ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ಪಟು ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ಪರ 'ಮೇಜರ್ ಲೀಗ್ ಫುಟ್ಬಾಲ್' ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮದೇ ಆದ ದಾಖಲೆ ಬರೆದರು. ದಾಖಲೆಯ ಗೋಲುಗಳನ್ನು ಗಳಿಸುವ ಮೂಲಕ ಮತ್ತೊಬ್ಬ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಹಿಂದಿಕ್ಕಿದರು. ಆದರೆ, ಅಟ್ಲಾಂಟಾ ಯುನೈಟೆಡ್ ವಿರುದ್ಧ ಪಂದ್ಯದಲ್ಲಿ ಈ ಗೋಲುಗಳು ಅವರ ತಂಡಕ್ಕೆ ಗೆಲುವು ತಂದುಕೊಡದಿರುವುದು ಬೇಸರದ ಸಂಗತಿ ಎಂದೇ ಹೇಳಬಹುದು.
2-3 ಗೋಲುಗಳಿಂದ ಸೋಲುವ ಮೂಲಕ ಅವರ ಇಂಟರ್ ಮಿಯಾಮಿ ಮೇಜರ್ ಲೀಗ್ ಸಾಕರ್ (MLS ) ಕಪ್ನ ಪ್ಲೇ ಆಫ್‌ಗಳಿಂದ ಹೊರ ಬಿದ್ದಿತು. ಈ ವರ್ಷದ ಆರಂಭದಿಂದ ಒಟ್ಟು 19 ಪಂದ್ಯಗಳಲ್ಲಿ ಕಾಣಿಸಿಕೊಂಡ ಲಿಯೋನೆಲ್ ಮೆಸ್ಸಿ, 20 ಗೋಲುಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ರೊನಾಲ್ಡೊ ಅವರ ದಾಖಲೆಯನ್ನು ಮುರಿದರು. ಒಂದರ್ಥದಲ್ಲಿ ಹಿಂದಿಕ್ಕಿ ಮುಂದೆ ಹೋದರು ಎಂದೂ ಹೇಳಬಹುದು. ಕಡಿಮೆ ಸಂಖ್ಯೆಯ ಪಂದ್ಯಗಳೊಂದಿಗೆ ವೃತ್ತಿ ಜೀವನದಲ್ಲಿ 850 ಗೋಲು (ಲೀಗ್ ಮತ್ತು ದೇಶ)ಗಳನ್ನು ಗಳಿಸುವ ಮೂಲಕ ರೊನಾಲ್ಡೊ ಅವರ ದಾಖಲೆ ಅಳಿಸಿ ಹಾಕಿದರು. ರೊನಾಲ್ಡೊ 1,179 ಅಧಿಕೃತ ಪಂದ್ಯಗಳಲ್ಲಿ 850 ಗೋಲು ಗಳಿಸಿದ್ದರೆ, ಮೆಸ್ಸಿ 1,081 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Lionel Messi has managed to reach 850 career goals in 98 fewer games than Cristiano Ronaldo 👀🎯 pic.twitter.com/zluv8M4mW3
— Football for Life (@footballdtlife) November 14, 2024
1000 ಗೋಲು ಗಳಿಸುವ ಗುರಿ: ಸದ್ಯ 900 ಗೋಲುಗಳನ್ನು ತಮ್ಮದಾಗಿಸಿಕೊಂಡಿರುವ ಪೋರ್ಚಗಲ್ ದೇಶದ ದಿಗ್ಗಜ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೊ ತಾವು ತಮ್ಮ ವೃತ್ತಿಜೀವನದಲ್ಲಿ 1,000 ಗೋಲುಗಳನ್ನು ಗಳಿಸುವ ಗುರಿ ಹೊಂದುವುದಾಗಿ ಹೇಳಿಕೊಂಡಿದ್ದಾರೆ. ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್‌ನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು "ನಾನು 1,000 ಗೋಲುಗಳನ್ನು ಗಳಿಸಿದರೆ, ಅದ್ಭುತವಾಗಿರುತ್ತದೆ" ಎಂದು ತಮ್ಮ ಬಗ್ಗೆ ತಾವೇ ವರ್ಣಿಸಿಕೊಂಡ ರೊನಾಲ್ಡೊ, "ನಾನು ಆ ಸಾಧನೆ ಮಾಡದಿದ್ದರೂ ಈಗಾಗಲೇ ಇತಿಹಾಸದಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿದ್ದೇನೆ" ಅಂತಲೂ ಹೇಳಿಕೊಂಡಿದ್ದಾರೆ.
