ETV Bharat / opinion

ಉಚಿತ ಕೊಡುಗೆಗಳ ಪೈಪೋಟಿ ರಾಜಕೀಯ: ಮುಂದಿದೆ ಆರ್ಥಿಕ ಬಿಕ್ಕಟ್ಟಿನ ಆತಂಕ - FREEBIES COMPETITION

ಉಚಿತ ಕೊಡುಗೆಗಳ ಸಾಧಕ-ಬಾಧಕಗಳ ಕುರಿತು ಒಂದು ಅವಲೋಕನ.

ಉಚಿತ ಕೊಡುಗೆಗಳ ಪೈಪೋಟಿ ರಾಜಕೀಯ: ಮುಂದಿದೆ ಆರ್ಥಿಕ ಬಿಕ್ಕಟ್ಟಿನ ಆತಂಕ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Feb 14, 2025, 8:18 PM IST

ಭಾರತದಲ್ಲಿ ಉಚಿತ ಕೊಡುಗೆಗಳನ್ನು ನೀಡುವ ರಾಜಕೀಯವು ಪಕ್ಷಗಳ ನಡುವೆ ತೀವ್ರ ಪೈಪೋಟಿಯ ವಿಷಯವಾಗಿ ಬೆಳೆದಿದ್ದು, ಪ್ರಾದೇಶಿಕ ಗಡಿಗಳನ್ನು ಮೀರಿ ಇದು ಪ್ಯಾನ್-ಇಂಡಿಯಾ ವಿದ್ಯಮಾನವಾಗಿ ಮಾರ್ಪಟ್ಟಿದೆ. ಆರಂಭದಲ್ಲಿ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರ ದೇಶ ಮತ್ತು ತಮಿಳುನಾಡಿನಲ್ಲಿ ಉಚಿತ ಕೊಡುಗೆಗಳ ರಾಜಕೀಯ ಆರಂಭವಾಗಿತ್ತು. ಅಲ್ಲಿನ ಸರ್ಕಾರಗಳು ವ್ಯಾಪಕ ಪ್ರಮಾಣದಲ್ಲಿ ಜನರಿಗೆ ಉಚಿತ ಕೊಡುಗೆಗಳನ್ನು ನೀಡಿದ್ದವು.

ಆದರೆ ಇಂದು ಈ ಉಚಿತ ಕೊಡುಗೆಗಳ ರಾಜಕೀಯ ಬಹುತೇಕ ಎಲ್ಲ ರಾಜ್ಯಗಳಿಗೂ ವ್ಯಾಪಿಸಿದೆ. ಮಹಾರಾಷ್ಟ್ರದ 2024 ರ ವಿಧಾನಸಭಾ ಚುನಾವಣೆಗಳಿಂದ ಹಿಡಿದು 2025 ರ ದೆಹಲಿ ಚುನಾವಣೆಗಳು ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳವರೆಗೆ, ರಾಜಕೀಯ ಪಕ್ಷಗಳು ಅತಿರಂಜಿತ ಭರವಸೆಗಳನ್ನು ನೀಡಿವೆ. ದೀರ್ಘಕಾಲೀನ ಆರ್ಥಿಕ ಬಿಕ್ಕಟ್ಟಿನ ಹೊರೆಯನ್ನು ಹೊತ್ತುಕೊಂಡು ಇಂಥ ಕೊಡುಗೆಗಳನ್ನು ನೀಡಲಾಗುತ್ತಿದೆ.

