ETV Bharat / sports

'ಪಾಕ್​ ವಿರುದ್ಧ ಭಾರತ ಗೆಲ್ಲಲ್ಲ' ಎಂದಿದ್ದ ಐಐಟಿ ಬಾಬಾ; ಈಗ ಹೇಳುತ್ತಿರುವುದೇನು ಗೊತ್ತಾ? - IIT BABA

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲ್ಲ ಕೊಹ್ಲಿ ರನ್​ ಗಳಿಸಲ್ಲ ಎಂದು ಭವಿಷ್ಯ ನುಡಿದಿದ್ದ ಐಐಟಿ ಬಾಬಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

IIT Baba ind vs Pak  IIT Baba Prediction  IIT Baba Video  IIT Baba Prediction Video
IIT Baba (ANI)
author img

By ETV Bharat Sports Team

Published : Feb 25, 2025, 1:28 PM IST

Ind vs Pak IIT Baba Prediction: ಭಾನುವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಆದರೆ ಪಂದ್ಯಕ್ಕೂ ಮುನ್ನ ಐಐಟಿ ಬಾಬಾ ನುಡಿದಿದ್ದ ಭವಿಷ್ಯ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಭಾರತ ಪಾಕ್​ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಯಾರು ಗೆಲ್ಲಲಿದ್ದಾರೆ ಎಂದು ಐಐಟಿ ಬಾಬಾ ಅಭಯ್​ ಸಿಂಗ್​ ಭವಿಷ್ಯ ನುಡಿದಿದ್ದರು. ಈ ಪಂದ್ಯದಲ್ಲಿ ಭಾರತ ಗೆಲ್ಲಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಗೆಲ್ಲಲಿದೆ ಮತ್ತು ವಿರಾಟ್​ ಕೊಹ್ಲಿ ರನ್​ಗಳಿಸದೇ ಮತ್ತೆ ಫ್ಲಾಪ್​ ಆಗಲಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವೆಡೆ ಭಾರಿ ವೈರಲ್​ ಕೂಡ ಆಗಿತ್ತು. ಆದರೆ ಐಐಟಿ ಬಾಬಾ ಹೇಳಿದಂತೆ ಯಾವುದ ಆಗಲಿಲ್ಲ. ಈ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.

ಈ ಗೆಲುವಿನ ಬೆನ್ನಲ್ಲೆ ಐಐಟಿ ಬಾಬಾ ಅವರ ಭವಿಷ್ಯವಾಣಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾದವು. ಸಾಕಷ್ಟು ಕ್ರಿಕೆಟ್​ ಅಭಿಮಾನಿಗಳು ಅವರನ್ನು ಟ್ರೋಲ್​ ಮಾಡಲು ಪ್ರಾರಂಭಿಸಿದ್ದಾರೆ. ಇದೀಗ ಈ ವಿಷಯವಾಗಿ ಐಐಟಿ ಬಾಬಾ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.

ಯೂಟ್ಯೂಬರ್​ ಇಬ್ಬರು ಐಐಟಿ ಬಾಬಾಗೆ ಕರೆ ಮಾಡಿ ಭಾರತ - ಪಾಕ್​ ಪಂದ್ಯದ ಬಗ್ಗೆ ನೀವು ನುಡಿದಿದ್ದ ಭವಿಷ್ಯವಾಣಿ ಸುಳ್ಳಾಗಿದೆ. ಇದಕ್ಕೆ ಏನು ಹೇಳುವಿರಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ಐಐಟಿ ಬಾಬಾ ಪ್ರತಿಕ್ರಿಯೆ ನೀಡಿದ್ದು ಕೇಳಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಐಟಿ ಬಾಬಾ, ಇಂತಹ ಯಾವುದೇ ಭವಿಷ್ಯವಾಣಿಗಳನ್ನು ನಂಬಬೇಡಿ. ಇಂತಹ ಕೆಟ್ಟ ಭವಿಷ್ಯವಾಣಿಗಳಿಂದ ನಿಮ್ಮ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ಸ್ವಂತ ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಳ್ಳಿ" ಎಂದು ತಿಳಿಸಿದ್ದಾರೆ. ಇದರ ಬೆನ್ನೆಲ್ಲೆ ನೆಟಿಜನ್ಸ್​ ಬಾಬಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಬೇಗ ಫೇಮಸ್​ ಆಗಲು ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಇದು ಅವರ ಟ್ರಿಕ್ಸ್​ ಎಂದಿದ್ದಾರೆ. ಮತ್ತೆ ಕೆಲವರು ಜನರನ್ನು ಯಾಮಾರಿಸಲು ಇಂತಹ ಬಾಬಾಗಳು ಕಾಯುತ್ತಿರುತ್ತಾರೆ ಎಂದಿದ್ದಾರೆ.

ಯಾರು ಈ ಐಐಟಿ ಬಾಬಾ: ಅಭಯ್ ಸಿಂಗ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವೀಧರರಾಗಿದ್ದಾರೆ. ಅವರು 2008-2012 ಬ್ಯಾಚ್‌ಗೆ ಸೇರಿದವರಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿದ್ದು ಭಾರೀ ವೈರಲ್​ ಆಗಿದ್ದಾರೆ. ಇವರನ್ನು ಜನ ಐಐಟಿ ಬಾಬಾ ಎಂದೇ ಗುರುತಿಸುತ್ತಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಲ್ಲಿಂದು ಮತ್ತೊಂದು ಮೆಗಾ ಫೈಟ್​: ಗೆದ್ದ ತಂಡ ಸೆಮಿಸ್​ಗೆ ಪ್ರವೇಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.