ETV Bharat / state

ಗಮನಿಸಿ: ಯಲ್ಲಮ್ಮನ ