ETV Bharat / entertainment

ರಜನಿಕಾಂತ್​ ಬ್ಲಾಕ್​ ಬಸ್ಟರ್ 'ಬಾಷಾ' ಬಿಡುಗಡೆಯಾಗಿ 30 ವರ್ಷ: ಶೀಘ್ರ 4K ವರ್ಷನ್​ನಲ್ಲಿ ರಿ-ರಿಲೀಸ್ - BAASHHA CINEMA

ರಜನಿಕಾಂತ್ ಅಭಿನಯದ ಬಾಷಾ ಮೂವಿ ಮರುಬಿಡುಗಡೆಯಾಗಲಿದೆ.

ಸೂಪರ್ ಸ್ಟಾರ್ ರಜಿನಿಕಾಂತ್
ಸೂಪರ್ ಸ್ಟಾರ್ ರಜಿನಿಕಾಂತ್ (IANS)
author img

By ETV Bharat Karnataka Team

Published : Jan 13, 2025, 2:04 PM IST

ಚೆನ್ನೈ(ತಮಿಳುನಾಡ್): ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಗ್ಮಾ ಅಭಿನಯದ ತಮಿಳು ಚಿತ್ರರಂಗದ ಅಪ್ರತಿಮ ಸಿನಿಮಾಗಳಲ್ಲಿ ಒಂದಾದ 'ಬಾಷಾ' ಬಿಡುಗಡೆಯಾಗಿ 30 ವರ್ಷಗಳಾಗುತ್ತಿದ್ದು, ಶೀಘ್ರದಲ್ಲೇ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಚಿತ್ರ ಮರು ಬಿಡುಗಡೆಯಾಗಲಿದೆ. ಸತ್ಯ ಮೂವೀಸ್​ಗಾಗಿ ಸುರೇಶ್ ಕೃಷ್ಣ ನಿರ್ದೇಶನದಲ್ಲಿ ತಯಾರಾಗಿದ್ದ ಬಾಷಾ 1995ರಲ್ಲಿ ಬಿಡುಗಡೆಯಾಗಿತ್ತು. ಆರ್.ಎಂ.ವೀರಪ್ಪನ್ ಚಿತ್ರದ ನಿರ್ಮಾಪಕರಾಗಿದ್ದರು.

ಈ ಅಪ್ರತಿಮ ಚಿತ್ರ ಬಿಡುಗಡೆಯಾಗಿ 30 ವರ್ಷಗಳನ್ನು ಪೂರೈಸಿದ ಸಂಭ್ರಮ, ಸತ್ಯ ಮೂವೀಸ್‌ನ 60ನೇ ಸುವರ್ಣ ಮಹೋತ್ಸವ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ 50ನೇ ವರ್ಷವನ್ನು ತೆರೆಯ ಮೇಲೆ ಆಚರಿಸಲು ಚಿತ್ರ ನಿರ್ಮಾಪಕರು ಈಗ ಬಾಷಾ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಮರು-ಬಿಡುಗಡೆಯಾಗಲಿರುವ ಆವೃತ್ತಿಯು ಅತ್ಯಾಧುನಿಕ 4ಕೆ ತಂತ್ರಜ್ಞಾನ ಮತ್ತು ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್​ನೊಂದಿಗೆ ಭವ್ಯವಾದ ತಾಂತ್ರಿಕ ಮಾರ್ಪಾಟುಗಳನ್ನು ಹೊಂದಿರಲಿದೆ.

'ಬಾಷಾ' ಭಾರತೀಯ ಚಿತ್ರರಂಗದಲ್ಲಿ ಕಮರ್ಷಿಯಲ್ ಆಕ್ಷನ್ ಚಿತ್ರಗಳ ಶೈಲಿಯನ್ನೇ ಬದಲಾಯಿಸಿದ ಗ್ಯಾಂಗ್ ಸ್ಟರ್ ಕಥೆಯಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರ ಸಂಭಾಷಣೆಗಳಲ್ಲಿ ಒಂದಾದ "ನಾನ್ ಒರು ತಡವ ಸೊನ್ನ, ನೂರು ತಡವ ಸೊನ್ನ ಮತಿರಿ" (ನಾನು ಒಮ್ಮೆ ಹೇಳುವುದು 100 ಬಾರಿ ಹೇಳಿದಂತೆ) ಅಭಿಮಾನಿಗಳು ಹೃದಯವನ್ನು ಗೆದ್ದಿತ್ತು. ಅಂದಿನಿಂದ ಅನೇಕರು ವಿವಿಧ ವೇದಿಕೆಗಳಲ್ಲಿ ಮತ್ತು ವಿವಿಧ ರೂಪಗಳಲ್ಲಿ ಈ ಸಂಭಾಷಣೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ರಜನಿಕಾಂತ್ ಮತ್ತು ನಗ್ಮಾ ಅವರಲ್ಲದೆ, ದಿವಂಗತ ನಟ ರಘುವರನ್, ಚರಣ್ ರಾಜ್, ಆನಂದ್ ರಾಜ್, ಜನಾಗರಾಜ್, ವಿಜಯಕುಮಾರ್ ಮತ್ತು ಯುವರಾಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

30 ವರ್ಷಗಳ ಹಿಂದೆ 1995ರಲ್ಲಿ ಬಿಡುಗಡೆಯಾದ ಈ ಚಿತ್ರವು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಲನಚಿತ್ರ ವೃತ್ತಿಜೀವನದ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿ ಭಾರಿ ಯಶಸ್ಸನ್ನು ಗಳಿಸಿತ್ತು. ಭಾರತದಾದ್ಯಂತ 15 ತಿಂಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡಿದ ಈ ಚಿತ್ರವು ಅನೇಕ ಭಾಷೆಗಳಲ್ಲಿ ರಿಮೇಕ್ ಆಗಿತ್ತು.

ರಜನಿ ಅಭಿಮಾನಿಗಳ ಹೃದಯದಲ್ಲಿ ಮಾತ್ರವಲ್ಲದೆ ಇಡೀ ತಮಿಳುನಾಡಿನ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಈ ಚಿತ್ರವು ಈಗ 4ಕೆ ಯಲ್ಲಿ ಅಟ್ಮೋಸ್ ಸೌಂಡ್ ತಂತ್ರಜ್ಞಾನದೊಂದಿಗೆ ರೀ ಮಾಸ್ಟರ್ ಆಗುತ್ತಿದೆ. ಸತ್ಯ ಮೂವೀಸ್ ಪರವಾಗಿ ಆರ್.ಎಂ.ವೀರಪ್ಪನ್ ಪುತ್ರ ತಂಗರಾಜ್ ವೀರಪ್ಪನ್ ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಮರು ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನಾಗ್ಪುರದಲ್ಲಿ ಕಂಗನಾ, ಅನುಪಮ್ ಖೇರ್ ಜೊತೆ ಕುಳಿತು 'ಎಮರ್ಜೆನ್ಸಿ' ಸಿನಿಮಾ ವೀಕ್ಷಿಸಿದ ಸಚಿವ ಗಡ್ಕರಿ - EMERGENCY FILM SPECIAL SCREENING

ETV Bharat Logo

Copyright © 2025 Ushodaya Enterprises Pvt. Ltd., All Rights Reserved.