"ನಿಜ ಹೇಳಬೇಕೆಂದರೆ, ನಾನು ನನ್ನನ್ನು ದೂಷಿಸಬೇಕಾಗಿದೆ, ನನ್ನ ಜೀವನದ ಜೊತೆಗೆ ಫುಟ್ಬಾಲ್ ಹಾಗೂ ಕೆಲವು ವಿಷಯಗಳಲ್ಲಿ, ನಾನು ಈಗ ಈ ಕ್ಷಣದಲ್ಲಿ ವಾಸಿಸುತ್ತಿದ್ದೇನೆ. ಇದೇ ಅತ್ಯಂತ ಮುಖ್ಯವಾದ ವಿಷಯ ಅಂತ ನಾನು ಭಾವಿಸಿಕೊಂಡಿದ್ದೇನೆ. ನಾವು ತುಂಬಾ ಮುಂದೆ ಯೋಚಿಸುವ ಅಗತ್ಯವಿಲ್ಲ, ನಾನು ಈಗ ತುಂಬಾ ಮುಂದೆ ಯೋಚಿಸಲೂ ಸಾಧ್ಯವಿಲ್ಲ, ಇದು ಕ್ಷಣಿಕ. ಈ ಕ್ಷಣದಲ್ಲಿ ಬದುಕಬೇಕು, ಈ ಕ್ಷಣವನ್ನು ಆನಂದಿಸಬೇಕು. ನಾನು ಈಗ ಏನು ಮಾಡಲು ಯೋಗ್ಯನಾಗಿದ್ದೇನೋ ಅದನ್ನು ಮಾಡುತ್ತೇನೆ" ಎಂದು ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್‌ನಲ್ಲಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ರೊನಾಲ್ಡೊ ತಮ್ಮ ಮನದ ಮಾತು ಹೇಳಿದ್ದರು.
Lionel Messi 🇦🇷 and Cristiano Ronaldo 🇵🇹 stats in 2024.
— REMA GIRLFRIEND (@remagirlfriend) November 14, 2024
CR7 Stats:
🏟️ 46 Games
⚽ 35 Goals
🅰️ 6 Assists
M10 Stats.
🏟️ 34 Games
⚽ 29 Goals
🅰️ 17 Assists
Legends. 🐐❤️ pic.twitter.com/jqIZYr80Yk
ರೊನಾಲ್ಡೊ ಫುಟ್‌ಬಾಲ್ ಇತಿಹಾಸದಲ್ಲಿ 900+ ಗೋಲುಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಬಳಿಕ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 850 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೋರ್ಚುಗಲ್‌ನ ಮತ್ತೊಬ್ಬ ಆಟಗಾರ ರುಬೆಲ್ ಡಿಯಾಸ್ 769 ಗೋಲುಗಳನ್ನು ಗಳಸಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಫುಟ್ಬಾಲ್ ಲೋಕದ ದಂತಕಥೆ ಬ್ರೆಜಿಲ್‌ನ ಪೀಲೆ 765 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: 360 ದಿನಗಳ ಬಳಿಕ ಮೈದಾನಕ್ಕೆ ಕಾಲಿಟ್ಟ ಶಮಿ: ರಣಜಿ ಮೊದಲ ಪಂದ್ಯದಲ್ಲೇ 4 ವಿಕೆಟ್ ಉಡೀಸ್!