ETV Bharat / state

ಯಲ್ಲಾಪುರ ಭೀಕರ ಅಪಘಾತ: ತಂದೆಗೆ ಎಳನೀರು ಕುಡಿಸಿ ಹೋದ ಮಗ ಮರಳಿದ್ದು ಶವವಾಗಿ!: ಹತ್ತೂ ಮೃತರದ್ದು ಒಂದೊಂದು ಕಥೆ..!! - YELLAPUR LORRY ACCIDENT

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಲಾರಿ ಅಪಘಾತದಲ್ಲಿ ಒಂದೇ ಊರಿನ 10 ಮಂದಿ ಸಾವನ್ನಪ್ಪಿದ್ದು, ಆ ಊರಿನ ಕುಟುಂಬಗಳು ಕಣ್ಣೀರ ಕಡಲಲ್ಲಿ ಮುಳುಗಿವೆ.

HAVERI  YELLAPUR  LORRY ACCIDENT  10 KILLED IN LORRY ACCIDENT
ಯಲ್ಲಾಪುರ ಭೀಕರ ಅಪಘಾತ:ಹತ್ತೂ ಮೃತರದ್ದು ಒಂದೊಂದು ಕಥೆ.. (ETV Bharat)
author img

By ETV Bharat Karnataka Team

Published : Jan 22, 2025, 3:10 PM IST

ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು. ಅಪಘಾತದಲ್ಲಿ ಮೃತಪಟ್ಟ ಹತ್ತೂ ಮಂದಿಯದ್ದು ಒಂದೊಂದು ಕಥೆ. ಒಬ್ಬ ಮನೆಗೆ ಆಧಾರವಾಗಿದ್ದ, ಇನ್ನೊಬ್ಬ ತಂದೆಗೆ ಆಸರೆಯಾಗಲು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ, ಅದೆಷ್ಟೋ ಕನಸು ಕಂಡಿದ್ದ ಮನೆ ಮಕ್ಕಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಸವಣೂರಿನಲ್ಲಿ ದುಃಖ ಮಡುಗಟ್ಟಿದೆ.

ಹೌದು, ಅಪಘಾತದಿಂದ ಪ್ರಾಣ ಕಳೆದುಕೊಂಡ ಒಬ್ಬರ ಪತ್ನಿ ಗರ್ಭಿಣಿ, ಮತ್ತೊರ್ವನ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿವೆಯಷ್ಟೇ. ಇನ್ನೊಂದು ಕುಟುಂಬದಲ್ಲಿ ಸಣ್ಣ-ಸಣ್ಣ ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳುವರಾರು ಎಂಬ ಚಿಂತೆ. ಇದಕ್ಕಿಂತಲೂ ಘನಘೋರವೆಂದರೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮನೆಯಲ್ಲಂತೂ ಆಕ್ರಂದನವನ್ನ ನೋಡಲಾಗುತ್ತಿಲ್ಲ.

ಅಪಘಾತದಲ್ಲಿ ಸಾವನ್ನಪ್ಪಿದ ಇಮ್ತಿಯಾಜ್​ ಅವರ ಸಹೋದರ ಸಾಧಿಕ್ ಅಹ್ಮದ್ ಹಾಗೂ ಮೃತ ಸಾದಿಕ್ ತಂದೆ ಗೌಸ್ ಮುದ್ದೀನ್ ಪ್ರತಿಕ್ರಿಯೆ. (ETV Bharat)

ಎಂದೂ ಕಾಣದ ಸೂತಕ ಛಾಯೆ: ಹಿಂದೆಂದೂ ಕಾಣದ ಸೂತಕದ ಛಾಯೆ ಸವಣೂರು ಪಟ್ಟಣದಲ್ಲಿ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮುಂದೆ ಜನಸಾಗರವೇ ಹರಿದು ಬಂದಿದೆ. ಕಳೆದುಕೊಂಡ ನೋವನ್ನು ಅರಗಿಸಿಕೊಳ್ಳಲಾಗದೇ ಮನೆಯೊಳಗೆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಮನ ಕಲುಕುವಂತಿದೆ.

ಜೀವನೋಪಾಯಕ್ಕೆ ಹಣ್ಣು- ತರಕಾರಿ ಮಾರಿಕೊಂಡಿದ್ದ ಜನ: ಜೀವನೋಪಾಯಕ್ಕೆ ಹಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದ 10 ಜನರ ದುರ್ಮರಣದಿಂದ ಕುಟುಂಬಗಳ ಆಧಾರಸ್ಥಂಭವೇ ಕಳಚಿ ಬಿದ್ದಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು, ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಳ್ಳುತ್ತಿವೆ.

ಈ ಮಧ್ಯೆ ಒಂದೇ ಕಡೆ 10 ಜನರಿಗೂ ಜನಾದಿಕಿ ನಮಾಜ್ (ಪ್ರಾರ್ಥನೆ) ಮಾಡಲು ಜಮಾತ್​​ ನಿರ್ಧರಿಸಿದ್ದು, ಈ ಕುರಿತಂತೆ ಚರ್ಚಿಸಲಾಗಿದೆ.

