ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಏಕದಿನ ಸರಣಿಗೆ ಹರ್ಷಿತ್ ರಾಣಾ ಆಯ್ಕೆ: ‘ಇದು ನಿಮಗೆ ಸೇರಿದ್ದು ಅಪ್ಪಾ’, ತಂದೆಗೆ ಸಾಧನೆ ಅರ್ಪಿಸಿದ ಮಗ - India vs Sri Lanka ODI - INDIA VS SRI LANKA ODI

India vs Sri Lanka ODI: ಜುಲೈ 27 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ವೇಗಿ ಹರ್ಷಿತ್ ರಾಣಾ ಆಯ್ಕೆಯಾಗಿದ್ದು, ತಮ್ಮ ಚೊಚ್ಚಲ ಕರೆಯನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ. ಭಾರತ ತಂಡದಲ್ಲಿ ಆಯ್ಕೆಯಾದ ನಂತರ ಹರ್ಷಿತ್​ ತಮ್ಮ ಸಂತೋಷವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸಿದ್ದಾರೆ.

HARSHIT RANA  HARSHIT RANA INSTAGRAM POST  HARSHIT RANA father post
ಶ್ರೀಲಂಕಾ ಏಕದಿನ ಸರಣಿಗೆ ಹರ್ಷಿತ್ ರಾಣಾ ಆಯ್ಕೆ, ತಂದೆಗೆ ಅರ್ಪಿಸಿದ ಸಾಧನೆ (ANI)

By ETV Bharat Karnataka Team

Published : Jul 19, 2024, 6:22 PM IST

ಹೈದರಾಬಾದ್:ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗುರುವಾರ ಶ್ರೀಲಂಕಾ ವಿರುದ್ಧದ ವೈಟ್ ಬಾಲ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಹರ್ಷಿತ್ ರಾಣಾ ಮತ್ತು ರಿಯಾನ್ ಪರಾಗ್ ತಮ್ಮ ಚೊಚ್ಚಲ ಏಕದಿನ ಕರೆಯನ್ನು ಸ್ವೀಕರಿಸಿದ್ದಾರೆ.

ಆಯ್ಕೆಯ ನಂತರ ಹರ್ಷಿತ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿರುವ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟಿಗ ಹರ್ಷಿತ್​ ಹರಿ ಬಿಟ್ಟಿರುವ ಪೋಸ್ಟ್‌ನಲ್ಲಿ, ನಮ್ಮ ತಂದೆ ಭಾರತ ತಂಡದ ಜೆರ್ಸಿಯನ್ನು ಧರಿಸಿರುವುದು ನೋಡಿ ತುಂಬಾ ಖುಷಿಯಾಯಿತು. ಬಳಿಕ ನಾನು ಅವರನ್ನು ಎತ್ತಿ ಸಂಭ್ರಮಿಸಿದೆ. "ಇದು ನಿಮಗೆ ಸೇರಿದ್ದು. ಲವ್ ಯೂ ಡ್ಯಾಡ್" ಎಂದು ಹರ್ಷಿತ್​ ರಾಣಾ ಬರೆದುಕೊಂಡಿದ್ದಾರೆ.

ಹರ್ಷಿತ್ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಮೊದಲ ಎರಡು T20I ಗಳಿಗೆ ಭಾರತೀಯ ತಂಡದ ಭಾಗವಾಗಿದ್ದರು. ಆದರೆ, ಪ್ಲೇಯಿಂಗ್ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಯಾವುದೇ ಅವಕಾಶವನ್ನು ಪಡೆಯಲಿಲ್ಲ. ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಅವರು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಧನ್ಯವಾದ ಹೇಳಿದ್ದರು.

"ಆಟದ ಕಡೆಗೆ ನನ್ನ ದೃಷ್ಟಿಕೋನವು ಬದಲಾಗಿದ್ದರೆ, ಕೆಕೆಆರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಗೌತಿ ಭಯ್ಯಾ (ಗೌತಮ್ ಗಂಭೀರ್) ಅವರ ಉಪಸ್ಥಿತಿ ಮತ್ತು ಅವರು ನನ್ನ ಮನಸ್ಥಿತಿಯನ್ನು ಹೇಗೆ ಬದಲಾಯಿಸಿದರು ಎಂಬುದಕ್ಕೆ ಬಹಳಷ್ಟು ಸಂಬಂಧವಿದೆ. ದೊಡ್ಡ ಮಟ್ಟದಲ್ಲಿ, ನಿಮಗೆ ಕೌಶಲ್ಯಗಳು ಬೇಕಾಗುತ್ತವೆ. ಆದರೆ ಕೌಶಲ್ಯಕ್ಕಿಂತ ಹೆಚ್ಚು ಒತ್ತಡವನ್ನು ನಿಭಾಯಿಸಲು ನಿಮಗೆ ಗುಂಡಿಗೆ ಬೇಕು 'ಮೇರೆ ಕೊ ತೇರೆ ಪೆ ಟ್ರಸ್ಟ್ ಹೈ' (ನನಗೆ ನಿಮ್ಮ ಮೇಲೆ ವಿಶ್ವಾಸವಿದೆ)" ಎಂದು ಹರ್ಷಿತ್ ತಿಳಿಸಿದ್ದಾರೆ.

ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪ್ರಶಸ್ತಿ ವಿಜೇತ ಓಟಕ್ಕೆ ಹರ್ಷಿತ್ ಪ್ರಮುಖ ಪಾತ್ರ ವಹಿಸಿದ್ದಾರೆ. ವೇಗಿ 19 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು. 2022 ರಿಂದ ಕೆಕೆಆರ್​ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದಾರೆ.

ಓದಿ:'ಅದು ನನ್ನ ಕೆಲಸವಲ್ಲ': ವರದಿಗಾರರಿಗೆ ಕೌಂಟರ್​ ಕೊಟ್ಟ ಹರ್ಮನ್ ಪ್ರೀತ್ ಕೌರ್! - Harmanpreet IND VS PAK Match

ABOUT THE AUTHOR

...view details