ETV Bharat / state

ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬೆಂಬಲಿಗರು : ಕ್ಷೇತ್ರಕ್ಕೆ ಅವಮಾನವಾಗಿದೆ ಎಂದು ಭಾವಿಸಿ ಕೃತ್ಯ - ಪೊಲೀಸ್ ತನಿಖೆಯಲ್ಲಿ ಬಹಿರಂಗ - EGG THROWN ON MUNIRATHNA

ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್​ ಕಾರ್ಯಕರ್ತರಲ್ಲ, ಆದರೆ ಬೆಂಬಲಿಗರು ಎಂದು ನಂದಿನಿ ಲೇಔಟ್ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

bjp-mla-munirathna
ಬಿಜೆಪಿ ಶಾಸಕ ಮುನಿರತ್ನ (ETV Bharat)
author img

By ETV Bharat Karnataka Team

Published : Jan 23, 2025, 8:49 PM IST

Updated : Jan 23, 2025, 9:35 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳು ಕಾಂಗ್ರೆಸ್ ಬೆಂಬಲಿಗರಾಗಿದ್ದು, ಶಾಸಕರಿಂದ ಕ್ಷೇತ್ರಕ್ಕೆ ಅವಮಾನವಾಗಿದೆ ಎಂದು ಭಾವಿಸಿ ಹೀಗೆ ಮಾಡಿದ್ದರು ಎಂಬುದು ನಂದಿನಿ ಲೇಔಟ್ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಕಳೆದ ಡಿ. 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಹಿನ್ನೆಲೆ ಲಕ್ಷ್ಮಿದೇವಿನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಮುನಿರತ್ನ ಬರುವಾಗ ಅವರ ಮೇಲೆ ಮೊಟ್ಟೆ ದಾಳಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮೂವರನ್ನ ಬಂಧಿಸಿ ಎಲ್ಲಾ ಆಯಾಮದಲ್ಲಿ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಬೆಂಬಲಿಗರಾಗಿರುವುದನ್ನ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ. ಶಾಸಕರಿಂದಾಗಿಯೇ ಕ್ಷೇತ್ರಕ್ಕೆ ಅವಮಾನವಾಗಿದೆ ಎಂದು ಭಾವಿಸಿ ಮೊಟ್ಟೆ ದಾಳಿ ನಡೆಸಿದ್ದರು .‌ ಅಲ್ಲದೇ ಕೃತ್ಯದ ಹಿಂದೆ ರಾಜಕೀಯ ಪ್ರಭಾವಿಗಳ ಕೈವಾಡ ಇಲ್ಲದಿರುವುದು ತನಿಖೆ ವೇಳೆ ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬೆಂಬಲಿಗರು: ಕಾರ್ಯಕ್ರಮ ಮುಗಿಸಿ ಹೊರಬರುವಾಗ ಗುಂಪಿನಲ್ಲಿ ಬಂದು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಮೊಟ್ಟೆ ದಾಳಿ ಎಸಗಿದ್ದಾರೆ. ಕೃತ್ಯದ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂದು ಮುನಿರತ್ನ ಅವರು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಲಗ್ಗೆರೆಯ ಭೈರವೇಶ್ವರ ನಗರದ ಕೆ. ವಿಶ್ವನಾಥ್, ಪಾಪರೆಡ್ಡಿಪಾಳ್ಯದ ವಿಶ್ವಕಿರಣ್ ಹಾಗೂ ಲಗ್ಗೆರೆ ಅಶೋಕ್ ಕುಮಾರ್ ಎಂಬುವರನ್ನ ಪೊಲೀಸರು ಬಂಧಿಸಿದ್ದರು. ಕೃತ್ಯದ ಹಿಂದೆ ಮಾಜಿ ಸಂಸದ ಡಿ. ಕೆ ಸುರೇಶ್ ವಿರುದ್ಧ ಕೈವಾಡವಿರುವ ಆರೋಪ ಕೇಳಿ ಬಂದಿತ್ತು.

