ETV Bharat / bharat

ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ; 10 ವರ್ಷದಲ್ಲಿ ಪಶ್ಚಿಮ ಘಟ್ಟದ 58.22 ಚದರ ಕಿ.ಮೀ ಅರಣ್ಯ ನಷ್ಟ - INDIA FOREST INCREASED

ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ಸಂಪತ್ತು ದೊಡ್ಡಮಟ್ಟದಲ್ಲಿ ನಾಶವಾಗಿರುವುದು ಆತಂಕ ಹುಟ್ಟಿಸುತ್ತಿದೆ.

forest
ಸಂಗ್ರಹ ಚಿತ್ರ (IANS)
author img

By PTI

Published : Dec 22, 2024, 10:00 AM IST

ನವದೆಹಲಿ: ದೇಶದ ಒಟ್ಟಾರೆ ಅರಣ್ಯ ಮತ್ತು ಮರಗಳ ಹೊದಿಕೆಯ ಪ್ರಮಾಣವು 2021ರಿಂದ 1,445 ಚದರ ಕಿ.ಮೀ ಹೆಚ್ಚಳವಾಗಿದ್ದು, 2023ರಲ್ಲಿ ಒಟ್ಟು ಭೌಗೋಳಿಕ ಪ್ರದೇಶದ ಶೇ 25.17ರಷ್ಟಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.

ಭಾರತದ ಅರಣ್ಯ ಸ್ಥಿತಿಗತಿ ವರದಿ (ಐಎಸ್‌ಎಫ್‌ಆರ್) 2023 ಅನ್ನು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಈ ವರದಿಯ ಪ್ರಕಾರ, ದೇಶದ ಒಟ್ಟಾರೆ ಅರಣ್ಯ ಪ್ರದೇಶವು (Total Forest Cover) 2021ರಲ್ಲಿದ್ದ 7,13,789 ಚ.ಕಿ.ಮೀನಿಂದ 2023ರಲ್ಲಿ 7,15,343 ಚ.ಕಿ.ಮೀ ತಲುಪಿದೆ. ಇದರೊಂದಿಗೆ ದೇಶದ ಒಟ್ಟು ಭೌಗೋಳಿಕ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ 21.76 ತಲುಪಿದೆ.

ಮರಗಳ ಹೊದಿಕೆಯ (Tree Cover) ಪ್ರಮಾಣವು 1,289 ಚ.ಕಿ.ಮೀ ಏರಿಕೆಯಾಗಿದ್ದು, ಇದೀಗ ಒಟ್ಟಾರೆ ಭೌಗೋಳಿಕ ಪ್ರದೇಶದ ಶೇ 3.41ರಷ್ಟಿದೆ ಎಂದು ವರದಿ ತಿಳಿಸಿದೆ.

ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆ ಪ್ರಮಾಣ ಎರಡೂ ಸೇರಿ ಒಟ್ಟು ಭೌಗೋಳಿಕ ವ್ಯಾಪ್ತಿಯ 8,27,357 ಚ.ಕಿ.ಮೀ ಅಥವಾ ಶೇ 25.17ರಷ್ಟಾಗುತ್ತದೆ. ಇದು 2021ರಲ್ಲಿದ್ದ ಪ್ರಮಾಣಕ್ಕಿಂತ 1,445 ಚ.ಕಿ.ಮೀ ಹೆಚ್ಚು ಮತ್ತು ಅರಣ್ಯ ಪ್ರದೇಶ ಒಂದೇ 156 ಚ.ಕಿ.ಮೀ ಹೆಚ್ಚಾಗಿರುವುದು ಗಮನಾರ್ಹ ಎಂದು ವರದಿ ಹೇಳಿದೆ.

ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (ಎಫ್‌ಎಸ್‌ಐ) ಪ್ರಕಾರ, ಅರಣ್ಯ ಹೊದಿಕೆಯು ಎಲ್ಲ ಭೂ ಪ್ರದೇಶದ ಪೈಕಿ ಶೇ 10ಕ್ಕಿಂತ ಹೆಚ್ಚು ಮರಗಳ ಸಾಂದ್ರತೆ ಹೊಂದಿರುವ ಮತ್ತು ಅದು ಒಂದು ಹೆಕ್ಟೇರ್/ಅದಕ್ಕಿಂತ ಹೆಚ್ಚಿನ ಪ್ರದೇಶದ ಮಾಲೀಕತ್ವ/ಕಾನೂನು ಸ್ಥಿತಿಯನ್ನು ಲೆಕ್ಕಿಸದೆ ಹರಡಿರುವ ಎಲ್ಲಾ ಭೂ ಪ್ರದೇಶ. ಇದರ ವ್ಯಾಪ್ತಿಯಲ್ಲಿ ನೈಸರ್ಗಿಕ ಅರಣ್ಯ ಪ್ರದೇಶಗಳು, ಮಾನವ ನಿರ್ಮಿತ ಪ್ಲಾಂಟೇಶನ್‌ಗಳು, ಹಣ್ಣಿನ ತೋಟಗಳು, ಮೇಲಿನ ಮಾನದಂಡದಂತೆ ಗಾತ್ರ ಮತ್ತು ಮರಗಳ ಪ್ರಮಾಣವಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಇತರೆ ಗಿಡ ಮರಗಳಿರುವ ಭೂ ಪ್ರದೇಶಗಳು ಸೇರಿವೆ.

ಒಂದು ಹೆಕ್ಟೇರ್‌ಗಿಂತ ಕಡಿಮೆ ಇರುವ, ಮೀಸಲು ಅರಣ್ಯ ಪ್ರದೇಶದ (ಆರ್‌ಎಫ್‌ಎ) ಹೊರ ಪ್ರದೇಶದಲ್ಲಿ ಮತ್ತು ಪ್ರತ್ಯೇಕವಾಗಿರುವ ಮರಗಳೆಲ್ಲ ಮರಗಳ ಹೊದಿಕೆಯ (Tree Cover) ವ್ಯಾಪ್ತಿಯಲ್ಲಿ ಬರುತ್ತವೆ.

ಮಧ್ಯ ಪ್ರದೇಶದಲ್ಲಿ ಅತೀ ಹೆಚ್ಚು ಅರಣ್ಯ: ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆಯ ವಿಚಾರದಲ್ಲಿ ಮಧ್ಯ ಪ್ರದೇಶ ಮತ್ತೆ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿವೆ ಎಂದು ವರದಿ ತಿಳಿಸಿದೆ.

ಛತ್ತೀಸ್‌ಗಢ, ಉತ್ತರ ಪ್ರದೇಶ, ಒಡಿಶಾ ಮತ್ತು ರಾಜಸ್ತಾನ ರಾಜ್ಯಗಳು ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆ ಎರಡರ ಪ್ರಮಾಣದಲ್ಲೂ ಭಾರೀ ಬೆಳವಣಿಗೆ ಕಂಡಿವೆ. ಮಿಜೋರಾಂ, ಗುಜರಾತ್ ಮತ್ತು ಒಡಿಶಾ ರಾಜ್ಯಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಭಾರೀ ಪ್ರಗತಿ ಕಂಡಿವೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ನಾಶ: ಕಳೆದೊಂದು ದಶಕದ ಅವಧಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಒಟ್ಟಾರೆ 58.22 ಚ.ಕಿ.ಮೀ ಅರಣ್ಯ ಪ್ರದೇಶ ನಷ್ಟವಾಗಿದೆ ಎಫ್‌ಎಸ್‌ಐ ವಿಶ್ಲೇಷಿಸಿದೆ.

ನೀಲಗಿರಿ ವಲಯದಲ್ಲಿ ಬಹುವೇಗವಾಗಿ 123 ಚ.ಕಿ.ಮೀ ಅರಣ್ಯ ನಷ್ಟವಾಗಿರುವುದು ಗಮನಾರ್ಹ. ಈ ಪರ್ವತ ಶ್ರೇಣಿಯು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಹರಡಿದ್ದು, ಪ್ರವಾಸಿತಾಣಗಳಿಗೆ ಪ್ರಸಿದ್ಧಿ ಪಡೆದಿದೆ.

ರಾಷ್ಟ್ರೀಯ ಅರಣ್ಯ ನೀತಿ-1988ರ ಪ್ರಕಾರ, ಭಾರತದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ 33ರಷ್ಟು ಅರಣ್ಯ ಮತ್ತು ಮರಗಳ ಹೊದಿಕೆ ಇರಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.