ETV Bharat / lifestyle

ಹೋಟೆಲ್ ಸ್ಟೈಲ್​ನ ಮಂಗೋಲಿಯನ್ ಚಿಕನ್ ರೆಡಿ ಮಾಡೋದು ಹೇಗೆ?: ಟೇಸ್ಟ್ ಕೂಡ ಸೂಪರ್​! - MONGOLIAN CHICKEN RECIPE

Mongolian Chicken Recipe: ಮನೆಯಲ್ಲೇ ಸೂಪರ್ ರುಚಿಯ ಮಂಗೋಲಿಯನ್ ಚಿಕನ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಈ ಸ್ಟೋರಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

CHICKEN RECIPE  HOTEL STYLE MONGOLIAN CHICKEN  HOW TO COOK MONGOLIAN CHICKEN  EASY AND TASTY CHICKEN CURRY
ಮಂಗೋಲಿಯನ್ ಚಿಕನ್ ರೆಸಿಪಿ (ETV Bharat)
author img

By ETV Bharat Lifestyle Team

Published : Jan 23, 2025, 4:29 PM IST

Mongolian Chicken Recipe: ವಿಕೆಂಡ್​ನಲ್ಲಿ ಅನೇಕ ಜನರ ಮನೆಗಳಲ್ಲಿ ಮಾಂಸಾಹಾರಿ ಭಕ್ಷ್ಯಗಳು ಇದ್ದೇ ಇರುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ಚಿಕನ್​ ಅಡುಗೆಯನ್ನು ಸೇವಿಸಲು ಬಯಸುತ್ತಾರೆ. ನಿಮಗೆ ಪದೇ ಪದೆ ಚಿಕನ್ ಕರಿ & ಬಿರಿಯಾನಿ ಸೇವಿಸಿ ಬೇಸರ ಆಗಿರಬಹುದು. ಹಾಗಾದರೆ, ಮುಂಬರುವ ಭಾನುವಾರ ಸ್ವಲ್ಪ ವಿಭಿನ್ನವಾದ ನೂತನ ಅಡುಗೆ ಟ್ರೈ ಮಾಡಲು ನೀವು ಬಯಸುತ್ತೀರಾ? ನಾವು ನಿಮಗಾಗಿ ಸೂಪರ್​ ರುಚಿಯ ನಾನ್​ವೆಜ್​ ಅಡುಗೆಯೊಂದನ್ನು ತಂದಿದ್ದೇವೆ. ಅದುವೇ, ಹೋಟೆಲ್ ಸ್ಟೈಲ್​ನ 'ಮಂಗೋಲಿಯನ್ ಚಿಕನ್'.

ಈ ರೆಸಿಪಿಯು ಸಾಮಾನ್ಯವಾಗಿರುವ ಚಿಕನ್​ ಕರಿಯನ್ನು ಮೀರಿಸುವಂತಹ ರುಚಿ ಇದು ಒಳಗೊಂಡಿದೆ. ಒಮ್ಮೆ ಸೇವಿಸಿದರೆ ಮತ್ತೆ ಮತ್ತೆ ತಿನ್ನಬೇಕೆನುಸುತ್ತದೆ. ಮಂಗೋಲಿಯನ್ ಚಿಕನ್ ತುಂಬಾ ಸುಲಭವಾಗಿ ತಯಾರಿಸಬಹುದು. ಈ ಅಡುಗೆಗೆ ಬೇಕಾಗುವ ಪದಾರ್ಥಗಳೇನು? ರೆಡಿ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.

ಮಂಗೋಲಿಯನ್ ಚಿಕನ್​ಗೆ ಬೇಕಾಗಿರುವ ಪದಾರ್ಥಗಳು:

  • ಚಿಕನ್- ಅರ್ಧ ಕೆಜಿ (ಬೋನ್​ಲೆಸ್​)
  • ಕಾರ್ನ್​ಫ್ಲೋರ್ ಹಿಟ್ಟು - ಅರ್ಧ ಕಪ್
  • ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್​
  • ಒಣಮೆಣಸಿನಕಾಯಿ - 3
  • ಉಪ್ಪು - ರುಚಿಗೆ ಬೇಕಾಗುವಷ್ಟು
  • ಈರುಳ್ಳಿ - 1
  • ಮೆಣಸಿನ ಪುಡಿ - ಟೀಸ್ಪೂನ್​
  • ಸೋಯಾ ಸಾಸ್ - 2 ಟೀಸ್ಪೂನ್​
  • ಈರುಳ್ಳಿ ಸೊಪ್ಪು- 2
  • ಹೊಯ್ಸಿನ್ ಸಾಸ್ - 2 ಟೀಸ್ಪೂನ್​
  • ಆಯಸ್ಟರ್ ಸಾಸ್ - 1 ಟೀಸ್ಪೂನ್​
  • ಸಕ್ಕರೆ - ಟೀಸ್ಪೂನ್​
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

