IPL Date Announced: ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗ ಪ್ರಾರಂಭವಾಗುತ್ತದೆ ಎಂದು ಎದುರು ನೋಡುತ್ತಿರುವ ಐಪಿಎಲ್‌ಪ್ರಿಯರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಶುಭಸುದ್ದಿ ನೀಡಿದ್ದಾರೆ. ಈ ವರ್ಷ ನಡೆಯಲಿರುವ 18ನೇ ಆವೃತ್ತಿಯ ಲೀಗ್‌ನ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಮುಂಬೈನಲ್ಲಿಂದು ನಡೆದ ಬಿಸಿಸಿಐ ಸಾಮಾನ್ಯ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶುಕ್ಲಾ, ಐಪಿಎಲ್ 2025ರ ಆರಂಭದ ದಿನಾಂಕವನ್ನು ಘೋಷಿಸಿದರು. ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಂಡ 14 ದಿನಗಳ ಬಳಿಕ ಚುಟುಕು ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಐಪಿಎಲ್ ಹಬ್ಬ ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ. ಫೈನಲ್ ಪಂದ್ಯದ ದಿನಾಂಕ ಘೋಷಣೆ ಆಗಿಲ್ಲ. ಆದರೆ ಮೇ 25ರಂದು ಫೈನಲ್ ಪಂದ್ಯ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.
ಕಳೆದ ವರ್ಷ ಐಪಿಎಲ್ ವೇಳಾಪಟ್ಟಿಯನ್ನು ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಎರಡು ತಿಂಗಳ ಮೊದಲೇ ಐಪಿಎಲ್ ದಿನಾಂಕ ಬಹಿರಂಗಗೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯೊಂದಿಗೆ ಐಪಿಎಲ್ ವೇಳಾಪಟ್ಟಿ ಘರ್ಷಣೆಯಾಗದಂತೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುಕ್ಲಾ, ಜ.18 ಮತ್ತು 19ರಂದು ಬಿಸಿಸಿಐ ಸಭೆ ನಡೆಯಲಿದೆ. ಬಳಿಕ ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
#WATCH | Mumbai: BCCI Vice President Rajeev Shukla says, " devajit saikia elected new bcci secretary and prabhtej singh bhatia elects as bcci treasurer...ipl is going to start from 23rd march..." pic.twitter.com/Jd6x7U8Hou
— ANI (@ANI) January 12, 2025
ಬಿಸಿಸಿಐ ಕಾರ್ಯದರ್ಶಿ ಆಯ್ಕೆ: ಇಂದು ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಬಿಸಿಸಿಐ ಖಜಾಂಚಿಯಾಗಿ ಪ್ರಭಜೀತ್ ಸಿಂಗ್ ಭಾಟಿಯಾ ಆಯ್ಕೆಯಾಗಿದ್ದಾರೆ.
ಮೆಗಾ ಹರಾಜು: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳು 24 ಮತ್ತು 25ರಂದು ಎರಡು ದಿನಗಳ ಕಾಲ ಐಪಿಎಲ್ 2025ರ ಮೆಗಾ ಹರಾಜು ನಡೆದಿತ್ತು. ಎಲ್ಲಾ ಹತ್ತು ಫ್ರಾಂಚೈಸಿಗಳು 639.15 ಕೋಟಿ ರೂ. ಕೊಟ್ಟು 182 ಆಟಗಾರರನ್ನು ಖರೀದಿ ಮಾಡಿದ್ದವು.
ಈ ಹರಾಜಿನಲ್ಲಿ ಟೀಂ ಇಂಡಿಯಾದ ವಿಕೆಟ್‌ಕೀಪರ್ಬ್ಯಾ ಮತ್ತು ಬ್ಯಾಟರ್ ರಿಷಬ್ ಪಂತ್ 27 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ)ಗೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಂಡ ಆಟಗಾರನಾಗಿ ದಾಖಲೆ ಬರೆದಿದ್ದಾರೆ. ನಂತರ ಶ್ರೇಯಸ್ ಅಯ್ಯರ್ (ಪಂಜಾಬ್ ಕಿಂಗ್ಸ್‌ಗೆ ರೂ 26.75 ಕೋರೆರ್), ಮತ್ತು ವೆಂಕಟೇಶ್ ಅಯ್ಯರ್ (ರೂ. 23.75 ಕೋಟಿ ಕೋಲ್ಕತ್ತಾ) ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಡೇವಿಡ್ ವಾರ್ನರ್, ಪೃಥ್ವಿ ಶಾ, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ಶಾರ್ಟ್ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಹವಾಲರು ಆಟಗಾರರು ಹರಾಜಿನಲ್ಲಿ ಮಾರಾಟವಾಗಲಿಲ್ಲ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಮೂವರು ಡೇಂಜರಸ್ ಆಟಗಾರರ ಪುನರಾಗಮನ!