ಉಚಿತ ಕೊಡುಗೆ ಸಂಸ್ಕೃತಿಯ ಉದಯ ಮತ್ತು ಬೆಳವಣಿಗೆ: ನಗದು ಹಸ್ತಾಂತರ ಮತ್ತು ಉಚಿತ ವಿದ್ಯುತ್​ನಿಂದ ಹಿಡಿದು ಗೃಹೋಪಯೋಗಿ ವಸ್ತುಗಳು ಮತ್ತು ನಿರುದ್ಯೋಗ ಭತ್ಯೆಗಳವರೆಗೆ ಉಚಿತ ಕೊಡುಗೆಗಳನ್ನು ವಿತರಿಸುವ ಅಭ್ಯಾಸವು ಪ್ರಮುಖ ಚುನಾವಣಾ ಕಾರ್ಯತಂತ್ರವಾಗಿದೆ. ಮಹಾರಾಷ್ಟ್ರದ 2024 ರ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಉಚಿತ ಪಡಿತರ ಯೋಜನೆಗಳು, ಸಾಲ ಮನ್ನಾ, ಸಬ್ಸಿಡಿ ಗ್ಯಾಸ್ ಸಿಲಿಂಡರ್​ಗಳು ಮತ್ತು ನೇರ ನಗದು ವರ್ಗಾವಣೆಯ ಭರವಸೆ ನೀಡಿವೆ. 2025 ರ ದೆಹಲಿ ಚುನಾವಣೆಗಳಲ್ಲಿ ಸಹ ಇದೇ ರೀತಿಯ ಪ್ರವೃತ್ತಿ ಕಂಡು ಬಂದಿದೆ. ಪ್ರಮುಖ ಪಕ್ಷಗಳು ಉಚಿತ ಸಾರ್ವಜನಿಕ ಸಾರಿಗೆ ಮತ್ತು ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿಗಳನ್ನು ಹೆಚ್ಚಿಸುವುದು ಸೇರಿದಂತೆ ವಿಸ್ತೃತ ಕಲ್ಯಾಣ ಯೋಜನೆಗಳನ್ನು ಘೋಷಿಸಿವೆ.

2024 ರ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಇದೇ ಪ್ರವೃತ್ತಿ ಕಂಡು ಬಂದಿತ್ತು. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ದೊಡ್ಡ ಪ್ರಮಾಣದ ಉಚಿತ ಕೊಡುಗೆಗಳ ಭರವಸೆ ನೀಡಿದ್ದವು. ಸಾಮಾಜಿಕ ಸಮಾನತೆಗೆ ಕಲ್ಯಾಣ ಕ್ರಮಗಳು ಅತ್ಯಗತ್ಯವಾಗಿದ್ದರೂ, ನಿಜವಾದ ನೀತಿ ಕ್ರಮಗಳು ಮತ್ತು ಚುನಾವಣೆ-ಚಾಲಿತ ತುಷ್ಟೀಕರಣ ತಂತ್ರಗಳ ನಡುವಿನ ವ್ಯತ್ಯಾಸ ಮಸುಕಾಗುತ್ತಿದೆ.

ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಅತಿಯಾಗಿ ಉಚಿತ ಕೊಡುಗೆ ನೀಡುವುದನ್ನು ತೀವ್ರವಾಗಿ ಟೀಕಿಸಿದ್ದರು. ಇದನ್ನು ಅವರು 'ರೇವಡಿ ಸಂಸ್ಕೃತಿ' ಎಂದು ಲೇವಡಿ ಮಾಡಿದ್ದರು. ಆದಾಗ್ಯೂ, ಒಂದು ವರ್ಷದೊಳಗೆ ಬಿಜೆಪಿ ಸ್ವತಃ ಉಚಿತ ಕೊಡುಗೆಗಳ ರಾಜಕೀಯವನ್ನು ಆಶ್ರಯಿಸಿತು. ವಿಶೇಷವಾಗಿ ಉತ್ತರ ಪ್ರದೇಶ ಚುನಾವಣೆಗಳು ಮತ್ತು ಇತರ ರಾಜ್ಯ ಚುನಾವಣೆಗಳಲ್ಲಿ, ಸಬ್ಸಿಡಿಗಳು ಮತ್ತು ನೇರ ನಗದು ಪ್ರಯೋಜನಗಳನ್ನು ನೀಡಿತು. ಈ ವಿರೋಧಾಭಾಸವು ಒಂದು ಮೂಲಭೂತ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ: ಪಕ್ಷಗಳು ಅನಿಯಂತ್ರಿತ ಜನಪ್ರಿಯ ಯೋಜನೆಗಳಿಂದಾಗಬಹುದಾದ ಆರ್ಥಿಕ ಅಪಾಯಗಳನ್ನು ಒಪ್ಪಿಕೊಂಡರೂ, ಚುನಾವಣಾ ಒತ್ತಡಗಳು ಕಾರಣದಿಂದ ಇಂಥ ತಂತ್ರಗಳ ಮೊರೆ ಹೋಗುವುದು ಅವುಗಳಿಗೆ ಅನಿವಾರ್ಯವಾಗಿದೆ.

