ETV Bharat / sports

ಐಪಿಎಲ್​ಗೂ ಮುನ್ನವೇ RCBಗೆ ಬಿಗ್​ ಶಾಕ್​​; ಸ್ಟಾರ್​ ಆಟಗಾರರ ಕಳಪೆ ಪ್ರದರ್ಶನದಿಂದ ಹೆಚ್ಚಿದ ಆತಂಕ - RCB PLAYERS FLOP

18ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನವೇ ಆರ್​ಸಿಬಿಯ ಸ್ಟಾರ್​ ಆಟಗಾರರು ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದಾರೆ.

IPL 2025  RCB Squad  INDIA VS ENGLAND 1ST T20  PHIL SALT LIVINGSTONE BETHELL
RCB (IANS)
author img

By ETV Bharat Sports Team

Published : Jan 23, 2025, 9:58 AM IST

18ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ (IPL)ಗೆ​ ದಿನಗಣ ಆರಂಭವಾಗಿದ್ದು ಮಾರ್ಚ್​ 23ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭವಾಗಲಿದೆ. ಆದರೆ ಐಪಿಎಲ್​​ ಆರಂಭಕ್ಕೂ ಮುನ್ನವೇ ಆರ್​ಸಿಬಿಗೆ ಟೆನ್ಶನ್​ ಶುರುವಾಗಿದೆ.

ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್​ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್​ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್​ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್​ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. 8 ವಿದೇಶಿ ಆಟಗಾರರು ಸೇರಿ ಒಟ್ಟು 22 ಪ್ಲೇಯರ್ಸ್​ ಆರ್​ಸಿಬಿ ತಂಡದಲ್ಲಿದ್ದಾರೆ. ಆದರೆ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿದವರ ಪೈಕಿ ಮೂವರು ಸ್ಟಾರ್​ ಆಟಗಾರರು ಇತ್ತೀಚಿನ ಟಿ20 ಪಂದ್ಯಗಳಲ್ಲಿ ಫ್ಲಾಪ್​ ಆಗಿದ್ದು, ಆರ್​ಸಿಬಿಗರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಹೌದು, ಆರ್​ಸಿಬಿಯ ಸ್ಟಾರ್​ ಆಟಗಾರರಾದ ಫಿಲ್​ ಸಾಲ್ಟ್​, ಜಾಕೋಬ್​ ಬೆಥೆಲ್​, ಲಿಯಾಮ್​​ ಲಿವಿಂಗ್​ಸ್ಟನ್​ ಇತ್ತೀಚಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಇಂಗ್ಲೆಂಡ್​ನ ಯುವ ಬ್ಯಾಟರ್​ ಜಾಕೊಬ್​ ಬೆಥೆಲ್​ ಸ್ಫೋಟಕ ಬ್ಯಾಟಿಂಗ್​ ಮೂಲಕವೇ ಖ್ಯಾತಿ ಪಡೆದಿದ್ದಾರೆ. ಆದರೆ ಕಳೆದ 10 ಟಿ20 ಇನ್ನಿಂಗ್ಸ್​ಗಳಲ್ಲಿ ಅವರ ಬ್ಯಾಟಿಂಗ್​ನಿಂದ ಕೇವಲ ಒಂದೇ ಒಂದು ಅರ್ಧಶತಕ ಮಾತ್ರ ಬಂದಿದೆ.

ಭಾರತ ವಿರುದ್ಧದ ಟಿ20 ಸರಣಿಗೂ ಮೊದಲು ಬಿಗ್​ ಬ್ಯಾಶ್​ ಲೀಗ್​ನಲ್ಲಿ ಮೇಲ್ಬೋರ್ನ್​ ರೆನಿಗೆಡ್ಸ್​ ತಂಡದ ಪರ ಬೆಥೆಲ್​ 9 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್​ನಿಂದ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಾಗಿದೆ. ಹುರಿಕೇನ್ಸ್​​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 89 ರನ್​ ಕಲೆಹಾಕಿದ್ದರು. ಇದು ಬಿಟ್ಟಿರೆ ಪರ್ತ್​ ಸ್ಕಾಚರ್ಸ್​ ವಿರುದ್ಧ 49ರನ್​ ಬಾರಿಸಿದ್ದರು. ಉಳಿದ 7 ಪಂದ್ಯಗಳಲ್ಲಿ 7, 1, 2, 21, 2, 30, 3 ರನ್​ ಮಾತ್ರ ಕಲೆ ಹಾಕಿದ್ದಾರೆ.

ಫಿಲ್ ಸಾಲ್ಟ್​ : ಇಂಗ್ಲೆಂಡ್​​ನ ಸ್ಟಾರ್​ ಆರಂಭಿಕ ಬ್ಯಾಟರ್​ ಎನಿಸಿಕೊಂಡಿರುವ ಸಾಲ್ಟ್​ ಕೂಡ ಕಳೆದ 3 ಪಂದ್ಯಗಳಲ್ಲಿ ಕೇವಲ 4 ರನ್​ ಕಲೆಹಾಕಿದ್ದಾರೆ. ನಿನ್ನೆ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಶೂನ್ಯಕ್ಕೆ ಪೆವಿಲಿಯನ್​ ಸೇರಿದ್ದಾರೆ. ಲಿವಿಂಗ್​ಸ್ಟನ್ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಒಟ್ಟು 49 ರನ್​ ಮಾತ್ರ ಕಲೆ ಹಾಕಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.

ಮತ್ತೊಂದೆಡೆ ಆರ್​ಸಿಬಿ ತಂಡದಿಂದ ಕೈಬಿಟ್ಟಿರುವ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸ್​ ವೆಲ್​ ಬಿಗ್​ ಬ್ಯಾಶ್​ ಲೀಗ್​ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

0, 0, 7: ಈ ಬಾರಿಯ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿರುವ ಮೂವರು ಸ್ಟಾರ್​ ಆಟಗಾರರಾದ ಜಾಕೊಬ್ ಬೆಥೆಲ್​, ಲಿವಿಂಗ್​ಸ್ಟನ್​, ಫಿಲ್​ ಸಾಲ್ಟ್​​ ಭಾರತ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದರು. ಆರಂಭಿಕರಾಗಿ ಬಂದ ಫಿಲ್​ ಸಾಲ್ಟ್​ ಮತ್ತು ಲಿವಿಂಗ್​ಸ್ಟನ್​ ಶೂನ್ಯಕ್ಕೆ ಪೆವಿಲಿಯನ್​ ಸೇರಿದರೆ, ಜಾಕೊಬ್​ ಬೆಥೆಲ್​ 7 ರನ್​ಗಳಿಗೆ ತಮ್ಮ ಇನ್ನಿಂಗ್ಸ್​ ಮುಕ್ತಾಯಗೊಳಿಸಿದರು.

ಇದನ್ನೂ ಓದಿ: ಕನ್ನಡಿಗನ ಕಮಾಲ್​; ಇಂಗ್ಲೆಂಡ್​ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.