ದಯವಿಟ್ಟು ಸರ್ಕಾರ ನಮ್ಮ ನೆರವಿಗೆ ಬರಬೇಕು: ಮೃತ ಸಾದಿಕ್ ತಂದೆ ಗೌಸ್ ಮುದ್ದೀನ್ ಅವರು ದುಃಖದ ನಡುವೆಯು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. "ರಾತ್ರಿ 10 ಗಂಟೆಗೆ ಹೋಗಿದ್ದರು, ರಾತ್ರಿ ಮೂರು ಗಂಟೆಗೆ ಲಾರಿ ಪಲ್ಟಿಯಾಗಿದೆ. ನನಗೆ ಬೆಳಗ್ಗೆ 6 ಗಂಟೆಗೆ ವಿಚಾರ ತಿಳಿಯಿತು. ನಾನು ಹ್ಯಾಂಡಿಕ್ಯಾಪ್. ನನ್ನ ಮನೆ ನಡೆಸುತ್ತಿದ್ದದ್ದೂ ನನ್ನ ಮಗನೇ. ಕೊನೆಯದಾಗಿ ನಿನ್ನೆ ರಾತ್ರಿ 10 ಗಂಟೆಗೆ ನನಗೆ ಮಗ ಎಳನೀರು ತಂದು ಕುಡಿಸಿ ಹೋಗಿದ್ದ. ಮುಂದೆ ಜೀವನ ಹೇಗೆ, ನಾನೂ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಸರ್ಕಾರ ನೆರವಿಗೆ ಬರಬೇಕು" ಎಂದು ಮನವಿ ಮಾಡಿಕೊಂಡರು.

ಮನೆಯ ಜವಬ್ದಾರಿ ನನ್ನ ತಮ್ಮನೇ ಹೊತ್ತಿದ್ದ: ಇನ್ನೋರ್ವ ಮೃತ ಇಮ್ತಿಯಾಜ್​ ಅವರ ಸಹೋದರ ಸಾಧಿಕ್ ಅಹ್ಮದ್, "ಕುಮಟಾ, ಕಾರವಾರ, ಹೊನ್ನಾವರ ಸಂತೆಗೆ ಸುಮಾರು 12 ವರ್ಷದಿಂದ ಹಣ್ಣು-ತರಕಾರಿ ಮಾರಲು ಇವರೆಲ್ಲ ಹೋಗುತ್ತಿದ್ದರು. ತರಕಾರಿ, ಹಣ್ಣಿನ ವ್ಯಾಪಾರ ಮಾಡಿ ನಮ್ಮ ಮನೆ ನಡೆಸುತ್ತಿದ್ದದು ಅವನೇ (ಮೃತ ಇಮ್ತಿಯಾಜ್​). ಉಳಿದ ನಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಅದು ಕೆಲಸ ಇದ್ದರೆ ಮಾತ್ರ".

"ಹೀಗಿದ್ದಾಗ ಪ್ರಮುಖವಾಗಿ ಮನೆಯ ಜವಾಬ್ದಾರಿ ನನ್ನ ತಮ್ಮನೇ ಹೊತ್ತಿದ್ದ. ಅವನು ನಿನ್ನೆ ಸುಮಾರು 11 ಗಂಟೆಗೆ ಮನೆಯಿಂದ ಹೊರಟಿದ್ದ. ಅಪಘಾತವಾದ ವಿಚಾರ ನಮಗೆ ಬೆಳಗ್ಗೆ 4 ಗಂಟೆಗೆ ಗೊತ್ತಾಯಿತು. ಹೇಗೆ ಅಪಘಾತವಾಯಿತು ಎಂದಾಗ ಗಾಡಿ ಪಲ್ಟಿಯಾಗಿದೆ, ಏನಾಗಿಲ್ಲ ಎಂದಿದ್ದರು. ಆದರೆ, ಈಗ ಬಂದು ಸಾವನ್ನಪ್ಪಿರುವುದನ್ನು ಹೇಳಿದ್ದಾರೆ. ನಮ್ಮ ಅಕ್ಕ-ಪಕ್ಕದವರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ನಮಗೆ ಅಷ್ಟು ಅಡ್ಡಾಡಿ ತಿಳಿದಿಲ್ಲ. ನಮಗೆ ಗೊತ್ತೂ ಆಗುವುದಿಲ್ಲ. ನನ್ನ ತಮ್ಮ ಎಲ್ಲರಿಗಿಂತಲೂ ಸಣ್ಣವ. ಆದರೆ, ಮನೆಗೆ ಅವನೇ ಓನರ್​ ಇದ್ದ ಹಾಗೆ, ಎಲ್ಲವನ್ನು ಅವನೇ ನಡೆಸುತ್ತಿದ್ದ" ಎಂದು ದುಃಖ ತೋಡಿಕೊಂಡರು.

ಮೃತ ದುರ್ದೈವಿಗಳು:

  • ಫಯಾಜ್ ಜಮಖಂಡಿ (45)
  • ವಾಸೀಂ ಮುಡಗೇರಿ (35)
  • ಇಜಾಜ್ ಮುಲ್ಲಾ (20)
  • ಸಾದೀಕ್ ಭಾಷ್ (30)
  • ಗುಲಾಮ್ ಹುಷೇನ್ ಜವಳಿ (40)
  • ಇಮ್ತಿಯಾಜ್ ಮುಳಕೇರಿ (36)
  • ಅಲ್ಪಾಜ್ ಜಾಫರ್ ಮಂಡಕ್ಕಿ (25)
  • ಜೀಲಾನಿ ಅಬ್ದುಲ್ ಜಖಾತಿ (25)
  • ಅಸ್ಲಂ ಬಾಬುಲಿ ಬೆಣ್ಣಿ (24)
  • ಜಲಾಲ್‌ ತಾರಾ (30)

ಇದನ್ನೂ ಓದಿ: ಯಲ್ಲಾಪುರ ಬಳಿ ಉರುಳಿ ಬಿದ್ದ ಲಾರಿ : ಹಣ್ಣು, ತರಕಾರಿ ಸಾಗಿಸುತ್ತಿದ್ದ 10 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.