ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಇಂಟರೆಸ್ಟಿಂಗ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಜಸ್ಥಾನದ ಸುಶಿಲ್ ಮೀನಾ ಎಂಬ 12 ವರ್ಷದ ಬಾಲಕಿಯ ಕ್ರಿಕೆಟ್ ಪ್ರತಿಭೆ ಮತ್ತು ಆಸಕ್ತಿಯನ್ನು ನೀವು ನೋಡಬಹುದು. ಬರಿಗಾಲಲ್ಲೇ ಓಡಿ ಬಂದು ಬೌಲಿಂಗ್ ಮಾಡುತ್ತಿರುವ ಪರಿಯನ್ನು ಸಚಿನ್ ಮೆಚ್ಚಿಕೊಂಡಿದ್ದಾರೆ.
"ಸುಶಿಲ್ ಮೀನಾ ಬೌಲಿಂಗ್ ಶೈಲಿ ನಯವಾದ, ನಿರಾಯಾಸದ ಮತ್ತು ವೀಕ್ಷಿಸಲು ಸುಂದರ ಎನಿಸುತ್ತಿದೆ" ಎಂದು ಸಚಿನ್ ಬರೆದಿದ್ದಾರೆ. ಇದನ್ನು ನೀವು ನೋಡಿದ್ದೀರಾ? ಎಂದು ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರಿಗೆ ಕೇಳಿದ್ದಾರೆ.
Smooth, effortless, and lovely to watch! Sushila Meena’s bowling action has shades of you, @ImZaheer.
— Sachin Tendulkar (@sachin_rt) December 20, 2024
Do you see it too? pic.twitter.com/yzfhntwXux
ಇದಕ್ಕೆ ಪ್ರತಿಕ್ರಿಯಿಸಿರುವ ಜಹೀರ್ ಖಾನ್, "ನೀವು ಹೇಳಿರುವುದು ಸರಿಯಾಗಿದೆ. ಖಂಡಿತವಾಗಿಯೂ ನಿಮ್ಮ ಮಾತನ್ನು ಒಪ್ಪುತ್ತೇನೆ. ಆಕೆಯ ಬೌಲಿಂಗ್ ಶೈಲಿ ನೋಡಲು ನಯವಾಗಿದ್ದು, ಆಕರ್ಷಕವಾಗಿದೆ. ಆಕೆ ಈಗಾಗಲೇ ಸಾಕಷ್ಟು ಭರವಸೆ ಮೂಡಿಸಿದ್ದಾಳೆ" ಎಂದು ತಿಳಿಸಿದ್ದಾರೆ.
ಈ ವೀಡಿಯೊ ಎಕ್ಸ್‌ನಲ್ಲಿ 3.9 ಮಿಲಿಯನ್ (39 ಲಕ್ಷ) ವೀಕ್ಷಣೆ ಪಡೆದಿದೆ. ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಕ್ರಿಕೆಟ್‌ಪ್ರಿಯರು ಬಾಲಕಿಯ ಕ್ರಿಕೆಟ್ ಪ್ರೇಮವನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಇದನ್ನೂ ಓದಿ: 2012ರಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಆಗದ್ದಕ್ಕೆ ನಿವೃತ್ತಿ ಘೋಷಣೆ: ಅಸಲಿ ಕಾರಣ ತಿಳಿಸಿದ ಆರ್. ಅಶ್ವಿನ್
ಸಚಿನ್ ತೆಂಡೂಲ್ಕರ್ ಈ ಹಿಂದೆಯೂ ಇಂಥ ವೀಡಿಯೊಗಳನ್ನು ಶೇರ್ ಮಾಡಿದ್ದರು. ಜಮ್ಮು ಕಾಶ್ಮೀರದ ದಿವ್ಯಾಂಗ (ಪ್ಯಾರಾ) ಕ್ರಿಕೆಟರ್ ಅಮಿರ್ ಹುಸೈನ್ ಎಂಬವರ ವಿಡಿಯೋ ಪೋಸ್ಟ್ ಮಾಡಿ ಪ್ರೋತ್ಸಾಹಿಸಿದ್ದರು. ಅಮೀರ್ ಓರ್ವ ಎರಡೂ ಕೈಗಳಿಲ್ಲದ ಕ್ರಿಕೆಟರ್ ಆಗಿದ್ದು, ಆತನ ಕ್ರಿಕೆಟ್ ಪ್ರೀತಿ ಸಚಿನ್ ಅವರಲ್ಲಿ ಅಚ್ಚರಿ ತರಿಸಿತ್ತು.
ಇತ್ತೀಚಿಗೆ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಆರ್.ಆಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ನಂತರ ಸಚಿನ್ ತೆಂಡೂಲ್ಕರ್ ಖುದ್ದು ಫೋನ್ ಕರೆ ಮಾಡಿದ್ದಲ್ಲದೇ, ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದರು.
ಇದನ್ನೂ ಓದಿ: ಭಾರತ-ವೆಸ್ಟ್ ಇಂಡೀಸ್ ODI ಫೈಟ್: ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್, ಹೆಡ್ ಟು ಹೆಡ್ ಮಾಹಿತಿ