ETV Bharat / state

ಕೃಷಿ ಮೇಳ 2024: ಆನ್‌ಲೈನ್ ಮೂಲಕವೂ ಮೇಳ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಕೃಷಿ ವಿವಿ - KRISHI MELA

ಬೆಂಗಳೂರು ಕೃಷಿ ವಿವಿ ಈ ಬಾರಿ ಆನ್​ಲೈನ್ ಮೂಲಕವೂ ಮೇಳವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.

krishi-mela
ಕೃಷಿ ಮೇಳಕ್ಕೆೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದರು (ETV Bharat)
author img

By ETV Bharat Karnataka Team

Published : Nov 14, 2024, 10:54 PM IST

ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆೆ ಚಾಲನೆ ಸಿಕ್ಕಿದ್ದು, ಭೌತಿಕವಾಗಿ ಕೃಷಿ ಮೇಳಕ್ಕೆೆ ಬರಲಾಗದವರು ಆನ್‌ಲೈನ್ ಮೂಲಕವೂ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿರುವುದು ಈ ಬಾರಿಯ ವಿಶೇಷವಾಗಿದೆ.

ಹವಾಮಾನ ಚತುರ ಡಿಜಿಟಲ್ ಎಂಬ ಘೋಷವಾಕ್ಯದೊಂದಿಗೆ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆೆ ಇಂದು ಬೆಳಗ್ಗೆೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ. ಸೆನ್ಸರ್ ಆಧಾರಿತ ಡ್ರೋನ್, ವಿವಿಧ ಬೆಳೆಗಳಿಗೆ ಟ್ರ್ಯಾಕ್ಟರ್‌ನಲ್ಲಿ ಔಷಧ ಸಿಂಪಡಿಸುವ ಸೆನ್ಸರ್ ಆಧಾರಿತ ಯಂತ್ರ ಹೀಗೆ ಹೊಸ ಹೊಸ ತಂತ್ರಜ್ಞಾನಗಳು ಈ ಬಾರಿ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿವೆ.

State Level Best Farmer Award
ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ರೈತರನ್ನ ಗೌರವಿಸಲಾಯಿತು (ETV Bharat)

ಇನ್ನು ಕೃಷಿ ಬಾಟ್ ಈ ಬಾರಿಯ ವಿಶೇಷವಾಗಿದ್ದು, ಸುಧಾರಿತ ಬಿತ್ತನೆ ತಂತ್ರಜ್ಞಾನವನ್ನು ಹೊಂದಿದ್ದು, ಪ್ರತಿ ಬೀಜವನ್ನು ಗರಿಷ್ಠ ಆಳದಲ್ಲಿ ಮತ್ತು ಗರಿಷ್ಠ ಇಳುವರಿಗಾಗಿ ಸಮಾನಾಂತರದಲ್ಲಿ ನೆಡಲಾಗುತ್ತದೆ. ಇದು ಸಮಯವನ್ನು ಉಳಿಸುವುದಲ್ಲದೇ, ಬೀಜ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಷೇತ್ರದಾದ್ಯಂತ ಏಕರೂಪದ ಬೆಳವಣಿಗೆ ಖಾತ್ರಿಗೊಳಿಸುತ್ತದೆ. ಕೃಷಿ ಬಾಟ್ ಕೇವಲ ಬೀಜಗಳನ್ನು ನೆಡುವುದಲ್ಲದೇ ಗೊಬ್ಬರವನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಸಹಕಾರಿಯಾಗಿರುತ್ತದೆ.

Agriculture Minister N Chaluvarayaswamy
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿದರು (ETV Bharat)

ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಬೆಳೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೃಷಿಬಾಟ್ ಅನ್ನು ಸಂಪೂರ್ಣವಾಗಿ ಸರಳ ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಲಾಗುತ್ತದೆ. ಗೊಬ್ಬರವನ್ನು ಸಿಂಪಡಿಸುವುದು ಮತ್ತು ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ದೂರದಿಂದಲೇ ಸುಲಭವಾಗಿ ನಿರ್ವಹಿಸಬಹುದಾಗಿದೆ. ಉಳಿದಂತೆ ಸುಧಾರಿತ ಯಂತ್ರಗಳ ಪ್ರದರ್ಶನಕ್ಕಾಗಿ ಒಂದು ಎಕರೆ ಭೂಮಿಯಲ್ಲಿ ಪ್ರತ್ಯೇಕ ಪೆವಿಲಿಯನ್ ವ್ಯವಸ್ಥೆೆ ಸೇರಿದಂತೆ ಇತರೆ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣದ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

krishi mela
ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ (ETV Bharat)