ಉಚಿತ ಕೊಡುಗೆಗಳ ಪೈಪೋಟಿ ರಾಜಕೀಯ: ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು
ಉಚಿತ ಕೊಡುಗೆಗಳ ಪೈಪೋಟಿ ರಾಜಕೀಯ: ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು (ETV Bharat)

ಆರ್ಥಿಕ ಪರಿಣಾಮಗಳು: ಸಾಲ ಮತ್ತು ಸಮರ್ಥನೀಯವಲ್ಲದ ಖರ್ಚು: ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ಗಣನೀಯ ಉಚಿತ ಕೊಡುಗೆಗಳನ್ನು ನೀಡಲು ಹೆಸರುವಾಸಿಯಾದ ರಾಜ್ಯಗಳಲ್ಲಿ ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ಕಳೆದ ದಶಕದಲ್ಲಿ ವಿತ್ತೀಯ ಕೊರತೆಯ ಪ್ರವೃತ್ತಿಗಳ ಅಧ್ಯಯನದ ಪ್ರಕಾರ, ಅಧಿಕಾರದಲ್ಲಿರುವ ಯಾವುದೇ ರಾಜಕೀಯ ಪಕ್ಷವಿದ್ದರೂ ಆರ್ಥಿಕ ಹೊರೆ ಹೆಚ್ಚಾಗುತ್ತಲೇ ಇದೆ. ನೀತಿ ಆಯೋಗದ ಹಣಕಾಸಿನ ಆರೋಗ್ಯ ಸೂಚ್ಯಂಕ (ಎಫ್ಎಚ್ಐ) ಉಪಕ್ರಮದ ಪ್ರಕಾರ, ಹೆಚ್ಚಿನ ಉಚಿತ ಕೊಡುಗೆಗಳನ್ನು ವಿತರಿಸುವ ರಾಜ್ಯಗಳು ದುರ್ಬಲ ಹಣಕಾಸಿನ ನಿಯತಾಂಕಗಳನ್ನು ಹೊಂದಿರುತ್ತವೆ. ಇದು ಸುಸ್ಥಿರವಲ್ಲದ ಆರ್ಥಿಕ ಮಾದರಿಯನ್ನು ಸೂಚಿಸುತ್ತದೆ. ಆಸ್ತಿ-ಸೃಷ್ಟಿಸದ ವೆಚ್ಚಗಳಿಗೆ ಧನಸಹಾಯ ನೀಡಲು ಅತಿಯಾದ ಸಾಲದ ಮೇಲಿನ ಅವಲಂಬನೆ ಆರ್ಥಿಕ ಅಸ್ಥಿರತೆಯನ್ನು ಹೆಚ್ಚಿಸುತ್ತದೆ ಹಾಗೂ ರಾಜ್ಯಗಳನ್ನು ಸಾಲದ ಬಲೆಗೆ ತಳ್ಳುತ್ತದೆ.

ಕೋಷ್ಟಕ: ನೀತಿ ಆಯೋಗದ ಎಫ್ಎಚ್ಐ ಸೂಚ್ಯಂಕದಲ್ಲಿ ಮಹತ್ವಾಕಾಂಕ್ಷೆಯ ವರ್ಗದ ರಾಜ್ಯಗಳು

ಜಿಎಸ್​ಡಿಪಿ (2024-25) ವಿತ್ತೀಯ ಆರೋಗ್ಯ ಸೂಚ್ಯಂಕ (ಎಫ್ಎಚ್ಐ) ಸ್ಕೋರ್ ನ % ನಷ್ಟು ವಿತ್ತೀಯ ಕೊರತೆ

