Sanju Samson Father Allegation: ಭಾರತ ಕ್ರಿಕೆಟ್ ತಂಡ ಟಿ20 ಸರಣಿಗಾಗಿ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ಸರಣಿಗಾಗಿ ಆಯ್ಕೆಯಾದ ತಂಡದಲ್ಲಿ ಸಂಜು ಸ್ಯಾಮ್ಸನ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಸಂಜು, ಶತಕ ಸಿಡಿಸಿ ಹರಿಣಗಳ ವಿರುದ್ಧ ಘರ್ಜಿಸಿದ್ದರು. ಅಲ್ಲದೇ ಈ ಪಂದ್ಯವನ್ನೂ ಟೀಂ ಇಂಡಿಯಾ ಗೆದ್ದುಕೊಂಡಿತ್ತು. ನಂತರ ನಡೆದ ಎರಡು ಪಂದ್ಯಗಳಲ್ಲಿ ಸಂಜು ಶೂನ್ಯ ಸುತ್ತಿದ್ದಾರೆ.
ಏತನ್ಮಧ್ಯೆ, ಸಂಜು ಸ್ಯಾಮ್ಸನ್ ಅವರ ತಂದೆ ನಾಲ್ವರು ಹಿರಿಯ ಆಟಗಾರರ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಆ ನಾಲ್ವರಿಂದ ನನ್ನ ಮಗನ 10 ವರ್ಷದ ಕ್ರಿಕೆಟ್ ಕೆರಿಯರ್ ಹಾಳಾಯಿತು ಎಂದು ಆರೋಪಿಸಿದ್ದಾರೆ.
ಹೌದು, ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಆರೋಪ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಟೀಂ ಇಂಡಿಯಾದ 3 ಮಾಜಿ ನಾಯಕರು ಮತ್ತು ಒಬ್ಬ ತರಬೇತುದಾರನಿಂದಾಗಿ ಮಗನ ಕ್ರಿಕೆಟ್ ಕೆರಿಯರ್ ಹಾಳಾಗಿದೆ ಎಂದಿದ್ದಾರೆ.
Sanju samson father accused Dhoni,Rohit and Kohli for not picking his son in the team when he was averaging 28 in list A,35 in FC, and 27 in ipl until 2020
— π (@shinzohattori5) November 12, 2024
Sanju's PR wants to hide this video from youpic.twitter.com/sYaQKoU9gu
ಮಲಯಾಳಂನ ಖಾಸಗಿ ಮಾಧ್ಯಮದಲ್ಲಿ ಮಾತನಾಡಿರುವ ಅವರು, ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಧೋನಿ, ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಂದ ತಮ್ಮ ಮಗನ ಹತ್ತು ವರ್ಷದ ಕ್ರಿಕೆಟ್ ಹಾಳಾಗಿದೆ. ಇದರಿಂದಾಗಿ ಸಂಜು ತುಂಬಾ ನೊಂದುಕೊಂಡಿದ್ದ. ಇದೀಗ ಚೇತರಿಸಿಕೊಂಡಿದ್ದಾನೆ ಎಂದಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಅವರ ತಂದೆ ಪ್ರಸ್ತುತ ಟೀಂ ಇಂಡಿಯಾದ ಕೋಚ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಮಗನ ಬೆಂಬಲಕ್ಕೆ ನಿಂತ ಕೋಚ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಕೃತಜ್ಞತೆ ಎಂದಿದ್ದಾರೆ. ಇದೇ ವೇಳೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ವಿರುದ್ಧವೂ ಕೆಲ ಆರೋಪ ಮಾಡಿದ್ದಾರೆ. ಕೃಷ್ಣಮಾಚಾರಿ ಸಂಜು ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟಿ20ಯಲ್ಲಿ ಸಂಜು ಶತಕ ಸಿಡಿಸಿದ ಬಳಿಕ ಕೃಷ್ಣಮಾಚಾರಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಸಂಜು ತಂದೆ ಅಸಮಾಧಾನ ಹೊರಹಾಕಿದ್ದು ಯಾವುದೇ ತಂಡದ ವಿರುದ್ಧ ಶತಕ ಸಿಡಿಸಿದರೂ ಅದು ಶತಕವೇ ಸರಿ ಎಂದಿದ್ದಾರೆ.
ವಿಶ್ವನಾಥ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. 2016ರಲ್ಲೂ ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಅದಾದ ಬಳಿಕ ಅವರನ್ನು ಮೈದಾನಕ್ಕೆ ಕರೆತರದಂತೆ ಎಚ್ಚರಿಕೆ ನೀಡಲಾಗಿತ್ತು.
ಸಂಜು ಸ್ಯಾಮ್ಸನ್ ದಾಖಲೆ: ಸಂಜು ಇದುವರೆಗೂ ಒಟ್ಟು 16 ODI ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 1 ಶತಕ ಮತ್ತು 3 ಅರ್ಧಶತಕಗಳ ಸಹಾಯದಿಂದ 510 ರನ್ ಗಳಿಸಿದ್ದಾರೆ. 36 T20I ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 701 ರನ್ ಕಲೆಹಾಕಿದ್ದಾರೆ. 2 ಶತಕ 2 ಅರ್ಧಶತಕ ದಾಖಲಿಸಿದ್ದಾರೆ. ಟಿ20ಯಲ್ಲಿ 111 ಇವರ ಹೈಸ್ಕೋರ್ ಆಗಿದೆ.
ಇದನ್ನೂ ಓದಿ: IND vs SA T20: ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದ ತಿಲಕ್ ವರ್ಮಾ: ಈ ಸಾಧನೆ ಮಾಡಿದ 4ನೇ ಭಾರತೀಯ!