ETV Bharat / entertainment

ಭವ್ಯಾ ಎಲಿಮಿನೇಟ್​​: 'ಬಿಗ್​ ಬಾಸ್​​​ ಕನ್ನಡ 11'ರ ಟ್ರೋಫಿ ಎತ್ತೋದ್ಯಾರು? - BHAVYA ELIMINATE

ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್​​​​ 11'ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಈ ನಡುವೆ ದೊಡ್ಮನೆಯಿಂದ ಸ್ಪರ್ಧಿ ಭವ್ಯಾ ಎಲಿಮಿನೇಟ್​ ಆಗಿದ್ದಾರೆ.

Bhavya eliminated
ಭವ್ಯಾ (Colors Kannada Post)
author img

By ETV Bharat Entertainment Team

Published : Jan 25, 2025, 11:03 PM IST

ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ 'ಬಿಗ್ ಬಾಸ್ ಸೀಸನ್​​​​ 11'ರ ಗ್ರ್ಯಾಂಡ್ ಫಿನಾಲೆ ಸುತ್ತಲಿನ ಉತ್ಸಾಹ ಉತ್ತುಂಗಕ್ಕೇರಿದ್ದು, ಈ ಸೀಸನ್‌ನ ವರ್ಣರಂಜಿತ ಕ್ಲೈಮ್ಯಾಕ್ಸ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಸನ್​ನ ಫಿನಾಲೆಗೆ 6 ಮಂದಿ ಎಂಟ್ರಿ ಕೊಟ್ಟಿದ್ದು, ಅವರಲ್ಲಿ ಓರ್ವರು ಎಲಿಮಿನೇಟ್​​ ಆಗಿದ್ದಾರೆ.

ಹೌದು, ಬಿಗ್​ ಬಾಸ್​ 11ರಿಂದ ಸ್ಪರ್ಧಿ ಭವ್ಯಾ ಎಲಿಮಿನೇಟ್​​ ಆಗಿದ್ದು, ಫ್ಯಾನ್ಸ್​ ಬೇಸರಗೊಂಡಿದ್ದಾರೆ. ಅದಾಗ್ಯೂ, ಈ ಮಟ್ಟಕ್ಕೆ ತಲುಪಿದ ಅವರ ಬಗ್ಗೆ, ಆಟದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಗುಣಗಾನವೂ ನಡೆಯುತ್ತಿದೆ.

ಬಿಗ್​ ಬಾಸ್ ಕನ್ನಡ ಸೀಸನ್​ 11ರ​ ಫಿನಾಲೆಯಲ್ಲಿ ಉಳಿದುಕೊಂಡ ಸ್ಪರ್ಧಿಗಳಿವರು:

  • ಮೋಕ್ಷಿತಾ.
  • ಹನುಮಂತು.
  • ತ್ರಿವಿಕ್ರಮ್​.
  • ಮಂಜು.
  • ರಜತ್ ಕಿಶನ್​​​.

ಜನವರಿ 26ರ ರಾತ್ರಿ ಬಿಗ್​ ಬಾಸ್​ 11 ವಿಜೇತರ ಹೆಸರು ಘೋಷಣೆಯಾಗಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಬಿಗ್​ ಬಾಸ್​ ಸೀಸನ್​​​ 11ರ ಟ್ರೋಫಿ ಎತ್ತಿಹಿಡಿಯೋದು ಯಾರೆಂಬ ಕುತೂಹಲ ದೊಡ್ಡ ಮಟ್ಟದಲ್ಲೇ ಇದೆ. ಅಷ್ಟಕ್ಕೂ ಕೋಟ್ಯಂತರ ಪ್ರೇಕ್ಷಕರನ್ನು ಸಂಪಾದಿಸಿರುವ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಅಲ್ಲವೇ?.