ಪಂಜಾಬ್ 3.8 10.7

ಆಂಧ್ರ ಪ್ರದೇಶ 4.19 20.9

ಕೇರಳ 3.4 25.4

ಪಶ್ಚಿಮ ಬಂಗಾಳ 3.6 21.8

ಹರಿಯಾಣ 2.8 27.4

ಬಿಹಾರ 3 27.8

ರಾಜಸ್ಥಾನ 3.9 28.6

ತಮಿಳುನಾಡು 3.4 29.2

ಮೂಲ: ನೀತಿ ಆಯೋಗದ ಎಫ್ಎಚ್ಐ ವರದಿ

ರಾಜಕೀಯ ನಾಯಕರು ಆಗಾಗ ಉಚಿತ ಕೊಡುಗೆಗಳನ್ನು ಜನತೆ ಸ್ವತಃ ಮೆಚ್ಚಿ ಬೇಡಿದ ಕ್ರಮಗಳು ಎಂದು ಸಮರ್ಥಿಸುತ್ತಾರೆಯಾದರೂ, ಪ್ರಾಯೋಗಿಕ ಅಧ್ಯಯನಗಳು ಅಥವಾ ಆರ್ಥಿಕ ಕಾರ್ಯಸಾಧ್ಯತಾ ಮೌಲ್ಯಮಾಪನಗಳನ್ನು ನೋಡಿದರೆ ಈ ಸಮರ್ಥನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಇವು ದೀರ್ಘಕಾಲೀನ ಸಾಮಾಜಿಕ-ಆರ್ಥಿಕ ಪ್ರಯೋಜನಗಳಿಗಿಂತ ಅಲ್ಪಾವಧಿಯ ಮತದಾರರ ತುಷ್ಟೀಕರಣ ತಂತ್ರಗಳಾಗಿವೆ. ರಚನಾತ್ಮಕ ನೀತಿ ಮೌಲ್ಯಮಾಪನಗಳ ಅನುಪಸ್ಥಿತಿ ಎಂದರೆ ಈ ಅನೇಕ ಯೋಜನೆಗಳು ಜನರ ಜೀವನೋಪಾಯದಲ್ಲಿ ಸುಸ್ಥಿರ ಸುಧಾರಣೆಗಳನ್ನು ಒದಗಿಸಲು ವಿಫಲವಾಗಿವೆ.

ಉಚಿತ ಕೊಡುಗೆಗಳ ವಿತರಣೆಯು ಹೆಚ್ಚಾಗಿ ಅನಪೇಕ್ಷಿತ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಮಾರುಕಟ್ಟೆಯ ಚಲನಶಾಸ್ತ್ರದ ವಿರೂಪವು ಒಂದು ಪ್ರಮುಖ ಕಾಳಜಿಯಾಗಿದೆ. ಸರಕು ಮತ್ತು ಸೇವೆಗಳನ್ನು ಉಚಿತವಾಗಿ ಒದಗಿಸಿದಾಗ, ನೈಸರ್ಗಿಕ ಪೂರೈಕೆ-ಬೇಡಿಕೆ ಸಮತೋಲನವು ಹಾಳಾಗುತ್ತದೆ, ಖಾಸಗಿ ವಲಯದ ಭಾಗವಹಿಸುವಿಕೆ ಮತ್ತು ಹೂಡಿಕೆಯನ್ನು ನಿರುತ್ಸಾಹಗೊಳಿಸುತ್ತದೆ. ರಾಜ್ಯ ಸರ್ಕಾರಗಳ ಉಚಿತ ಕೊಡುಗೆಗಳು ಸ್ಪರ್ಧೆ ಮತ್ತು ನಾವೀನ್ಯತೆಯನ್ನು ಕಡಿಮೆ ಮಾಡುವುದರಿಂದ ಆರೋಗ್ಯ, ಶಿಕ್ಷಣ ಮತ್ತು ವಿದ್ಯುತ್ ಪೂರೈಕೆಯಂತಹ ಕ್ಷೇತ್ರಗಳು ನಿಶ್ಚಲತೆಯನ್ನು ಎದುರಿಸುತ್ತವೆ.

