Mohammed Shami 4 Wicket: ಟೀಂ ಇಂಡಿಯಾ (Team India)ದ ಅನುಭವಿ ವೇಗದ ಬೌಲರ್ ಮೊಹ್ಮದ್ ಶಮಿ (Mohammed Shami) ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. 360 ದಿನಗಳ ಬಳಿಕ ಮೈದಾನಕ್ಕೆ ಕಾಲಿಟ್ಟಿರುವ ಅವರು ರಣಜಿ ಟ್ರೋಫಿ (Ranji Trophy)ಯ ತಮ್ಮ ಮೊದಲ ಪಂದ್ಯದಲ್ಲೇ ಮಾರಕ ಬೌಲಿಂಗ್ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿರುವ ಶಮಿ ಕಮ್ಬ್ಯಾಕ್ ಪಂದ್ಯದಲ್ಲೇ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಇಂದೋರ್ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಶಮಿ ಬರೋಬ್ಬರಿ 4 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 19 ಓವರ್ ಬೌಲಿಂಗ್ ಮಾಡಿದ ಅವರು ನಾಲ್ಕು ವಿಕೆಟ್ ಪಡೆದರು. ಕಳೆದ ವರ್ಷ ODI ವಿಶ್ವಕಪ್ ಫೈನಲ್ ಬಳಿಕ ಗಾಯಕ್ಕೆ ತುತ್ತಾಗಿದ್ದ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು. ಇದರಿಂದಾಗಿ ಸುಮಾರು ಒಂದು ವರ್ಷ ಕಾಲ ಆಟದಿಂದಲೇ ದೂರವಿದ್ದರು. ನಿನ್ನೆ ನಡೆದ ಮಧ್ಯಪ್ರದೇಶ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಬಂಗಾಳದ ಪರ ಆಡಿದ ಶಮಿ, ಮೊದಲ ದಿನ 10 ಓವರ್ ಬೌಲ್ ಮಾಡಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಇಂದು ಉತ್ತಮ ಫಿಟ್ನೆಸ್‌ನೊಂದಿಗೆ ಕಾಣಿಸಿಕೊಂಡರು. 19 ಓವರ್ಗಳ ಬೌಲಿಂಗ್ ಮಾಡಿ ತಮ್ಮ ಖಾತೆಗೆ 4 ವಿಕೆಟ್ಗಳನ್ನು ಸೇರಿಸಿದರು. ಇದರೊಂದಿಗೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಸಂದೇಶ ನೀಡಿದ್ದಾರೆ.
Waiting for Mohammed Shami to return ASAP. He looks great in Ranji Trophy.
— Mufa Kohli (@MufaKohli) November 14, 2024
pic.twitter.com/HGtxxjRbr6
ಈ ಪಂದ್ಯದಲ್ಲಿ ಶಮಿ ತಮ್ಮ ಕಿರಿಯ ಸಹೋದರ ಮೊಹಮ್ಮದ್ ಕೈಫ್ ಅವರೊಂದಿಗೆ ಆಡಿದ್ದಾರೆ. ಶಮಿ ತನ್ನ ಸಹೋದರನೊಂದಿಗೆ ಆಡುತ್ತಿರುವುದು ಇದೇ ಮೊದಲು. ಶಮಿ ಹೊರತು ಪಡಿಸಿ ಇದೇ ಪಂದ್ಯದಲ್ಲಿ ಸೂರಜ್ ಜೈಸ್ವಾಲ್ ಮತ್ತು ಮೊಹ್ಮದ್ ಕೈಫ್ ತಲಾ 2 ವಿಕೆಟ್ ಪಡೆದರು. ಇದರೊಂದಿಗೆ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್ನಲ್ಲಿ 167 ರನ್ಗಳಿಗೆ ಕುಸಿಯಿತು. ಮೊದಲು ಬ್ಯಾಟ್ ಮಾಡಿದ್ದ ಬಂಗಾಳ ಪ್ರಥಮ ಇನ್ನಿಂಗ್ಸ್ನಲ್ಲಿ 228 ರನ್ ಕಲೆ ಹಾಕಿತ್ತು. ಸಧ್ಯ 61 ರನ್ಗಳ ಮುನ್ನಡೆ ಸಾಧಿಸಿದೆ.
Mohammed Shami impresses on return 👏🤩
— Cricbuzz (@cricbuzz) November 14, 2024
19 overs | 4 maidens | 54 runs | 4 wickets#RanjiTrophy pic.twitter.com/z5LN6plnRN
ಶಮಿ ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಮೈದಾನಕ್ಕೆ ಮರಳುವ ನಿರೀಕ್ಷೆ ಇತ್ತು. ಆದಾಗ್ಯೂ, ಅವರ ಮೊಣಕಾಲು ಊದಿಕೊಂಡಿದ್ದ ಕಾರಣ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಬಿಸಿಸಿಐ ಶಮಿ ಅವರ ಫಿಟ್ನೆಸ್ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದು, ಸಂಪೂರ್ಣವಾಗಿ ಫಿಟ್ನೆಸ್ ಕಂಡು ಬಂದದ್ದೇ ಆದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
🚨 MOHAMMAD SHAMI PICKED 4/54 UPON HIS RETURN TO CRICKET AFTER 360 DAYS...!!! 🚨 pic.twitter.com/PRB3lBHhVs
— Mufaddal Vohra (@mufaddal_vohra) November 14, 2024
ಇದನ್ನೂ ಓದಿ: 'ನನ್ನ ಮಗನ 10 ವರ್ಷದ ಕ್ರಿಕೆಟ್ ಕೆರಿಯರ್ ಈ ನಾಲ್ವರಿಂದ ಹಾಳಾಯ್ತು': ಸಂಜು ಸ್ಯಾಮ್ಸನ್ ತಂದೆಯ ಆರೋಪ