ಕೃಷಿ ಮೇಳದಲ್ಲಿ 700 ಮಳಿಗೆಗಳು ಇದ್ದು, ಅಲಂಕಾರಿಕ ಮೀನುಗಳು ಸಹ ವಿಶೇಷವಾಗಿ ಜನರ ಗಮನ ಸೆಳೆಯುತ್ತಿದೆ. ಸಿರಿಧಾನ್ಯ ಪೂರಕ ಆಹಾರಕ್ಕೆೆ ಸಂಬಂಧಿಸಿದಂತೆ ವಿಶೇಷ ಮಳಿಗೆ ತೆರೆಯಲಾಗಿದೆ. ರೈತರಿಗೆ ಅನುಕೂಲವಾಗುವ ಕೃಷಿ ಯಂತ್ರೋಪಕರಣಗಳ ಮಾರಾಟ ಕೇಂದ್ರಗಳು ಸಹ ಇವೆ.

146 ರೈತರಿಗೆ ಸನ್ಮಾನ: ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಇದೇ ವೇಳೆ ಗೌರವಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯಮಟ್ಟದಲ್ಲಿ 6 ಮಂದಿ, ಜಿಲ್ಲಾ ಮಟ್ಟದಲ್ಲಿ 20 ಹಾಗೂ ತಾಲೂಕು ಮಟ್ಟದಲ್ಲಿ 120 ಮಂದಿ ರೈತರು ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದಾರೆ.

Minister N Chaluvarayaswamy
ಕೃಷಿ ಮೇಳಕ್ಕೆೆ ಚಾಲನೆ ನೀಡಿದ ಸಚಿವ ಎನ್ ಚಲುವರಾಯಸ್ವಾಮಿ (ETV Bharat)

ಕಡಿಮೆ ಅವಧಿಯ ಅಧಿಕ ಇಳುವರಿ ತಳಿಗಳ ಪ್ರದರ್ಶನದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಕೊಡುವ ಮುಸುಕಿನ ಜೋಳ, ಸಂಕರಣ ತಳಿ, ಅಲಸಂದೆ ತಳಿ, ಸೂರ್ಯಕಾಂತಿ ಸಂಕರಣ ತಳಿ, ಬಾಜ್ರ ನೇಪಿಯರ್ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ರಿಯಾಯಿತಿ ದರದಲ್ಲಿ ಮುದ್ದೆೆ ಊಟ: ಮೇಳಕ್ಕೆೆ ಬರುವ ರೈತರು ಹಾಗೂ ರೈತರೇತರರಿಗೆ ಮೇಳದಲ್ಲಿ ರಿಯಾಯಿತಿ ದರದಲ್ಲಿ ಮುದ್ದೆೆ ಊಟದ ವ್ಯವಸ್ಥೆೆ ಮಾಡಲಾಗಿದೆ. ಇದಲ್ಲದೆ ಇತರೆ ತಿಂಡಿ ಮಾರಾಟ ಮಳಿಗೆಗಳು ಸಹ ಮೇಳದಲ್ಲಿ ಇವೆ.

ಉಚಿತ ಪ್ರವೇಶ : ಮೇಳಕ್ಕೆೆ ಬರುವವರಿಗೆ ಪ್ರವೇಶ ಉಚಿತವಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬಸ್‌ನಲ್ಲಿ ಬರುವವರಿಗೆ ಜಿಕೆವಿಕೆ ಗೇಟ್‌ನಿಂದ ಒಳಗಡೆ ಕರೆದೊಯ್ಯಲು ಸಂಸ್ಥೆೆಯ ಬಸ್‌ಗಳನ್ನು ವ್ಯವಸ್ಥೆೆ ಮಾಡಲಾಗಿದೆ. ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆೆ ಕಲ್ಪಿಸಲಾಗಿದೆ.

ಇದನ್ನೂ ಓದಿ : ಕೃಷಿ ಮೇಳ 2024; ಸೆನ್ಸಾರ್ ಆಧಾರಿತ ಸ್ವಯಂಚಾಲಿತ ಬೂಮ್ ಸ್ಪ್ರೇಯರ್‌ ಪರಿಚಯಿಸಿದ ಕೃಷಿ ವಿವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.