ETV Bharat / sports

ರಣಜಿಯಲ್ಲೂ ಅದೇ ರಾಗ ಅದೇ ಹಾಡು.! ಹೀಗೆ ಬಂದು ಹಾಗೆ ಹೋದ ಹಿಟ್​ಮ್ಯಾನ್ - RANJI MATCH

ಇಂದಿನಿಂದ ರಣಜಿ ಟ್ರೋಫಿಯ 6ನೇ ಸುತ್ತಿನ ಪಂದ್ಯಾವಳಿಗಳು ಆರಂಭವಾಗಿವೆ. ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಮುಂಬೈ ಪರ ಕಣಕ್ಕಿಳಿದಿದ್ದಾರೆ.

RANJI TROPHY 2025  MUMBAI JAMMU KASHMIR RANJI  ROHIT SHAMRA RANJI TEAM  Rohit Sharma 10 Test innings
Rohit Sharma (AP)
author img

By ETV Bharat Sports Team

Published : Jan 23, 2025, 12:11 PM IST

Ranji 2025: ಇಂದಿನಿಂದ ಆರನೇ ಸುತ್ತಿನ ರಣಜಿ ಪಂದ್ಯಾವಳಿಗಳು ಆರಂಭವಾಗಿವೆ. ಎ ಗುಂಪಿನ ಪಂದ್ಯದಲಿಂದು ಮುಂಬೈ ಮತ್ತು ಜಮ್ಮು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ಪರ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದಿರುವ ರೋಹಿತ್​ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್​ ಗಾವಸ್ಕರ್​ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ರೋಹಿತ್​ ಶರ್ಮಾ ಕಳಪೆ ಪ್ರದರ್ಶನ ತೋರಿದ್ದರು. ಮೂರು ಪಂದ್ಯಗಳನ್ನು ಆಡಿದ್ದ ಹಿಟ್​ಮ್ಯಾನ್​ ಕನಿಷ್ಠ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಈ ಸರಣಿಯ 6 ಇನ್ನಿಂಗ್ಸ್​ಗಳಲ್ಲಿ ಕೇವಲ 31 ರನ್​ ಗಳಿಸಿದ್ದರು. ಅಲ್ಲದೇ ರನ್​ ಗಳಿಸಲು ಹೆಣಗಾಡುತ್ತಿದ್ದ ಅವರು ಬಿಜಿಟಿ ಸರಣಿಯ 5ನೇ ಮತ್ತು ಅಂತಿಮ ಪಂದ್ಯದಿಂದ ಹೊರಗುಳಿದಿದ್ದರು.

ತಾವು ಕಳೆದುಕೊಂಡಿರುವ ಫಾರ್ಮ್​ ಅನ್ನು ಮರಳಿ ಪಡೆಯಲು ಮುಂದಾಗಿರುವ ರೋಹಿತ್​ ಶರ್ಮಾ ರಣಜಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದರಂತೆ ಇಂದಿನಿಂದ ಆರಂಭವಾಗಿರುವ 6ನೇ ಸುತ್ತಿನ ರಣಜಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದರು. ಶರದ್​ ಪವಾರ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ್​ ವಿರುದ್ಧ ಟಾಸ್​ ಗೆದ್ದ ಮುಂಬೈ ನಾಯಕ ಅಜಿಂಕ್ಯಾ ರಹಾನೆ ಮೊದಲಿಗೆ ಬ್ಯಾಟಿಂಗ್​ ಮಾಡಲು ನಿರ್ಧರಿಸಿದರು. ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ರೋಹಿತ್​ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದರು.

