ETV Bharat / state

ಹುಟ್ಟುಹಬ್ಬದ ವೇಳೆ ಎರಡು ಗುಂಪುಗಳ ಜಗಳ: ಓರ್ವನಿಗೆ ಚಾಕು ಇರಿತ - MAN STABBED

ಶನಿವಾರ ತಡರಾತ್ರಿ ಬರ್ತ್​ಡೇ ಪಾರ್ಟಿ ವೇಳೆ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಓರ್ವನಿಗೆ ಚಾಕು ಇರಿಯಲಾಗಿದೆ.

HUBBALLI  DHARWAD  STABBING  ಚಾಕು ಇರಿತ
ಗಾಯಗೊಂಡ ಜೇಬಿ ಉಲ್ಲಾ ಬಳ್ಳಾರಿ (ETV Bharat)
author img

By ETV Bharat Karnataka Team

Published : Feb 2, 2025, 12:51 PM IST

ಹುಬ್ಬಳ್ಳಿ: ಜನ್ಮದಿನದ ಸಂಭ್ರಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಓರ್ವನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ ತಡರಾತ್ರಿ ನವನಗರದಲ್ಲಿ‌ ನಡೆದಿದೆ.

ಜೇಬಿ ಉಲ್ಲಾ ಬಳ್ಳಾರಿ (35) ಗಾಯಾಳು. ಸಿರಾಜ್​ (44) ಚಾಕು ಇರಿದ ಆರೋಪಿ. ಗಾಯಗೊಂಡ ವ್ಯಕ್ತಿಯನ್ನು ಕಿಮ್ಸ್​ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯ್ಕ ಭೇಟಿ ನೀಡಿ ಗಾಯಾಳು ಜೇಬಿ ಬಳ್ಳಾರಿಯಿಂದ ಮಾಹಿತಿ ಪಡೆದುಕೊಂಡರು.

ಆರೋಪಿ ಬಂಧನ: ಘಟನೆಯ ಮಾಹಿತಿ ಸಿಗುತ್ತಿದ್ದಂತೇ ನವನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್​ ಸೆಮಿವುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಚಾಕು ಇರಿದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದೆ. ಕ್ಷುಲ್ಲಕ‌ ಕಾರಣಕ್ಕೆ‌ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: 13 ಗಂಭೀರ ಪ್ರಕರಣಗಳ ಆರೋಪಿ ಭರತ್ ಶೆಟ್ಟಿ ಗೂಂಡಾ ಕಾಯ್ದೆಯಡಿ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.