ETV Bharat / business

2030ರ ವೇಳೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ 10.8 ಮಿಲಿಯನ್​ಗೆ ಬೆಳೆಯುವ ನಿರೀಕ್ಷೆ - USED CAR SALES

ಭಾರತದಲ್ಲಿ ಬಳಸಿದ ಕಾರುಗಳ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ.

2030ರ ವೇಳೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ 10.8 ಮಿಲಿಯನ್​ಗೆ ಬೆಳೆಯುವ ನಿರೀಕ್ಷೆ
2030ರ ವೇಳೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ 10.8 ಮಿಲಿಯನ್​ಗೆ ಬೆಳೆಯುವ ನಿರೀಕ್ಷೆ (ians)
author img

By ETV Bharat Karnataka Team

Published : Jan 23, 2025, 5:06 PM IST

ನವದೆಹಲಿ: ಭಾರತದಲ್ಲಿ ಬಳಸಿದ ಕಾರು (ಸೆಕೆಂಡ್ ಹ್ಯಾಂಡ್ ಕಾರು) ಮಾರುಕಟ್ಟೆಯು 2023 ರಲ್ಲಿ ಇದ್ದ 4.6 ಮಿಲಿಯನ್​ನಿಂದ 2030ರ ವೇಳೆಗೆ 10.8 ಮಿಲಿಯನ್ ಗೆ ಬೆಳೆಯುವ ನಿರೀಕ್ಷೆಯಿದೆ. ಮಾರಾಟವು ಶೇಕಡಾ 13 ರಷ್ಟು ಪ್ರಭಾವಶಾಲಿ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (ಸಿಎಜಿಆರ್) ದೊಂದಿಗೆ ಮುಂದುವರಿಯಲಿದೆ ಎಂದು ವರದಿಯೊಂದು ತಿಳಿಸಿದೆ.

ಬಳಸಿದ ಕಾರು ಮಾರಾಟದಲ್ಲಿ 2024ನೇ ಇಸ್ವಿಯು ಒಂದು ಮೈಲಿಗಲ್ಲು ವರ್ಷವಾಗಿ ಹೊರಹೊಮ್ಮಿದ್ದು, ಈ ವರ್ಷದಲ್ಲಿ ಬಳಸಿದ ಕಾರುಗಳ ಮಾರಾಟವು 1.3:1 ರ ಗಮನಾರ್ಹ ಅನುಪಾತದೊಂದಿಗೆ ಕಾರು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿದೆ. ಬಳಸಿದ ಕಾರುಗಳ ಮಾರಾಟದಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಮುಂಚೂಣಿಯಲ್ಲಿದ್ದು, 2024 ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ 5 ಪಟ್ಟು ಹೆಚ್ಚಾಗಿದ್ದರಿಂದ ಬಳಸಿದ ಕಾರು ಮಾರುಕಟ್ಟೆಯಲ್ಲಿಯೂ ಪರಿಸರ ಪ್ರಜ್ಞೆಯುಳ್ಳ ಖರೀದಿದಾರರು ಹೆಚ್ಚಾಗಿರುವುದು ಕಂಡು ಬಂದಿದೆ.

ಹೊಸ ಕಾರುಗಳ ಸರಾಸರಿ ಮಾರಾಟ ಬೆಲೆ (ಎಎಸ್​ಪಿ) ಏರುತ್ತಲೇ ಇರುವುದು ಗಮನಾರ್ಹ. ಇದರಿಂದ ಹೊಸ ಮತ್ತು ಬಳಸಿದ ಕಾರುಗಳ ಎಎಸ್​ಪಿ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತಿದೆ. ಹೊಸ ಕಾರು ಎಎಸ್​ಪಿಗಳು ಶೇಕಡಾ 32 ರಷ್ಟು ಏರಿಕೆ ಕಂಡರೆ, ಬಳಸಿದ ಕಾರುಗಳ ಎಎಸ್​ಪಿ ಶೇಕಡಾ 24 ರಷ್ಟು ಹೆಚ್ಚಾಗಿವೆ. ಬಳಸಿದ ಕಾರುಗಳ ಬೆಲೆಗಳು ಹೆಚ್ಚಾಗುತ್ತಿದ್ದರೂ ಇವು ಖರೀದಿದಾರರಿಗೆ ಹೆಚ್ಚು ಬಜೆಟ್ ಸ್ನೇಹಿ ಆಯ್ಕೆಯಾಗಿವೆ.

