ETV Bharat / bharat

ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್​ಗೆ ಸಿಸಿಪಿಎ ನೋಟಿಸ್ - CAB AGGREGATORS

ಓಲಾ ಮತ್ತು ಉಬರ್​ಗೆ ಸಿಸಿಪಿಎ ನೋಟಿಸ್ ನೀಡಿದೆ. ಕಾರಣ ಏನು ಇಲ್ಲಿ ತಿಳಿಯಿರಿ

ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್​ಗೆ ಸಿಸಿಪಿಎ ನೋಟಿಸ್
ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್​ಗೆ ಸಿಸಿಪಿಎ ನೋಟಿಸ್ (IANS)
author img

By ANI

Published : Jan 23, 2025, 4:08 PM IST

ನವದೆಹಲಿ: ಗ್ರಾಹಕರು ಬಳಸುವ ಸ್ಮಾರ್ಟ್ ಫೋನ್​ನ ಮಾಡೆಲ್ ಅನ್ನು ಆಧರಿಸಿ ವಿಭಿನ್ನ ದರ ವಿಧಿಸುತ್ತಿರುವ ಆರೋಪದ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಪ್ರಮುಖ ಕ್ಯಾಬ್ ಅಗ್ರಿಗೇಟರ್​ಗಳಾದ ಓಲಾ ಮತ್ತು ಉಬರ್​ಗೆ ನೋಟಿಸ್ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಜೋಶಿ. "ಗ್ರಾಹಕರು ಬಳಸುವ ಮೊಬೈಲ್ ಫೋನ್​ಗಳ (ಐಫೋನ್​/ ಆಂಡ್ರಾಯ್ಡ್) ವಿವಿಧ ಮಾದರಿಗಳ ಆಧಾರದ ಮೇಲೆ ವಿಭಿನ್ನ ಪ್ರಯಾಣ ದರ ವಸೂಲಿ ಮಾಡುತ್ತಿರುವ ವಿಷಯದ ಹಿಂದಿನ ಅವಲೋಕನದ ಅನುಸರಣೆಯಾಗಿ, ಗ್ರಾಹಕ ವ್ಯವಹಾರಗಳ ಇಲಾಖೆ ಸಿಸಿಪಿಎ ಪ್ರಮುಖ ಕ್ಯಾಬ್ ಅಗ್ರಿಗೇಟರ್​ಗಳಾದ ಓಲಾ ಮತ್ತು ಉಬರ್​ಗೆ ನೋಟಿಸ್ ನೀಡಿದೆ" ಎಂದು ಹೇಳಿದ್ದಾರೆ.

ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದಾಗ ಬೇರೆ ಬೇರೆ ಸ್ಮಾರ್ಟ್​ಫೋನ್​ಗಳಲ್ಲಿ ವಿಭಿನ್ನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಲವಾರು ಗ್ರಾಹಕರು ದೂರು ನೀಡಿದ ನಂತರ ಕ್ಯಾಬ್ ಅಗ್ರಿಗೇಟರ್​ಗಳ ಈ ವಂಚನೆ ಬೆಳಕಿಗೆ ಬಂದಿದೆ. ಕೆಲ ಮಾದರಿಯ ಫೋನ್​ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಸದ್ಯ ಗ್ರಾಹಕರ ಕುಂದುಕೊರತೆ ಪರಿಹರಿಸಲು ಮತ್ತು ಕ್ಯಾಬ್ ಅಗ್ರಿಗೇಟರ್​ಗಳು ನ್ಯಾಯಯುತ ಶುಲ್ಕ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಿಸಿಪಿಎ ಓಲಾ ಮತ್ತು ಉಬರ್​ಗೆ ನೋಟಿಸ್ ನೀಡಿದೆ. ಕಂಪನಿಗಳು ಈಗ ಬೆಲೆ ನಿಗದಿಯ ಕಾರ್ಯವಿಧಾನ ಮತ್ತು ಈ ಶುಲ್ಕ ವ್ಯತ್ಯಾಸಗಳ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಒದಗಿಸಬೇಕಾಗಿದೆ.

ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡ ಗ್ರಾಹಕ ಸಂಬಂಧಿತ ವಿಷಯಗಳಲ್ಲಿ ಇಲಾಖೆ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಸ್ವೀಕರಿಸಿದ ದೂರುಗಳಿಗೆ ಸಂಬಂಧಿಸಿದಂತೆ ಸಿಸಿಪಿಎ ಆಪಲ್​ಗೆ ನೋಟಿಸ್ ನೀಡಿತ್ತು. ಐಒಎಸ್ 18 ಅಥವಾ ನಂತರದ ಆವೃತ್ತಿಗಳಿಗೆ ಅಪ್ಡೇಟ್ ಮಾಡಿಕೊಂಡ ನಂತರ ಐಫೋನ್​ನ ಕಾರ್ಯಕ್ಷಮತೆ ಹಾಳಾಗಿದೆ ಎಂದು ಗ್ರಾಹಕರು ದೂರಿದ್ದರು. ಇಲಾಖೆಯು ಈ ಕುಂದುಕೊರತೆಗಳನ್ನು ಪರಿಶೀಲಿಸಿ, ಪ್ರತಿಕ್ರಿಯೆ ನೀಡುವಂತೆ ಆ್ಯಪಲ್​​ಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ: ಅತೀ ಕಡಿಮೆ ಶುಲ್ಕ, ಹೆಚ್ಚು ಪ್ರಯೋಜನಗಳು!: ಟಾಪ್​ ಕೋ - ಬ್ರ್ಯಾಂಡೆಡ್​ ಕ್ರೆಡಿಟ್ ಕಾರ್ಡ್‌ಗಳ ಕುರಿತ ಮಾಹಿತಿ ಇಲ್ಲಿದೆ - BEST CO BRANDED CREDIT CARDS

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.