ಸಾಮಾಜಿಕ ಮಾಧ್ಯಮದ ನೆಟ್ಟಿಗರು ಮತ್ತು ಮಾಧ್ಯಮಗಳಲ್ಲಿ 86 ವರ್ಷ ವಯಸ್ಸಿನ ಉದ್ಯಮಿ ವಿನಂತಿಸಿಕೊಂಡಿದ್ದಾರೆ.
ಯಶಸ್ವಿ ಉದ್ಯಮ, ಕೊಡುಗೈ ದಾನಿ: ರತನ್ ಟಾಟಾ ಅವರು ಮಾರ್ಚ್ 1991ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ 2012ರಂದು ನಿವೃತ್ತರಾದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯವು ಬಹುಪಟ್ಟು ಬೆಳೆಯಿತು. ಅಧಿಕಾರ ವಹಿಸಿಕೊಂಡ ವೇಳೆ ಕಂಪನಿಯ ಒಟ್ಟು ಮೌಲ್ಯ 10 ಸಾವಿರ ಕೋಟಿಯಷ್ಟಿತ್ತು 10 ವರ್ಷಗಳ ಅವಧಿಯಲ್ಲಿ ಕಂಪನಿಯ ನಿವ್ವಳ ಮೌಲ್ಯ 100 ಬಿಲಿಯನ್ ದಾಟಿತ್ತು. ಇದು ಟಾಟಾರ ಉದ್ಯಮ ಹಿಡಿತಕ್ಕೆ ಸಾಕ್ಷಿಯಾಗಿತ್ತು.
2000ರಲ್ಲಿ ಆರಂಭೀಸಿದ ಟಾಟಾ ಟೀಯ ಟೆಟ್ಲಾ ಪ್ಯಾಕ್ನಿಂದ 450 ಮಿಲಿಯನ್ ಅಮೆರಿಕನ್ ಡಾಲರ್ ಹಣ ಗಳಿಕೆ ಮಾಡಿದರೆ, 2007 ರಲ್ಲಿ ಟಾಟಾ ಸ್ಟೀಲ್‌ನ ಉಕ್ಕಿನ ತಯಾರಿಕೆಯಿಂದ 6.2 ಬಿಲಿಯನ್, 2008ರಲ್ಲಿ ಲ್ಯಾಂಡ್‌ಮಾರ್ಕ್ ಜಾಗ್ವಾರ್ ಲ್ಯಾಂಡ್‌ರೋವರ್‌ನಿಂದ ಟಾಟಾ ಮೋಟಾರ್ಸ್ ಕಂಪನಿಯು 2.3 ಬಿಲಿಯನ್ ವಹಿವಾಟು ಕಂಡಿತು.
ಇದನ್ನೂ ಓದಿ: ಶಕ್ತಿದೇವತೆ ದುರ್ಗೆಯ ಕುರಿತು ವಿಶೇಷ ಹಾಡು ಬರೆದ ಪ್ರಧಾನಿ ಮೋದಿ