ಹೈದರಾಬಾದ್: ಸಂಶೋಧನೆಯಲ್ಲಿ ಹೊಸ ಹೊಸ ಹೆಜ್ಜೆಯನ್ನು ಇಡಲು ಐಐಟಿ ಹೈದರಾಬಾದ್ ಮುಂದಾಗಿದೆ. ಇದಕ್ಕಾಗಿ 2025ರ ವರ್ಷ ಪೂರ್ತಿ ಒಂದೊಂದು ಪೆಂಟೆಂಟ್ ದಾಖಲಿಸುವ ಉದ್ದೇಶದಿಂದ ಪೇಟೆಂಟ್ 365 ಪ್ರಾರಂಭಿಸಿದೆ. ಎರಡನೇ ಪೀಳಿಗೆ ಐಐಟಿಯಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಇದೀಗ ದೇಶೀಯ ಮತ್ತು ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ಸ್ಥಾನಕ್ಕೆ ಏರಿ, ತನ್ನ ಪ್ರತಿಷ್ಠೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿಕೊಳ್ಳಲು ಮುಂದಾಗಿದೆ.
2008ರಲ್ಲಿ ಸಂಗಾರೆಡ್ಡಿಯ ಕಂಡಿಯಲ್ಲಿ ಐಐಟಿಎಚ್ ಪ್ರಾರಂಭವಾಯಿತು. ವೇಗವಾಗಿ ಸಂಶೋಧನಾ ಕೇಂದ್ರವಾಗಿ ಬೆಳೆದು ನಿಂತಿದೆ. ಈ ಸಂಸ್ಥೆ ಇಲ್ಲಿಯವರೆಗೆ ಒಟ್ಟು 1500 ಪೇಟೆಂಟ್ಗಳನ್ನು ಪಡೆದುಕೊಂಡಿದೆ. ಅದರಲ್ಲಿ 2004ರಲ್ಲೇ 250 ಪೇಟೆಂಟ್ ಲಭಿಸಿದೆ. ಸಂಸ್ಥೆಯು 2025ರಲ್ಲಿ 365 ಪೇಟೆಂಟ್ ಗಳಿಸುವ ಗುರಿ ಇಟ್ಟುಕೊಂಡಿದೆ.
ಸಂಶೋಧನಾ ಚಾಲಿತ ಪರಿಸರ ವ್ಯವಸ್ಥೆ: ಸಂಶೋಧನಾ ಗುರಿಯಲ್ಲಿ ಐಐಟಿಎಚ್ ಗಮನವನ್ನು ಹೊಂದಿದ್ದು, ಇಲ್ಲಿ 5,000 ವಿದ್ಯಾರ್ಥಿಗಳಿದ್ದು, 1,500 ಪಿಎಚ್ಡಿ, 1,500 ಎಂಟೆಕ್, 2000 ಬಿಟೆಕ್ ವಿದ್ಯಾರ್ಥಿಗಳಿದ್ದಾರೆ. ಈ ಶೈಕ್ಷಣಿಕ ವಿನ್ಯಾಸವೂ ಹೊಸ ಹೊಸ ಅವಿಷ್ಕಾರಕ್ಕೆ ಕಾರಣವಾಗಿದ್ದು, ಎನ್ಐಆರ್ಎಫ್ನಲ್ಲಿನ 10 ಟಾಪ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ನಿರಂತರವಾಗಿ ಸ್ಥಾನ ಗಿಟ್ಟಿಸುತ್ತಿದ್ದು, ಕಳೆದ ವರ್ಷ 8ನೇ ಸ್ಥಾನದಲ್ಲಿದೆ.
ಜಾಗತಿಕ ಸಹಯೋಜನೆ ಮತ್ತು ಸುಧಾರಿತ ಸಂಶೋಧನಾ ಸಾಧನ: ಸಂಸ್ಥೆ ಸದಾ ದೂರದೃಷ್ಟಿ ಪ್ರಸ್ತಾವವನ್ನು ಹೊಂದಿದ್ದು, ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಐಐಟಿಎಚ್ ನಿರ್ದೇಶಕ ಬಿಎಸ್ ಮೂರ್ತಿ ತಿಳಿಸಿದ್ದಾರೆ. ಸಂಸ್ಥೆಯ ಪ್ರಮುಖ ಆಸ್ತಿ ಎಂದರೆ 25 ಕೋಟಿ ವಿಶ್ವದ ಅತ್ಯಾಧುನಿಕ ಸುಧಾರಿತ ಸೂಕ್ಷ್ಮದರ್ಶಕವಾಗಿದೆ. ಇದು ಕ್ಯಾನ್ಸರ್ ಅಧ್ಯಯನದಂತಹ ಕ್ಷೇತ್ರಗಳಲ್ಲಿ ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ವರ್ಷಾಂತ್ಯದೊಳಗೆ ಅಂದರೆ, ಡಿಸೆಂಬರ್ 31 ರೊಳಗೆ ಮಿಷನ್ 365 ಗುರಿಯನ್ನು ಮುಟ್ಟುವ ವಿಶ್ವಾಸವಿದೆ. ಆರ್ಥಿಕ ಸಂಪನ್ಮೂಲಗಳನ್ನು ಅಧ್ಯಾಪಕರಿಗೆ ವಿಸ್ತರಿಸಲಾಗುತ್ತಿದೆ. ಹಾಗೇ ಜಾಗತಿಕವಾಗಿ ಕಾರ್ಯತಂತ್ರದ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ. ಶೀಘ್ರದಲ್ಲೇ ಮೊದಲ ಪೀಳಿಗೆಯ ಐಐಟಿಗೆ ಸರಿಸಮನಾಗುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಇದರ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಮುಂಬರುವ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 20,000ಕ್ಕೆ ಹೆಚ್ಚಿಸುವ ಯೋಜನೆ ಹೊಂದಲಾಗಿದೆ. ಜಾಗತಿಕ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರವಾಗಲು ಮಿಷನ್ 365 ಬದ್ದತೆಯನ್ನು ಹೊಂದಲಾಗಿದೆ. ಇದು ಕೇವಲ ದಾಖಲೆ ಗುರಿ ಹೊಂದುವ ಉದ್ದೇಶವನ್ನು ಹೊಂದಿರದೆ, ಐಐಟಿಎಚ್ ಅನ್ನು ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾಗಿ ರೂಪಿಸಲಿದೆ.
ಇದನ್ನೂ ಓದಿ: ಪಿಂ-ಕಿಸಾನ್ 19ನೇ ಕಂತು ಬಿಡುಗಡೆ: 9.8 ಕೋಟಿ ರೈತರ ಖಾತೆಗಳಿಗೆ 22 ಸಾವಿರ ಕೋಟಿ ರೂ. ಜಮೆ
ಇದನ್ನೂ ಓದಿ: ಆನೆ ದಾಳಿಯಿಂದಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮೂವರು ಭಕ್ತರು ಬಲಿ: ಪವನ್ ಕಲ್ಯಾಣ್ ಕಳವಳ