ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್' ಹುಬ್ಬೇರಿಸುವಂತಹ ಅಂಕಿಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಆದ್ರೆ ಎಸ್.ಶಂಕರ್ ನಿರ್ದೇಶನದ ಚಿತ್ರವು ತನ್ನ ಎರಡನೇ ದಿನ ಗಳಿಕೆಯಲ್ಲಿ ಇಳಿಕೆ ಕಂಡಿತು. ವಾರಾಂತ್ಯದ ವ್ಯವಹಾರವು ಚಿತ್ರತಂಡಕ್ಕೆ ಪ್ರಮುಖವಾದದ್ದು, ಆದ್ರೆ ಗೇಮ್ ಚೇಂಜರ್ ವೀಕೆಂಡ್ನಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಫೆಸ್ಟಿವ್ ಸೀನಸ್ ಹೊರತಾಗಿಯೂ, ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಪೊಲಿಟಿಕಲ್ ಡ್ಯಾಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಹೆಣಗಾಡುತ್ತಿದೆ ಎಂಬುದನ್ನು ಬಾಕ್ಸ್ ಆಫೀಸ್ ಅಂಕಿ ಅಂಶಗಳು ಹೇಳುತ್ತಿವೆ.
ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನದ ಪ್ರದರ್ಶನಕ್ಕೆ ಹೋಲಿಸಿದರೆ, ಗೇಮ್ ಚೇಂಜರ್ ತನ್ನ ಎರಡನೇ ಮತ್ತು ಮೂರನೇ ದಿನದ ಕಲೆಕ್ಷನ್ನಲ್ಲಿ ಕುಸಿತ ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಆರಂಭಿಕ ಅಂದಾಜಿನ ಪ್ರಕಾರ, ಗೇಮ್ ಚೇಂಜರ್ ಭಾನುವಾರದಂದು ಭಾರತದಲ್ಲಿ 17 ಕೋಟಿ ರೂಪಾಯಿ ಗಳಿಸಿದೆ. ತೆಲುಗು ಆವೃತ್ತಿಯಿಂದ 8 ಕೋಟಿ ರೂ. ಬಂದರೆ, ಹಿಂದಿ - 7.7 ಕೋಟಿ ರೂ., ತಮಿಳು - 1.2 ಕೋಟಿ ರೂ. ಮತ್ತು ಕನ್ನಡದಿಂದ 0.1 ಕೋಟಿ ರೂ. ಗಳಿಕೆಯಾಗಿದೆ. ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡು 3 ದಿನಗಳಾಗಿದ್ದು, ರಾಮ್ ಚರಣ್ ಅಭಿನಯದ ಚಿತ್ರ ಭಾರತದಲ್ಲಿ 89.6 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
BREAKING: Game Changer debuts at #9️⃣ among all international releases in United States of America🇺🇸 pic.twitter.com/zhHliuSsB1
— Manobala Vijayabalan (@ManobalaV) January 12, 2025
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ (ಶುಕ್ರವಾರ) | 51 ಕೋಟಿ ರೂಪಾಯಿ. |
ಎರಡನೇ ದಿನ (ಶನಿವಾರ) | 21.6 ಕೋಟಿ ರೂಪಾಯಿ. |
ಮೂರನೇ ದಿನ (ಭಾನುವಾರ) | 17 ಕೋಟಿ ರೂಪಾಯಿ. (ಆರಂಭಿಕ ಅಂದಾಜು) |
ಒಟ್ಟು | 89.6 ಕೋಟಿ ರೂಪಾಯಿ. |
ಉತ್ತರ ಅಮೆರಿಕಾದಲ್ಲಿ ಭರ್ಜರಿ ಪ್ರದರ್ಶನ: ಗ್ಲೋಬಲ್ ಮೀಡಿಯಾ ಮೆಸರ್ಮೆಂಟ್ ಮತ್ತು ಅನಾಲಿಸ್ಟಿಕ್ ಕಂಪನಿ ಕಾಮ್‌ಸ್ಕೋರ್‌ನ ಲೇಟೆಸ್ಟ್ ಅಪ್ಡೇಟ್ ಪ್ರಕಾರ, ಗೇಮ್ ಚೇಂಜರ್ ಯುಎಸ್‌ನಲ್ಲಿ ವಾರಾಂತ್ಯದಲ್ಲಿ $1.8 ಮಿಲಿಯನ್ ಗಳಿಸಿಸಿದೆ. ಯುಎಸ್‌ನಲ್ಲಿ ಗೇಮ್ ಚೇಂಜರ್ ವಿತರಿಸಿರುವ ಶ್ಲೋಕಾ ಎಂಟರ್‌ಟೈನ್‌ಮೆಂಟ್ಸ್ ಈ ಮೈಲಿಗಲ್ಲನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದೆ.
