ನವದೆಹಲಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಐಪಿಎಲ್‌ನ 16 ಸೀಸನ್‌ಗಳಲ್ಲಿ ಪುರುಷರ ತಂಡದ ಅಸಾಧ್ಯ ಕನಸನ್ನು ಎರಡನೇ ಸೀಸನ್‌ನಲ್ಲಿಯೇ ಸಾಧಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL 2024) ಫೈನಲ್‌ನಲ್ಲಿ ದೆಹಲಿಯನ್ನು ಸೋಲಿಸಿ ಆರ್‌ಸಿಬಿ ತಂಡ ಟ್ರೋಫಿಯನ್ನು ಹೆಮ್ಮೆಯಿಂದ ಎತ್ತಿಹಿಡಿದಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ಈ ಗೆಲುವು ಮತ್ತು ಕಪ್ ತಂಡದ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿಗೆ ಅರ್ಪಣೆ ಎಂದು ಹೇಳಿದ್ದಾರೆ.
ವಿಡಿಯೋ ಕರೆಯಲ್ಲಿ ವಿರಾಟ್: ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗಿರುವ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದರು. ಎಲ್ಲರಿಗೂ ವಿಶ್ ಮಾಡುವ ವಿಡಿಯೋ ವೈರಲ್ ಆಗಿದೆ. ಅವರು ತಮ್ಮ ಇನ್‌ಸ್ಟಾದಲ್ಲಿ 'ಸೂಪರ್ ವುಮೆನ್' ಎಂದು ತಂಡದ ಫೋಟೋಗೆ ಶೀರ್ಷಿಕೆಯನ್ನು ಬರೆದಿದ್ದಾರೆ.
ತಂಡಕ್ಕೆ ಶುಭ ಕೋರಿದ ಮಲ್ಯ:ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಕೂಡ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳು. WPL ಗೆಲುವು ಅದ್ಭುತವಾಗಿದೆ. ಪುರುಷರ ತಂಡವೂ ಐಪಿಎಲ್ ಗೆದ್ದರೆ ಡಬಲ್ ಖುಷಿ ಸಿಗಲಿದೆ. ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳಿಗೆ ಕಪ್ ಅರ್ಪಣೆ: ಈ ಪಂದ್ಯ ಗೆದ್ದಿದ್ದೇವೆ ಎಂಬ ಸತ್ಯವನ್ನು ನಾವು ಇನ್ನೂ ನಂಬಲು ಸಾಧ್ಯವಿಲ್ಲ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಚಾಂಪಿಯನ್ ಆಗಿದ್ದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ಆದರೆ ಒಂದು ವಿಷಯ ಹೇಳುತ್ತೇನೆ. ನಮ್ಮ ಆಟದ ಬಗ್ಗೆ ಹೆಮ್ಮೆ ಇದೆ. ಹಲವು ಏಳುಬೀಳುಗಳನ್ನು ಎದುರಿಸಿ ಇಲ್ಲಿಗೆ ಬಂದಿದ್ದೇವೆ. ಹಿಂದಿನದ್ದನ್ನು ಮರೆತು, ನಾವು ಈಗ ವಿಜಯಶಾಲಿಯಾಗಿದ್ದೇವೆ. ಅದೊಂದು ಅದ್ಭುತವಾದ ಭಾವನೆ. ನಮಗೆ ಲೀಗ್ ಹಂತದ ಕೊನೆಯ ಪಂದ್ಯ ಕ್ವಾರ್ಟರ್ ಫೈನಲ್ ಇದ್ದಂತೆ ಈ ಪಂದ್ಯವೂ ಆಗಿದೆ. ನಾವು ಅದನ್ನು ಜಯಿಸಿದ್ದೇವೆ. ನಂತರ ನಾವು ಸೆಮಿಸ್ ಮತ್ತು ಫೈನಲ್‌ನಲ್ಲಿ ಗೆದ್ದಿದ್ದೇವೆ ಎಂದು ನಾಯಕಿ ಸ್ಮೃತಿ ಮಂಧಾನ ಸಂತಸ ಹಂಚಿಕೊಂಡರು.
ಇಂತಹ ದೊಡ್ಡ ಟೂರ್ನಿಗಳಲ್ಲಿ ಸೂಕ್ತ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದೇವೆ. ಕಳೆದ ವರ್ಷದಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಆಡಳಿತ ಮಂಡಳಿ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ತಂಡವಾಗಿ ನಾವು RCB ಗಾಗಿ ಪ್ರಶಸ್ತಿ ಗೆದ್ದಿದ್ದೇವೆ. ಆರ್‌ಸಿಬಿ ಅಭಿಮಾನಿಗಳಿಂದ ಹಲವು ಸಂದೇಶಗಳು ಬಂದಿವೆ. 'ಈ ಸಲ ಕಪ್ ನಮ್ದೆ' ಎಂಬುದು ಪ್ರತಿ ಬಾರಿಯೂ ಕೇಳಿಬರುವ ಘೋಷಣೆ. ಈಗ ನಾವು ಅದನ್ನು ನಿಜವೆಂದು ಸಾಬೀತುಪಡಿಸಿದ್ದೇವೆ. ಈ ಗೆಲುವು ಮತ್ತು ಕಪ್ ತಂಡದ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿಗೆ ಅರ್ಪಣೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.
ಓದಿ:'ಈ ಸಲ ಕಪ್ ನಮ್ದು' ಎಂದ ಸ್ಮೃತಿ ಮಂಧಾನ; ಆರ್‌ಸಿಬಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