World's Richest Hockey Players: ಹಾಕಿ ಆಟದ ಹೆಸರು ಕೇಳದವರಿರಲ್ಲ. ಇತ್ತೀಚಿಗೆ ಈ ಕ್ರೀಡೆ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ಭಾರತದಲ್ಲಂತೂ ರಾಷ್ಟ್ರೀಯ ಕ್ರೀಡೆಯಾಗಿದೆ. ಆದ್ರೆ ಇದನ್ನು ಅಧಿಕೃತವಾಗಿ ಮಾನ್ಯ ಮಾಡಿಲ್ಲ ಅಷ್ಟೇ.
ಹಾಕಿಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವುದು ಫೀಲ್ಡ್ ಹಾಕಿ ಮತ್ತು ಐಸ್ ಹಾಕಿ. ಫೀಲ್ಡ್ ಹಾಕಿ ಬಹುತೇಕ ದೇಶಗಳಲ್ಲಿದ್ದರೆ, ಐಸ್ ಹಾಕಿ ಕೆನಡಾ, ಯುಎಸ್ಎ, ಯೂರೋಪ್ ರಾಷ್ಟ್ರಗಳಲ್ಲಿದೆ.
ಆದ್ರೆ ನಿಮಗೆ ಗೊತ್ತೇ? ಫೀಲ್ಡ್ ಹಾಕಿ ಆಟಗಾರರಿಗಿಂತ ಐಸ್ ಹಾಕಿ ಆಟಗಾರರೇ ಅತ್ಯಂತ ಶ್ರೀಮಂತರು. ಹಾಗಾದ್ರೆ, ಬನ್ನಿ ಅಂಥ ಐವರು ಶ್ರೀಮಂತ ಹಾಕಿ ಆಟಗಾರರು ಕುರಿತು ತಿಳಿಯೋಣ.
5. ಪಾವೆಲ್ ಬ್ಯೂರ್ (Pavel Bure):ಈತರಷ್ಯಾದ ಐಸ್ ಹಾಕಿ ಆಟಗಾರ. ತನ್ನ ಕೌಶಲ ಮತ್ತು ವೇಗದ ಆಟಕ್ಕೆ ಖ್ಯಾತಿ ಪಡೆದವರು. ರಷ್ಯಾದ ರಾಕೆಟ್ ಎಂದೂ ಇವರನ್ನು ಕರೆಯಲಾಗುತ್ತದೆ. ಹಾಕಿ ವೃತ್ತಿಜೀವನದಲ್ಲಿ 437ಕ್ಕೂ ಹೆಚ್ಚಿನ ಗೋಲ್ ಗಳಿಸಿದ್ದಾರೆ. ನವೆಂಬರ್ 1, 2005ರಂದು ಬ್ಯೂರ್ ರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಪಡೆದರು. ಸದ್ಯ ಇವರ ನಿವ್ವಳ ಆಸ್ತಿ ಮೌಲ್ಯ $70 ಮಿಲಿಯನ್ ಡಾಲರ್ (600 ಕೋಟಿ ರೂಪಾಯಿ).
4. ಸಿಡ್ನಿ ಕ್ರಾಸ್ಬಿ (Sidney Crosby): ಕೆನಡಾದ ಐಸ್ ಹಾಕಿ ಆಟಗಾರ. ನಾಯಕತ್ವದ ಜೊತೆಗೆ ಹಾಕಿಯಲ್ಲಿ ಮಾಡಿರುವ ಸಾಧನೆಗಳಿಂದಲೇ ಅತ್ಯಂತ ಜನಪ್ರಿಯರು. ಸಿಡ್ ದಿ ಕಿಡ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಇವರು ಒಟ್ಟು ₹75 ಮಿಲಯನ್ ಡಾಲರ್ (643 ಕೋಟಿ ರೂ) ಆಸ್ತಿಗೆ ಒಡೆಯ.