'ಬಿಗ್ ಬಾಸ್ ಕನ್ನಡ ಸೀಸನ್​​​​ 11'ರ ಗ್ರ್ಯಾಂಡ್ ಫಿನಾಲೆ ಒಟ್ಟು ಎರಡು ದಿನಗಳ ಕಾರ್ಯಕ್ರಮ. ಈಗಾಗಲೇ ಶನಿವಾರದ ಎಪಿಸೋಡ್​ ಅನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಕೊಟ್ಟ ಭರವಸೆಯಂತೆ ಕಿಚ್ಚ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್​​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಗ್ರ್ಯಾಂಡ್​ ಫಿನಾಲೆ ಮನರಂಜನೆ, ಅಚ್ಚರಿ ಮತ್ತು ಆಚರಣೆಗಳ ಸಂಜೆಯನ್ನು ಪ್ರೇಕ್ಷಕರಿಗೆ ಪೂರೈಸುವಲ್ಲಿ ಯಶಸ್ವಿಯಾಗಿದೆ. ಗ್ರ್ಯಾಂಡ್​​ ಫಿನಾಲೆಯ ಕ್ಲೈಮ್ಯಾಕ್ಸ್​ ಜನವರಿ 26ರ ರಾತ್ರಿ ಪ್ರಸಾರ ಕಾಣಲಿದೆ. ಕಾರ್ಯಕ್ರಮದ ಕೊನೆಗೆ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಸುದೀಪ್​ ಅವರ ಎರಡೂ ಬದಿಗಳಲ್ಲಿ ಇಬ್ಬರು ಫೈನಲಿಸ್ಟ್​​​ಗಳು ನಿಲ್ಲಲಿದ್ದು, ಓರ್ವರು ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ಕ್ಷಣಕ್ಕೆ ಕೌಂಟ್​ ಡೌನ್​ ಶುರುವಾಗಿದೆ.

64 ಲಕ್ಷ ವೋಟ್​ ಪಡೆದ ಭವ್ಯಾ ಔಟ್​: ತಮ್ಮ ಆಟ, ಆ್ಯಟಿಟ್ಯೂಡ್​ನಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಭವ್ಯಾ, ಟಾಸ್ಕ್​​ಗಳಲ್ಲಿ ಹಂಡ್ರೆಡ್ ಪರ್ಸೆಂಟ್​ ಎಫರ್ಟ್​ ಹಾಕುವ ಮೂಲಕ ಟಫೆಸ್ಟ್ ಕಂಟಸ್ಟೆಂಟ್ ಅಂತಾ ಗುರುತಿಸಿಕೊಂಡಿದ್ದರು. ಕಳೆದ ಎರಡ್ಮೂರು ವಾರಗಳಲ್ಲಿ ಎಲಿಮಿನೇಟ್​ ಆಗ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ ಅಂತಿಮವಾಗಿ ಫಿನಾಲೆ ವಾರ ತಲುಪಿದ್ದರು. ಆದರೆ 6 ಜನ ಕಂಟಸ್ಟೆಂಟ್​ನಲ್ಲಿ ಲೀಸ್ಟ್​​ 64,48,853 ಜನರ ವೋಟ್​ ಪಡೆದು, 5ನೇ ರನ್ನರ್​ಅಪ್​ ಆಗಿ ಶನಿವಾರ ಬಿಗ್​ಬಾಸ್​ ಮನೆಯಿಂದ ಹೊರಬಂದಿದ್ದಾರೆ.

ಬಿಗ್​ ಬಾಸ್ ಹಿಂದಿ ಸೀಸನ್​​ 18​ ವಿಜೇತರು: ಕಳೆದ ಭಾನುವಾರ ಭಾರತೀಯ ಮನರಂಜನಾ ಕ್ಷೇತ್ರದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ ಬಿಗ್​ ಬಾಸ್ ಹಿಂದಿ ಸೀಸನ್​​ 18​ರ ಗ್ರ್ಯಾಂಡ್​ ಫಿನಾಲೆ ನಡೆಯಿತು. ಬಾಲಿವುಡ್​ ಭಾಯ್​​​ಜಾನ್​​​​ ಸಲ್ಮಾನ್​ ಖಾನ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್​ ಬಾಸ್​ ಹಿಂದಿ ಸೀಸನ್​ 18ರ ಟ್ರೋಫಿಯನ್ನು ಕರಣ್ ವೀರ್ ಮೆಹ್ರಾ ಗೆದ್ದುಕೊಂಡಿದ್ದಾರೆ.

  • ವಿಜೇತ - ಕರಣ್ ವೀರ್ ಮೆಹ್ರಾ.
  • ರನ್ನರ್​ ಅಪ್​​ - ವಿವಿಯನ್ ಡಿಸೆನಾ.
  • ಮೂರನೇ ಸ್ಥಾನ - ರಜತ್ ದಲಾಲ್.
  • ನಾಲ್ಕನೇ ಸ್ಥಾನ - ಅವಿನಾಶ್ ಮಿಶ್ರಾ.
  • ಐದನೇ ಸ್ಥಾನ - ಚುಮ್ ದರಂಗ್.
  • ಆರನೇ ಸ್ಥಾನ - ಈಶಾ ಸಿಂಗ್.

ಇದನ್ನೂ ಓದಿ: ಕರುನಾಡ ಚಕ್ರವರ್ತಿ ನಾಳೆ ಕರುನಾಡಿಗೆ: ಶಿವಣ್ಣನ ಸ್ವಾಗತಕ್ಕೆ ಭರದ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.