19 ಎಸೆತಗಳನ್ನು ಎದುರಿಸಿದ ಹಿಟ್​ಮ್ಯಾನ್ ಕೇವಲ 3 ರನ್​ ಮಾತ್ರ ಕಲೆಹಾಕಿದರು. ಉಮಾರ್​ ನಝಿರ್​ ಎಸೆದ ಬೌಲಿಂಗ್​ನಲ್ಲಿ ರೋಹಿತ್ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು. ಇದರೊಂದಿಗೆ ರೋಹಿತ್​ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಹಿಟ್​ಮ್ಯಾನ್​

ರೋಹಿತ್​ ಶರ್ಮಾ ಕಳೆದ 15 ಟೆಸ್ಟ್​ ಇನ್ನಿಂಗ್ಸ್​ಗಳಲ್ಲಿ 10.93 ಸರಾಸರಿಯಲ್ಲಿ ಕೇವಲ 164 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿದೆ. ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್​ ಪಂದ್ಯದಲ್ಲೂ ರೋಹಿತ್​ ರನ್​ ಗಳಿಸಲು ಸಾಧ್ಯವಾಗಿರಲಿಲ್ಲ. ಅವರು ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್​ನಲ್ಲಿ 42 ರನ್​ ಮಾತ್ರ ಕಲೆಹಾಕಿದ್ದರು.

ಬಳಿಕ ನಡೆದ ನ್ಯೂಜಿಲೆಂಡ್​ ವಿರುದ್ಧ ತವರಿನ ಪಂದ್ಯದಲ್ಲೂ ಫ್ಲಾಪ್​ ಆಗಿದ್ದರು. 3 ಪಂದ್ಯಗಳ 6 ಇನ್ನಿಂಗ್ಸ್​ಗಳಲ್ಲಿ ಕೇವಲ 91 ರನ್​ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಬಾಡರ್ರ್​ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಹಿಟ್​ಮ್ಯಾನ್​ ಬ್ಯಾಟ್​ನಿಂದ 31 ರನ್​ ಮಾತ್ರ ಹರಿದು ಬಂದಿತ್ತು.

ಸಂಕಷ್ಟದಲ್ಲಿ ಮುಂಬೈ: ಟಾಸ್​ ಗೆದ್ದು ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಮುಂಬೈ 19 ಓವರ್​​ ಮುಕ್ತಾಯದ ವೇಳೆಗೆ 60 ರನ್​ಗಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕರಾರಗಿ ಬ್ಯಾಟಿಂಗ್​ ಮಾಡಿದ ಜೈಸ್ವಾಲ್​ 4 ರನ್​ಗಳಿಸಿ ಪೆವಿಲಿಯನ್​ ಸೇರಿದರೇ, ರೋಹಿತ್​ ಶರ್ಮಾ 3 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ನಂತರ ಬಂದ ಹಾರ್ದಿಕ್​ ತಾಮೊರೆ (7), ಅಜಿಂಕ್ಯಾ ರಹಾನೆ (12), ಶ್ರೇಯಸ್​ ಅಯ್ಯರ್​ (11) ಎರಡಂಕಿ ಗಳಿಸುವಷ್ಟರಲ್ಲೆ ಸುಸ್ತಾದರು. ಶಿವಂ ದುಭೆ, ಶಾಮ್ಸ್​ ಠಾಕೂರ್​ ಯಾವುದೇ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ. ಸಧ್ಯ ಶಾರ್ದೂಲ್​ ಠಾಕೂರ್​ (13), ತನುಶ್​ ಕೋಟ್ಯಾನ್​ (4) ಬ್ಯಾಟಿಂಗ್​ ಮುಂದುವರೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪರ ಉಮರ್​ ನಾಝಿರ್​ 8 ಓವರ್​ ಬೌಲಿಂಗ್​ ಮಾಡಿ 27 ರನ್​ ನೀಡಿ 4 ವಿಕೆಟ್​ ಉರಳಿಸಿದ್ದಾರೆ. ಯುಧವೀರ್​ ಸಿಂಗ್​ ಚರಕ್​ 2, ನಬಿ ದಾರ್​ ಒಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: ಕನ್ನಡಿಗನ ಕಮಾಲ್​; ಇಂಗ್ಲೆಂಡ್​ ವಿರುದ್ಧ 13 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.