ಹೊಸ ಕಾರುಕೊಳ್ಳಲು ಸಾಲವನ್ನು ನೆಚ್ಚಿಕೊಂಡ ಗ್ರಾಹಕರು: ವರದಿಯ ಪ್ರಕಾರ, ಹೊಸ ಕಾರುಗಳಿಗೆ ನೀಡಲಾದ ಸಾಲದ ಪ್ರಮಾಣದಲ್ಲಿ ಕೂಡ ಗಮನಾರ್ಹ ಬೆಳವಣಿಗೆಯಾಗಿದ್ದು, ಇದು 2010 ರಲ್ಲಿ ಇದ್ದ ಶೇಕಡಾ 60 ರಿಂದ 2024 ರಲ್ಲಿ ಶೇಕಡಾ 84.2 ಕ್ಕೆ ಏರಿದೆ. ಇದು ಹೊಸ ಕಾರು ಕೊಳ್ಳಲು ಗ್ರಾಹಕರು ಇತ್ತೀಚೆಗೆ ಹೆಚ್ಚಾಗಿ ಸಾಲವನ್ನೇ ಅವಲಂಬಿಸುತ್ತಿರುವುದರ ಸೂಚನೆಯಾಗಿದೆ. ಹಾಗೆಯೇ ಬಳಸಿದ ಕಾರುಗಳ ಹಣಕಾಸು ಮಾರುಕಟ್ಟೆಯೂ ಪ್ರಗತಿ ಸಾಧಿಸಿದ್ದು, ಇದೇ ಅವಧಿಯಲ್ಲಿ ಶೇಕಡಾ 15 ರಿಂದ 23 ಕ್ಕೆ ಏರಿಕೆಯಾಗಿದೆ.

ಕೋವಿಡ್ ನಂತರದ ಕಾಲದಲ್ಲಿ ಗ್ರಾಹಕರ ಆದ್ಯತೆಗಳು ಗಮನಾರ್ಹವಾಗಿ ಬದಲಾಗಿವೆ. ಶೇಕಡಾ 12 ರಷ್ಟು ಕಾರು ಖರೀದಿದಾರರು ಸಮೂಹ ಸಾರಿಗೆಯಲ್ಲಿ ಪ್ರಯಾಣಿಸುವುದಕ್ಕಿಂತ ತಮ್ಮ ಅನುಕೂಲ ಮತ್ತು ಸುರಕ್ಷತೆಗಾಗಿ ವೈಯಕ್ತಿಕ ಸಾರಿಗೆ ವಾಹನ ಹೊಂದಲು ಆದ್ಯತೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಬಳಸಿದ ಕಾರು ಅಥವಾ ಪೂರ್ವ - ಮಾಲೀಕತ್ವದ ಕಾರುಗಳು ಎಂದೂ ಕರೆಯಲ್ಪಡುವ ಇವು ಈ ಹಿಂದೆ ಬೇರೊಬ್ಬರ ಒಡೆತನದಲ್ಲಿದ್ದ ವಾಹನಗಳಾಗಿವೆ. ಈ ಕಾರುಗಳನ್ನು ವ್ಯಾಪಾರ ಮಾಡಿರಬಹುದು, ಗುತ್ತಿಗೆಯ ನಂತರ ಹಿಂದಿರುಗಿಸಿರಬಹುದು ಅಥವಾ ಹಿಂದಿನ ಮಾಲೀಕರು ಮಾರಾಟ ಮಾಡಿರಬಹುದು. ಬಳಸಿದ ಕಾರುಗಳ ಸ್ಥಿತಿಯು ಹಿಂದಿನ ಮಾಲೀಕರು ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ ಎಂಬುದರ ಆಧಾರದ ಮೇಲೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಭಿನ್ನವಾಗಿರುತ್ತದೆ. ಬಳಸಿದ ಕಾರುಗಳಿಗೆ ಸಾಮಾನ್ಯವಾಗಿ ಯಾವುದೇ ವಾರಂಟಿ ನೀಡಲಾಗುವುದಿಲ್ಲ.

ಇದನ್ನೂ ಓದಿ : ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್​ಗೆ ಸಿಸಿಪಿಎ ನೋಟಿಸ್ - CAB AGGREGATORS

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.