ಇದಲ್ಲದೆ ಸರ್ಕಾರ ಒದಗಿಸುವ ಪ್ರಯೋಜನಗಳ ಮೇಲೆ ದೀರ್ಘಕಾಲದ ಅವಲಂಬನೆ ಕಾರ್ಮಿಕರ ಉತ್ಪಾದಕತೆಯನ್ನು ನಾಶಪಡಿಸುತ್ತದೆ, ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆ ಮತ್ತು ಸ್ವಾವಲಂಬನೆಯನ್ನು ನಿರುತ್ಸಾಹಗೊಳಿಸುತ್ತದೆ. ಸಾಮಾಜಿಕ ಅಸಮಾನತೆಯನ್ನು ಪರಿಹರಿಸಲು ಉಚಿತ ಕೊಡುಗೆಗಳನ್ನು ನೀಡಲಾದರೂ ಕೆಲವೊಮ್ಮೆ ಅವು ವ್ಯತಿರಿಕ್ತ ಪರಿಣಾಮ ಬೀರಬಹುದು.

ರಾಜಕೀಯ ಪಕ್ಷಪಾತ ಅಥವಾ ಅಸಮರ್ಥ ವಿತರಣಾ ವ್ಯವಸ್ಥೆಗಳಿಂದಾಗಿ ಈ ಪ್ರಯೋಜನಗಳ ಅಸಮಾನ ವಿತರಣೆಯು ಸಮಾಜದಲ್ಲಿ ಮತ್ತಷ್ಟು ವಿಭಜನೆಗಳನ್ನು ಉಂಟುಮಾಡಬಹುದು. ಹೆಚ್ಚುವರಿಯಾಗಿ, ಸರ್ಕಾರದ ನೆರವಿನ ಮೇಲೆ ಅತಿಯಾದ ಅವಲಂಬನೆಯ ಮನಸ್ಥಿತಿಯನ್ನು ಬೆಳೆಸುತ್ತದೆ. ಇದು ರಾಜಕೀಯ ಮತ್ತು ಸಾಮಾಜಿಕ ಧ್ರುವೀಕರಣಕ್ಕೆ ಕೊಡುಗೆ ನೀಡುತ್ತದೆ. ಇಂಥ ನೀತಿಯು ನಿಜವಾದ ಸಾಮಾಜಿಕ-ಆರ್ಥಿಕ ಉನ್ನತಿಗಿಂತ ಚುನಾವಣಾ ಲಾಭಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ.

ಕಟ್ಟುನಿಟ್ಟಾದ ನೀತಿ ಸಂಹಿತೆಯ ಅಗತ್ಯ: ಸೆಂಟರ್ ಫಾರ್ ಎಕನಾಮಿಕ್ ಆ್ಯಂಡ್ ಸೋಷಿಯಲ್ ಸ್ಟಡೀಸ್​ನಲ್ಲಿ ಇತ್ತೀಚೆಗೆ ಹಣಕಾಸು ಫೆಡರಲಿಸಂ ಕುರಿತು ಉಪನ್ಯಾಸ ನೀಡಿದ ಆರ್​ಬಿಐನ ಮಾಜಿ ಗವರ್ನರ್ ಡಿ. ಸುಬ್ಬರಾವ್, ಪೈಪೋಟಿಯ ಉಚಿತ ಕೊಡುಗೆಗಳ ಸಂಸ್ಕೃತಿಯ ವಿಷವರ್ತುಲವನ್ನು ನಿಯಂತ್ರಿಸಲು ನೀತಿ ಸಂಹಿತೆಯೊಂದನ್ನು ರೂಪಿಸಬೇಕೆಂದು ಸೂಚಿಸಿದ್ದಾರೆ. ಯಾವುದೇ ಪಕ್ಷವು ಉಚಿತ ಕೊಡುಗೆಗಳ ರಾಜಕೀಯದ ಪ್ರಲೋಭನೆಯಿಂದ ಹೊರತಾಗಿಲ್ಲವಾದ್ದರಿಂದ, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್​ಬಿಎಂ) ಕಾಯ್ದೆಗೆ ಹೋಲುವ ಬಂಧಕ ಚೌಕಟ್ಟನ್ನು ಜಾರಿಗೆ ತರುವುದು ಅಗತ್ಯವಾಗಿದೆ.