ಮಂಗೋಲಿಯನ್ ಚಿಕನ್ ಸಿದ್ಧಪಡಿಸುವ ವಿಧಾನ:

  • ಮೊದಲು ಚಿಕನ್​ ತೊಳೆಯಬೇಕು. ಚಿಕ್ಕ ಚಿಕ್ಕ ಪೀಸ್​ಗಳಾಗಿ ಕಟ್​ ಮಾಡಬೇಕಾಗುತ್ತದೆ. ಈರುಳ್ಳಿ ಹಾಗೂ ಈರುಳ್ಳಿ ಸೊಪ್ಪುನ್ನು ಕಟ್​ ಮಾಡಿ ಇಡಬೇಕಾಗುತ್ತದೆ.
  • ಮಿಕ್ಸಿಂಗ್ ಬೌಲ್​ ಒಂದರಲ್ಲಿ ಚಿಕನ್, ಕಾರ್ನ್‌ಫ್ಲೋರ್​, ಮೆಣಸಿನ ಪುಡಿ ಹಾಗೂ ಉಪ್ಪನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡಬೇಕಾಗುತ್ತದೆ. ಇದನ್ನು ಅರ್ಧ ಗಂಟೆವರೆಗೆ ಹೀಗೆ ಬಿಡಬೇಕಾಗುತ್ತದೆ.
  • ಬಳಿಕ ಒಲೆಯ ಮೇಲೆ ಪ್ಯಾನ್ ಇಡಿ, ಅದರೊಳಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ, ಮ್ಯಾರಿನೇಟ್ ಮಾಡಿದ ಚಿಕನ್ ಪೀಸ್​ಗಳನ್ನು ಸೇರಿಸಿ ಗೋಲ್ಡನ್ ಬ್ರೌನ್ ರವರೆಗೆ ಹುರಿದುಕೊಳ್ಳಬೇಕಾಗುತ್ತದೆ.
  • ಚಿಕನ್​ ಹುರಿದ ಬಳಿಕ, ಅದರೊಳಗೆ ಸಣ್ಣಗೆ ಕಟ್​ ಮಾಡಿದ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಈರುಳ್ಳಿ ಸೊಪ್ಪನ್ನು ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕಾಗುತ್ತದೆ.
  • ಇವೆಲ್ಲಾ ಮೃದುವಾದ ಬಳಿಕ, ಹೊಯ್ಸಿನ್ ಸಾಸ್, ಸೋಯಾ ಸಾಸ್, ಆಯಸ್ಟರ್ ಸಾಸ್, ಮೆಣಸಿನ ಪುಡಿ, ಸಕ್ಕರೆ ಹಾಗೂ ಉಪ್ಪು ಮಿಶ್ರಣಕ್ಕೆ ಸೇರಿಸಬೇಕಾಗುತ್ತದೆ. ಈ ಎಲ್ಲ ಪದಾರ್ಥಗಳು ಚಿಕನ್ ಪೀಸ್​ಗಳಿಗೆ ಹತ್ತಿಕೊಳ್ಳುವಂತೆ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
  • ಬಳಿಕ ಇನ್ನೊಂದು ನಾಲ್ಕು ನಿಮಿಷ ಬೇಯಿಸಬೇಕು. ತಟ್ಟಗೆ ಬಡಿಸುವಾಗ ಸ್ವಲ್ಪ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಸೊಪ್ಪನ್ನು ಉದುರಿಸಬೇಕಾಗುತ್ತದೆ. ನಿಮ್ಮ ಬಾಯಲ್ಲಿ ನೀರೂರಿಸುವ ಸಖತ್​ ಟೇಸ್ಟಿಯಾದ 'ಮಂಗೋಲಿಯನ್ ಚಿಕನ್' ರೆಡಿಯಾಗಿದೆ.
  • ನಿಮಗೆ ಇಷ್ಟವಾದರೆ, ಮುಂಬರುವ ಭಾನುವಾರದ ಮಂಗೋಲಿಯನ್ ಚಿಕನ್ ರೆಸಿಪಿ ಟ್ರೈ ಮಾಡಿ ನೋಡಿ. ಈ ಅಡುಗೆಗೆ ಉಪಯೋಗಿಸಿರುವ ಎಲ್ಲಾ ಪದಾರ್ಥಗಳು ಆನ್‌ಲೈನ್‌ನಲ್ಲಿ ದೊರೆಯುತ್ತವೆ. ಈ ಅಡುಗೆಯು ತುಂಬಾ ರುಚಿಕರವಾಗಿದ್ದು, ನಿಮ್ಮ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.