ಇದನ್ನೂ ಓದಿ: ಚೈತ್ರಾ ಎಲಿಮಿನೇಟ್ ಬೆನ್ನಲ್ಲೇ ಬಿಗ್ ಬಾಸ್ನಲ್ಲಿ ಮಹತ್ವದ ಘೋಷಣೆ : ರಜತ್ ವಿರುದ್ಧ ತಿರುಗಿಬಿದ್ದ ಭವ್ಯಾ, ಮೋಕ್ಷಿತಾ!
ಎಸ್.ಎಸ್.ರಾಜಮೌಳಿ ನಿರ್ದೆಶನದ 2022ರ ಬ್ಲಾಕ್ಬಸ್ಟರ್ ಹಿಟ್ 'ಆರ್.ಆರ್.ಆರ್' ಮೂಲಕ ಜಾಗತಿಕ ಖ್ಯಾತಿಗೇರಿದ ನಂತರ, 'ಗೇಮ್ ಚೇಂಜರ್' ರಾಮ್ ಚರಣ್ ವೃತ್ತಿಜೀವನದಲ್ಲಿ ಮಹತ್ವದ ಬಿಡುಗಡೆಯಾಗಿದೆ. ಆರ್ಆರ್ಆರ್ನಲ್ಲಿ ಜೂನಿಯರ್ ಎನ್ಟಿಆರ್ ಜೊತೆ ತೆರೆಹಂಚಿಕೊಂಡಿದ್ದರು. 2019 ರಲ್ಲಿ ಬಿಡುಗಡೆಯಾದ 'ವಿನಯ ವಿಧೇಯ ರಾಮ' ನಂತರ ರಾಮ್ ಚರಣ್ ಸೋಲೋ ಹೀರೋ ಆಗಿ ಬಿಗ್ ಸ್ಕ್ರೀನ್ಗೆ ಮರಳಿದ್ದಾರೆ.
ಇದನ್ನೂ ಓದಿ: 'ಜೊತೆಯಾಗಿ, ಹಿತವಾಗಿ..': ನಟಿ ಹರಿಪ್ರಿಯಾ ಬೇಬಿಬಂಪ್ ಫೋಟೋಶೂಟ್
ಗೇಮ್ ಚೇಂಜರ್ನಲ್ಲಿ ರಾಮ್ ಚರಣ್ ಐಎಎಸ್ ಅಧಿಕಾರಿ ರಾಮ್ ನಂದನ್ ಮತ್ತು ಅವರ ತಂದೆ ಅಯ್ಯಪ್ಪನ್ ಪಾತ್ರ ಅಂದರೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ನಾಸರ್, ಎಸ್.ಜೆ.ಸೂರ್ಯ, ಮುರಳಿ ಶರ್ಮಾ, ಬ್ರಹ್ಮಾನಂದಂ, ವೆನ್ನೆಲಾ ಕಿಶೋರ್ ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಕರ್ ನಿರ್ದೇಶನವಿರುವ ಈ ಚಿತ್ರದ ಕಥೆಯನ್ನು ಕಾರ್ತಿಕ್ ಸುಬ್ಬರಾಜ್ ಬರೆದರೆ, ವಿವೇಕ್ ವೇಲ್ಮುರುಗನ್ ಸ್ಕ್ರೀನ್ ಪ್ಲೇ ಬರೆದಿದ್ದಾರೆ. ಸಾಯಿ ಮಾಧವ್ ಬುರ್ರಾ ಡೈಲಾಗ್ಸ್ ಬರೆದಿದ್ದಾರೆ. ದಿಲ್ ರಾಜು ತಮ್ಮ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 450 ಕೋಟಿ ರೂ.ಗಳ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.