ಕೇವಲ ಸೂಚಕ ಅಥವಾ ನೈತಿಕ ಸಂಹಿತೆಯು ನಿಷ್ಪರಿಣಾಮಕಾರಿಯಾಗುತ್ತದೆ. ಏಕೆಂದರೆ ಇದು ಯಾವುದೇ ಪಕ್ಷವು ಅತಿರಂಜಿತ ಭರವಸೆಗಳನ್ನು ಘೋಷಿಸುವುದನ್ನು ಸ್ವಯಂಪ್ರೇರಿತವಾಗಿ ನಿರ್ಬಂಧಿಸಲಾರದು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ನೀತಿ ಸಂಹಿತೆಯು ಚುನಾವಣಾ ಭರವಸೆಗಳು ಆರ್ಥಿಕವಾಗಿ ಕಾರ್ಯಸಾಧ್ಯ ಮತ್ತು ಆರ್ಥಿಕವಾಗಿ ಸುಸ್ಥಿರವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ.

ಉಚಿತ ಕೊಡುಗೆಗಳು ಮತ್ತು ಸಬಲೀಕರಣ: ಹಿಂದಿನ ಕಾಲದ ಚೀನೀ ತತ್ವಜ್ಞಾನಿ ಲಾವೋ ತ್ಸು ಅವರ ಮಾತೊಂದು ಹೀಗಿದೆ: "ಒಬ್ಬ ಮನುಷ್ಯನಿಗೆ ಒಂದು ಮೀನು ಕೊಟ್ಟರೆ ಆತ ಅವತ್ತು ಊಟ ಮಾಡಬಲ್ಲ. ಆದರೆ ಅದೇ ಅವನಿಗೆ ಮೀನು ಹಿಡಿಯುವುದು ಹೇಗೆಂದು ಕಲಿಸಿದರೆ ಆತ ಜೀವನಪರ್ಯಂತ ಊಟ ಮಾಡಬಲ್ಲ". ಈ ಮಾತು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಸ್ತುತವಾಗಿದೆ. ತಾತ್ಕಾಲಿಕ ಉಚಿತ ಕೊಡುಗೆಗಳ ಬದಲು, ನಮ್ಮನ್ನಾಳುವವರು ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ದೀರ್ಘಾವಧಿಯಲ್ಲಿ ನಾಗರಿಕರನ್ನು ಸಬಲೀಕರಣಗೊಳಿಸುವ ರಚನಾತ್ಮಕ ಸುಧಾರಣೆಗಳತ್ತ ಗಮನ ಹರಿಸಬೇಕಿದೆ.

ಉಚಿತ ಕೊಡುಗೆಗಳು ಚುನಾವಣಾ ಲಾಭ ನೀಡಬಹುದು, ಆದರೆ ಅವು ಭಾರತವು ಭರಿಸಲಾಗದಂಥ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಲ್ಲವು. ರಾಷ್ಟ್ರದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಲು, ಜನಪ್ರಿಯ ಉಚಿತ ಕೊಡುಗೆಗಳ ರಾಜಕೀಯವನ್ನು ಮರುಪರಿಶೀಲಿಸುವ ಮತ್ತು ಸುಸ್ಥಿರ ಕಲ್ಯಾಣ ನೀತಿಗಳತ್ತ ಕೆಲಸ ಮಾಡುವ ಸಮಯ ಇದಾಗಿದೆ.

ಲೇಖಕರು: ದೇವೇಂದ್ರ ಪೂಲಾ, ಹಿರಿಯ ಸಂಶೋಧನಾ ಫೆಲೋ, ಸೆಂಟರ್ ಫಾರ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಸ್ಟಡೀಸ್.

ಜಾಧವ್ ಚಕ್ರಧರ್, ಸಹಾಯಕ ಪ್ರಾಧ್ಯಾಪಕ, ಸೆಂಟರ್ ಫಾರ್ ಎಕನಾಮಿಕ್ ಆ್ಯಂಡ್ ಸೋಶಿಯಲ್ ಸ್ಟಡೀಸ್ (ಸಿಇಎಸ್).

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಗರಿಷ್ಠ ಶೇ.26 ಹೆಚ್ಚಳ: 7 ನಗರಗಳಲ್ಲಿ ಸಿಲಿಕಾನ್​ ಸಿಟಿಗೆ ಮೊದಲ ಸ್ಥಾನ - BENGALURU AVG OFFICE RENT RISES

ETV Bharat Logo

Copyright © 2025 Ushodaya Enterprises Pvt. Ltd., All Rights Reserved.