ಭಾರತದ ಸುಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಅವರೀಗ ಭಾರಿ ಸುದ್ದಿಯಲ್ಲಿದ್ದಾರೆ. ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಕಲಾವಿದರಿಗೆ ಇಮೇಲ್ ಮೂಲಕ ಬೆದರಿಕೆ ಬಂದಿವೆ. ವರದಿಗಳ ಪ್ರಕಾರ, ಕಪಿಲ್ ಶರ್ಮಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ಕಲಾವಿದರಲ್ಲೊಬ್ಬರು . ಅವರು ಒಂದು ಎಪಿಸೋಡ್ಗೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಪ್ರೇಕ್ಷಕರ ಮೊಗದಲ್ಲಿ ನಗು ತರಿಸುವ ಕಪಿಲ್ ಶರ್ಮಾ ಅವರ ನೆಟ್ ವರ್ತ್ ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಕಪಿಲ್ ಶರ್ಮಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿಂದಿ ಹಾಸ್ಯನಟ. 'ದಿ ಕಪಿಲ್ ಶರ್ಮಾ ಶೋ' ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಕಪಿಲ್ ಶರ್ಮಾ ಅವರಿಗೀಗ ವಿಶೇಷ ಪರಿಚಯದ ಅಗತ್ಯವಿಲ್ಲ. ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದಾರೆ.
ಓಟಿಟಿಯಲ್ಲಿ ಮೊದಲ ಸೀಸನ್ ಸಾಕಷ್ಟು ಮೆಚ್ಚುಗೆ ಗಳಿಸಿತು: ವರದಿಗಳ ಪ್ರಕಾರ, ಕಪಿಲ್ ಶರ್ಮಾ ಪ್ರತೀ ಸಂಚಿಕೆಗೆ 5 ಕೋಟಿ ರೂಪಾಯಿ ಪಡೆಯುತ್ತಾರೆ. ಟಿವಿಯಲ್ಲಿ ಸದ್ದು ಮಾಡಿದ ನಂತರ, ಕಪಿಲ್ ಶರ್ಮಾ ತಮ್ಮ ಹೊಸ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಅನ್ನು ಒಟಿಟಿಯಲ್ಲಿ ತಂದರು. 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನ ಮೊದಲ ಸೀಸನ್ ಸಾಕಷ್ಟು ಮೆಚ್ಚುಗೆ ಗಳಿಸಿತು. ಕಾರ್ಯಕ್ರಮದ ಎರಡನೇ ಸೀಸನ್ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಕಾರ್ಯಕ್ರಮದ ನಂತರ, ಕಪಿಲ್ ಶರ್ಮಾ ಅವರ ನೆಟ್ ವರ್ತ್ ಗಮನಾರ್ಹವಾಗಿ ಹೆಚ್ಚಾಗಿದೆ.
ಐಎಮ್‌ಡಿಬಿ ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನ 2 ಸೀಸನ್‌ಗಳ ನಂತರ, ಕಪಿಲ್ ಶರ್ಮಾ ಅವರ ನೆಟ್ ವರ್ತ್ 300 ಕೋಟಿ ರೂಪಾಯಿ. ಇದಾದ ನಂತರ, ಕಪಿಲ್ ಶರ್ಮಾ ಹಿಂದಿ ಕಿರುತೆರೆಯಲ್ಲಿ ಅತ್ಯಂತ ಶ್ರೀಮಂತ ಟಿವಿ ನಟರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ಹಾಸ್ಯನಟರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ದಕ್ಷಿಣ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಬ್ರಹ್ಮಾನಂದಂ ಇದ್ದಾರೆ. ಇವರ ಆಸ್ತಿ 490 ಕೋಟಿ ರೂಪಾಯಿ.
ಇದನ್ನೂ ಓದಿ: ಸೈಫ್ ಅಲಿ ಖಾನ್ಗೆ ಚಾಕು ಇರಿತ - ನಿಜವೇ ಅಥವಾ ನಟನೆಯೇ?: ಸಚಿವ ನಿತೇಶ್ ರಾಣೆ
500 ಸಂಬಳದಿಂದ ವೃತ್ತಿ ಜೀವನ ಶುರು- ಈಗ? : ಕಪಿಲ್ ಶರ್ಮಾ ತಮ್ಮ ವೃತ್ತಿಜೀವನವನ್ನು 500 ರೂಪಾಯಿ ಸಂಬಳದೊಂದಿಗೆ ಶುರು ಮಾಡಿದ್ರು. ಅವರು 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ 3' ಗೆಲುವಿನೊಂದಿಗೆ ಪ್ರೇಕ್ಷಕರ ಮನ ಗೆದ್ರು. 'ಕಾಮಿಡಿ ಸರ್ಕಸ್' ನಂತಹ ಕಾಮಿಡಿ ಶೋ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ರು. ನಂತರ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಕಾರ್ಯಕ್ರಮದಲ್ಲಿ ಕಾಣಿಕೊಂಡರು. ಸದ್ಯ ಕಪಿಲ್ ಶರ್ಮಾ ಶೋನ ಸಾರಥಿ ಎಂದೇ ಜನಪ್ರಿಯರು. ಹೀಗೆ ಭಾರತೀಯರನ್ನು ನರಂಜಿಸುವ ಕೆಲಸ ಮುಂದುವರಿಸಿದ್ದು, ಭಾರತದ ಅತ್ಯಂತ ಜನಪ್ರಿಯ ಹಾಸ್ಯನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಇಲ್ಲಿಗೆ ಬಂದಿರೋದು ನಾವೊಬ್ರೆ, ಆಡೋದು ನಾವೊಬ್ರೆ, ಗೆಲ್ಲೋದು ಒಬ್ರೆ': ಬಿಗ್ ಬಾಸ್ನಲ್ಲಿ ತೀರ್ಪೊಂದೇ ಬಾಕಿ
ಕಿರುತೆರೆ ವೃತ್ತಿಜೀವನದ ಹೊರತಾಗಿಯೂ, ಕಪಿಲ್ ಶರ್ಮಾ ಸಿನಿಮಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗಿಳಿದರು. ಅವರು 'ಕಿಸ್ ಕಿಸ್ ಕೋ ಪ್ಯಾರ್ ಕರೂನ್', 'ಫಿರಂಗಿ', 'ಜ್ವಿಗಾಟೊ' ಮತ್ತು 'ಕ್ರ್ಯೂ' ಚಿತ್ರಗಳಲ್ಲಿ ನಟಿಸಿದ್ದಾರೆ.