ನವದೆಹಲಿ: ಕೋಲ್ಕತ್ತಾ ಮೂಲಕ ಅನುಭವಿ ಕ್ರೀಡಾಪಟು ಶ್ರುತಿ ವೋರಾ ಅವರು ತ್ರೀಸ್ಟಾರ್ ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್ನಲ್ಲಿ ಗೆಲುವು ದಾಖಲಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಅಶ್ವಾರೋಹಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಭಾರತದ ಈಕ್ವೆಸ್ಟ್ರಿಯನ್ ಫೆಡರೇಶನ್ (ಇಎಫ್‌ಐ) ಗುರುವಾರ ಪ್ರಕಟಿಸಿದೆ.
ಜೂ. 7-9 ರಂದು ಸ್ಲೊವೇನಿಯಾದ ಲಿಪಿಕಾದಲ್ಲಿ ನಡೆದ ಸಿಡಿಐ-3 ಸ್ಪರ್ಧೆಯಲ್ಲಿ ಶ್ರುತಿ 67.761 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಮೊಲ್ಡೊವಾದ ಟಟಿಯಾನಾ ಆಂಟೊನೆಂಕೊ (ಆಚೆನ್) 66.522 ಅಂಕ ಗಳಿಸಿದರೆ, ಆಸ್ಟ್ರಿಯಾದ ಜೂಲಿಯನ್ ಗೆರಿಚ್ 66.087 ಅಂಕ ಗಳಿಸುವ ಮೂಲಕ ಅಗ್ರ-3ರಲ್ಲಿ ಸ್ಥಾನ ಪಡೆದರು.
ಈಕ್ವೆಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್‌ಐ) ಪ್ರಧಾನ ಕಾರ್ಯದರ್ಶಿ ಕರ್ನಲ್ ಜೈವೀರ್ ಸಿಂಗ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. 'ಭಾರತೀಯ ಅಶ್ವಾರೋಹಿ ಭ್ರಾತೃತ್ವಕ್ಕೆ ಇದು ತುಂಬಾ ಒಳ್ಳೆಯ ಸುದ್ದಿ. ಶ್ರುತಿ ಅವರ ಈ ಸ್ಪೂರ್ತಿದಾಯಕ ಆಟವನ್ನು ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಅನೇಕ ಮಹಿಳೆಯರು ಕ್ರೀಡೆಯನ್ನು ಮೆಚ್ಚಿಕೊಂಡು ಭಾಗಿಯಾಗುತ್ತಿದ್ದಾರೆ. ಈ ರೀತಿಯ ಸಾಧನೆಗಳು ಶ್ರೇಷ್ಠತೆಗಾಗಿ ಶ್ರಮಿಸಲು ಇನ್ನೂ ಅನೇಕ ಕುದುರೆ ಸವಾರರನ್ನು ಪ್ರೇರೇಪಿಸುತ್ತವೆ' ಎಂದಿದ್ದಾರೆ.