ETV Bharat / business

ಮಂಗಳೂರು-ದೆಹಲಿ ನಡುವೆ ಪ್ರತಿದಿನ ನೇರ ವಿಮಾನಯಾನ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್ - MANGALURU DELHI FLIGHT

ಮಂಗಳೂರು ಮತ್ತು ದೆಹಲಿ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನಯಾನ ಸೇವೆ ಆರಂಭಿಸಿದೆ.

ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿದಿನ ನೇರ ವಿಮಾನಯಾನ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Feb 2, 2025, 12:46 PM IST

ಮಂಗಳೂರು: ಕರ್ನಾಟಕದ ವಿಮಾನ ಪ್ರಯಾಣಿಕರಿಗಾಗಿ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ನೇರ ವಿಮಾನಯಾನ ಸೇವೆ ಆರಂಭಿಸಿದೆ.

ಈ ಮಾರ್ಗದ ಮೊದಲ ವಿಮಾನ ಐಎಕ್ಸ್ 1552 ಮಂಗಳೂರಿನಿಂದ ಬೆಳಿಗ್ಗೆ 6.40ಕ್ಕೆ ಹೊರಟು ಫೆಬ್ರವರಿ 1ರಂದು ಬೆಳಿಗ್ಗೆ 9.35ಕ್ಕೆ ದೆಹಲಿಗೆ ಬಂದಿಳಿದಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದರಂತೆ ಐಎಕ್ಸ್ 2768 ವಿಮಾನವು ದೆಹಲಿಯಿಂದ ಬೆಳಿಗ್ಗೆ 6.40ಕ್ಕೆ ಹೊರಟು ಬೆಳಿಗ್ಗೆ 9.35ಕ್ಕೆ ಮಂಗಳೂರಿಗೆ ಬಂದಿಳಿದಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರೋಡ್ರೋಮ್ ರೆಸ್ಕ್ಯೂ ಆ್ಯಂಡ್ ಫೈರ್ ಫೈಟಿಂಗ್ (ಎಆರ್​ಎಫ್ಎಫ್) ಘಟಕವು ಮೊದಲ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಜಲ ಫಿರಂಗಿ ಸೆಲ್ಯೂಟ್​ನೊಂದಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು. ಮೊದಲ ವಿಮಾನದಲ್ಲಿ ಮಂಗಳೂರಿನಿಂದ ದೆಹಲಿಗೆ 167 ಪ್ರಯಾಣಿಕರು ಮತ್ತು ದೆಹಲಿಯಿಂದ ಮಂಗಳೂರಿಗೆ 144 ಪ್ರಯಾಣಿಕರು ಸಂಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, "ಈ ಹೊಸ ವಿಮಾನಯಾನ ಸೇವೆಯು ವಾಣಿಜ್ಯ ಮತ್ತು ವಿರಾಮ ಪ್ರಯಾಣಿಕರಿಗೆ ಪ್ರಯೋಜನ ನೀಡುವುದಲ್ಲದೆ, ಇತರ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಸಾರಿಗೆ ಆಯ್ಕೆಗಳನ್ನು ಹೆಚ್ಚಿಸುತ್ತದೆ. ಸಂಪರ್ಕವನ್ನು ಬಲಪಡಿಸಲು ಮತ್ತು ಪ್ರದೇಶದಲ್ಲಿ ಹೆಚ್ಚುತ್ತಿರುವ ಪ್ರಯಾಣದ ಅಗತ್ಯಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆಯ ಸೇರ್ಪಡೆಯೊಂದಿಗೆ, ಈಗ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿದಿನ ಎರಡು ನೇರ ವಿಮಾನಯಾನ ಆಯ್ಕೆಗಳಿವೆ. ಇದು ಇಂಡಿಗೊ ನಿರ್ವಹಿಸುತ್ತಿರುವ ಪ್ರಸ್ತುತ ಸಂಜೆ ವಿಮಾನಯಾನಕ್ಕೆ ಪೂರಕವಾಗಿದೆ. ಹೊಸ ಮಾರ್ಗವು ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಮತ್ತು ಎರಡು ನಗರಗಳ ನಡುವೆ ಪ್ರಯಾಣಿಸುವ ಜನರಿಗೆ ಆಯ್ಕೆಗಳನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ" ಎಂದು ಹೇಳಿದರು.

ಜನವರಿಯಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಪುಣೆಗೆ ಎರಡು ವಾರಾಂತ್ಯದ ವಿಮಾನಗಳನ್ನು ಪ್ರಾರಂಭಿಸಿತ್ತು. ಹೆಚ್ಚುತ್ತಿರುವ ಪ್ರಾದೇಶಿಕ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಪ್ರಯತ್ನವಾಗಿ ಈ ಹೊಸ ವಿಮಾನಯಾನ ಸೇವೆಗಳನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: ಕೇಂದ್ರ ಬಜೆಟ್​​ನಲ್ಲಿ ಘೋಷಣೆ - INCOME TAX SLABS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.