3. ಅಲೆಕ್ಸಾಂಡರ್ ಒವೆಚ್ಕಿನ್ (Alexander Ovechkin):ಅಲೆಕ್ಸಾಂಡರ್ ಮಿಖೈಲೋವಿಚ್ ಅಥವಾ ಒವೆಚ್ಕಿನ್ ಖ್ಯಾತಿಯ ಈತ ರಷ್ಯಾದ ವೃತ್ತಿಪರ ಐಸ್ ಹಾಕಿ ಆಟಗಾರ. ಎಡ ವಿಂಗರ್ ಆಗಿರುವ ಇವರು ನ್ಯಾಷನಲ್ ಹಾಕಿ ಲೀಗ್‌ನಲ್ಲಿ ವಾಷಿಂಗ್ಟನ್ ಕ್ಯಾಪಿಟಲ್ಸ್ ತಂಡದ ನಾಯಕ. 'ದಿ ಗ್ರೇಟ್ 8' ಎಂಬ ಅಡ್ಡ ಹೆಸರಿನಿಂದಲೂ ಇವರನ್ನು ಕರೆಯಲಾಗುತ್ತದೆ. ಒವೆಚ್ಕಿನ್ ಸಾರ್ವಕಾಲಿಕ ಶ್ರೇಷ್ಠ ಐಸ್ ಹಾಕಿ ಆಟಗಾರರಲ್ಲಿ ಒಬ್ಬರು. ಇವರ ಒಟ್ಟು ನಿವ್ವಳ ಆಸ್ತಿ ಮೌಲ್ಯ $80 ಮಿಲಯನ್ ಡಾಲರ್ (686 ಕೋಟಿ ರೂಪಾಯಿ).
2. ಮಾರಿಯೋ ಲೆಮಿಯಕ್ಸ್ (Mario Lemieux): ಕೆನಡಾದ ಮಾಜಿ ಐಸ್ ಹಾಕಿ ಆಟಗಾರ. ಕೆನಡಿಯನ್ ಹಾಕಿ ಐಕಾನ್ ಎಂದು ಖ್ಯಾತಿ ಗಳಿಸಿದ್ದಾರೆ. ಮಾರಿಯೋ ತನ್ನ 17 ವರ್ಷಗಳ ವೃತ್ತಿಜೀವನದಲ್ಲಿ ಪಿಟ್ಸ್ ಬರ್ಗ್ ಪೆಂಗ್ವೀನ್ ತಂಡಕ್ಕೆ ಆಡಿದ್ದರು. ಈ ವೇಳೆ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ $200 ಮಿಲಿಯನ್ ಡಾಲರ್ (1 ಸಾವಿರ ಕೋಟಿ ರೂಪಾಯಿ).
1. ವೇಯ್ನ್ ಗ್ರೆಟ್ಜ್ಕಿ (Wayne Gretzky): ಗ್ರೇಟ್ ಒನ್ ಎಂದು ಕರೆಯಲ್ಪಡುವ ಕೆನಡಾದ ವೇಯ್ನ್ ಗ್ರೆಟ್ಜ್ಕಿಯನ್ನು GOAT Of NHL ಎಂದು ಕರೆಯಲಾಗುತ್ತದೆ. ಎರಡು ದಶಕಗಳ ಕಾಲ ವೃತ್ತಿಪರವಾಗಿ ಆಡಿದ ಇವರು 1999ರಲ್ಲಿ ನಿವೃತ್ತಿ ಪಡೆದರು. ಐಸ್ ಹಾಕಿಯ ಪ್ರತಿಷ್ಥಿತ ಟ್ರೋಫಿಯಾಗಿರುವ ಸ್ಟ್ಯಾನ್ಲಿ ಕಪ್ ಅನ್ನು 4 ಬಾರಿ (1984, 1985, 1987, 1988) ಗೆದ್ದುಕೊಂಡಿದ್ದರು. ಇವರ ನಿವ್ವಳ ಆಸ್ತಿ ಮೌಲ್ಯ 2 ಸಾವಿರ ಕೋಟಿ ರೂಪಾಯಿ.
ಇದನ್ನೂ ಓದಿ:ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳಿವೆ, ಅವರು ಹೆಚ್ಚು ದೇಶಿ ಕ್ರಿಕೆಟ್ ಆಡಬೇಕು: ಸುನಿಲ್ ಗವಾಸ್ಕರ್