Elevate Black Edition Launched: ಜಪಾನಿನ ಕಾರು ತಯಾರಕ ಹೋಂಡಾ ಕಾರ್ಸ್ ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಹೋಂಡಾ ಎಲಿವೇಟ್‌ನ ಬ್ಲ್ಯಾಕ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಈ ವಿಶೇಷ ಆವೃತ್ತಿಯನ್ನು ರೂ. 15.51 ಲಕ್ಷ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದಲ್ಲದೇ, ಕಂಪನಿಯು ಹೋಂಡಾ ಎಲಿವೇಟ್ ಸಿಗ್ನೇಚರ್ ಬ್ಲ್ಯಾಕ್ ಆವೃತ್ತಿಯನ್ನು ಸಹ ಪರಿಚಯಿಸಿದೆ.
ಎಲಿವೇಟ್ ಸಿಗ್ನೇಚರ್ ಬ್ಲಾಕ್ ಆವೃತ್ತಿಯನ್ನು 15.71 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ. ಈ ಎಲ್ಲ ವಿಶೇಷ ಆವೃತ್ತಿಗಳು ಈ ಕಾರಿನ ಟಾಪ್-ಸ್ಪೆಕ್ ZX ಟ್ರಿಮ್ ಆಧರಿಸಿವೆ. ಇವುಗಳಲ್ಲಿ ಮ್ಯಾನುವಲ್ ಮತ್ತು CVT ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಹೋಂಡಾ ಎಲಿವೇಟ್ ಅಪೆಕ್ಸ್ ಆವೃತ್ತಿಯ ಮಾರಾಟವು ಇವುಗಳ ಜೊತೆಗೆ ಮುಂದುವರಿಯುವುದು ಗಮನಿಸಬೇಕಾದ ಸಂಗತಿ.
ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ ಫೀಚರ್ಸ್: ತನ್ನ ಬ್ಲಾಕ್ ಎಡಿಷನ್ ಪ್ಯಾಕೇಜ್‌ನ ಭಾಗವಾಗಿ, ಹೋಂಡಾ ಎಲಿವೇಟ್ಗೆ ಆಲ್ ಬ್ಲ್ಯಾಕ್ ಇಂಟಿರಿಯರ್ ಮತ್ತು ಅಲಾಯ್ ವ್ಹೀಲ್ ಜೊತೆ ಕ್ರಿಸ್ಟಲ್ ಬ್ಲ್ಯಾಕ್ ಪರ್ಲ್ ಎಕ್ಸ್ಟಿರಿಯರ್ ಪೇಂಟ್ ಶೇಡ್ ನೀಡಲಾಗಿದೆ. ಡೋರ್ಗಳ ಕೆಳಗಿನ ಭಾಗ, ಮೇಲಿನ ಗ್ರಿಲ್ ಮತ್ತು ರೂಪ್ ರೇಲ್ ಮೇಲೆ ಸಿಲ್ವರ್ ಫಿನಿಷಿಂಗ್ ಅನ್ನು ಬಳಸಲಾಗಿದೆ.
ಎಲಿವೇಟ್ ಸಿಗ್ನೇಚರ್ ಬ್ಲಾಕ್ ಎಡಿಷನ್‌ನ ಮ್ಯಾನುವಲ್ ರೂಪಾಂತರದ ಬೆಲೆ 15.71 ಲಕ್ಷ ರೂ. ಮತ್ತು ಸಿವಿಟಿ ರೂಪಾಂತರದ ಬೆಲೆ 16.93 ಲಕ್ಷ ರೂ. (ಎಕ್ಸ್ ಶೋ ರೂಂ). ಎಲಿವೇಟ್ ಬ್ಲಾಕ್ ಆವೃತ್ತಿಯು ಎಲ್ಲ ಬೆಳ್ಳಿ ಭಾಗಗಳ ಮೇಲೆ ಕಪ್ಪು ಮುಕ್ತಾಯ ನೀಡುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಇದಲ್ಲದೇ, ಏಳು - ಬಣ್ಣಗಳ ಸುತ್ತುವರಿದ ಒಳಾಂಗಣ ಬೆಳಕನ್ನು ಇದರಲ್ಲಿ ಬಳಸಲಾಗಿದೆ.
ಸ್ಟ್ಯಾಂಡರ್ಡ್ ಎಲಿವೇಟ್ ಎಸ್‌ಯುವಿಯಿಂದ ಪಡೆದ ವೈಶಿಷ್ಟ್ಯಗಳಲ್ಲಿ ಸಿಕ್ಸ್ ಏರ್‌ಬ್ಯಾಗ್ಸ್, 10.25 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಲೆಥೆರೆಟ್ ಸೀಟ್ಸ್, ಸಿಂಗಲ್-ಪೇನ್ ಸನ್‌ರೂಫ್, ಕ್ಯಾಮೆರಾ ಆಧಾರಿತ ADAS, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್‌ಗಳು, ಸೆಮಿ - ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 7.0-ಇಂಚಿನ TFT ಡಿಸ್ಪ್ಲೆ ಸೇರಿವೆ.
ಹೋಂಡಾ ಎಲಿವೇಟ್ ಬ್ಲ್ಯಾಕ್ ಎಡಿಷನ್ ಪವರ್‌ಟ್ರೇನ್: ಇದರ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಅಸ್ತಿತ್ವದಲ್ಲಿರುವ ಹೋಂಡಾ ಎಲಿವೇಟ್‌ನಲ್ಲಿರುವ 1.5-ಲೀಟರ್, ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಬಳಸುತ್ತದೆ. ಈ ಎಂಜಿನ್ 120bhp ಪವರ್ ಉತ್ಪಾದಿಸುತ್ತದೆ. ಮ್ಯಾನುವಲ್ ಮತ್ತು CVT ಆಟೋಮೆಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಹೋಂಡಾ ಎಲಿವೇಟ್ ಬ್ಲಾಕ್ ಎಡಿಷನ್ ಪ್ರತಿಸ್ಪರ್ಧಿಗಳು: ಭಾರತೀಯ ಮಾರುಕಟ್ಟೆಯಲ್ಲಿ ಎಲಿವೇಟ್ ಬ್ಲ್ಯಾಕ್ ಎಡಿಷನ್, ಹುಂಡೈ ಕ್ರೆಟಾ ನೈಟ್ ಎಡಿಷನ್, ಎಂಜಿ ಆಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ಬ್ಲ್ಯಾಕ್ ಎಡಿಷನ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಸ್ಟ್ಯಾಂಡರ್ಡ್ ಹೋಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಯಲ್ಲಿ ಕ್ರೆಟಾ, ಸೆಲ್ಟೋಸ್, ಗ್ರ್ಯಾಂಡ್ ವಿಟಾರಾ, ಹೈರೈಡರ್, ಕುಶಾಕ್ ಮತ್ತು ಟೈಗುನ್‌ನಂತಹ SUV ಗಳೊಂದಿಗೆ ಸ್ಪರ್ಧಿಸುತ್ತದೆ. ಹುಂಡೈನ ಮಧ್ಯಮ ಗಾತ್ರದ SUV ತಿಂಗಳಿಗೆ ಸರಾಸರಿ 15 ಸಾವಿರ ಯುನಿಟ್‌ಗಳ ಮಾರಾಟದೊಂದಿಗೆ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.
ಓದಿ: ಕೈಗೆಟುಕುವ ದರ, ಅಡ್ವಾನ್ಸ್ಡ್ ಫೀಚರ್ಸ್: ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಬಾರಿಗೆ ಮೂರು ಕಾರುಗಳು ಲಾಂಚ್ ಮಾಡಿದ ಟಾಟಾ