ಆರೋಪಿಗಳ ವಿಚಾರಣೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಕಾರ್ಯಕರ್ತರಾಗದೇ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಅತ್ಯಾಚಾರ, ಜೀವಬೆದರಿಕೆ ಹಾಗೂ ಜಾತಿನಿಂದನೆಯಡಿ ಮುನಿರತ್ನ ಬಂಧನ ಬಳಿಕ ಆರೋಪಿಗಳು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶಾಸಕರ ನಡತೆಯಿಂದ ಕ್ಷೇತ್ರದ ಮತದಾರರಿಗೆ ಅವಮಾನವಾಗಿದೆ ಎಂದು ಆರೋಪಿಗಳು ಭಾವಿಸಿ ಕೃತ್ಯವೆಸಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುನಿರತ್ನ ವಿರುದ್ಧ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧನವಾಗಿ ಜಾಮೀನಿನ ಮೂಲಕ ಹೊರಬಂದ ಬಳಿಕ ಆರೋಪಿಗಳು ಗುಂಪು ಕಟ್ಟಿಕೊಂಡು ಶಾಸಕರ ವಿರುದ್ಧ ಪ್ರತಿಭಟನೆ ಸಹ ನಡೆಸಿದ್ದರು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಎರಡು ಬಾರಿ ವಶಕ್ಕೆ ಪಡೆದುಕೊಂಡು ಬಿಟ್ಟು ಕಳುಹಿಸಿದ್ದರು. ಡಿ. 25ರಂದು ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಹಿನ್ನೆಲೆ ಮುನಿರತ್ನ ಅವರು ಭಾಗಿಯಾಗುತ್ತಿರುವುದರ ಬಗ್ಗೆ ಅರಿತ ಆರೋಪಿಗಳು ಒಗ್ಗೂಡಿ ಸಂಚು ರೂಪಿಸಿದ್ದರು. ಸಮೀಪದ ಅಂಗಡಿಯೊಂದರಲ್ಲಿ ಮೊಟ್ಟೆ ಖರೀದಿಸಿ ಮುನಿರತ್ನ ಅವರು ಬರುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದ್ದರು. ಕೃತ್ಯದ ಹಿಂದೆ ರಾಜಕೀಯ ನಾಯಕರು ಯಾರೂ ಕುಮ್ಮಕ್ಕು ನೀಡದಿರುವುದು ಆರೋಪಿತರ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಆರೋಪಿಗಳು ತಮ್ಮ ಮೇಲೆ ಮೊಟ್ಟೆ ಆ್ಯಸಿಡ್ ದಾಳಿ ಮಾಡಿರುವುದಾಗಿ ಆರೋಪಿಸಿ ಕೆ. ಸಿ ಜನರಲ್ ಆಸ್ಪತ್ರೆಗೆ ಡಿ.25ರಂದು ಮುನಿರತ್ನ ಅವರು ದಾಖಲಾಗಿದ್ದರು. ಹಲವು ಬಾರಿ ಮೊಟ್ಟೆ ಆ್ಯಸಿಡ್ ದಾಳಿ ನಡೆಸುವುದಾಗಿ ಅಪರಿಚಿತ ವ್ಯಕ್ತಿಗಳು ಬೆದರಿಸಿದ್ದರು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಾಗೂ ಎಫ್ಎಸ್ ಎಲ್ ತಜ್ಞರು ಸ್ಥಳಕ್ಕೆ ಬಂದು ಪರಿಶೀಲಿಸಿ ಸ್ಯಾಂಪಲ್ ಸಂಗ್ರಹಿಸಿದ್ದು, ವರದಿ ಬಂದ ಬಳಿಕ ಚಾರ್ಜ್ ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ಧಾರೆ.

ಡಿಸಿಪಿ ಸೈದುಲು ಅಡಾವತ್ ಹೇಳಿದ್ದೇನು ?: ''ಶಾಸಕರ ವಿರುದ್ಧ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಎಫ್ಎಸ್​ಎಲ್ ವರದಿ ಬಂದ ಬಳಿಕ ಚಾರ್ಜ್ ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳು ಕಾಂಗ್ರೆಸ್ ಬೆಂಬಲಿಗರಾಗಿರುವುದು ಕಂಡುಬಂದಿದ್ದು, ತನಿಖೆ ಮುಂದುವರೆದಿದೆ'' ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ : ಬಂಧಿತ ಮೂವರು ಆರೋಪಿಗಳಿಗೆ ಜಾಮೀನು - EGG THROWN CASE

Last Updated : Jan 23, 2025, 9:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.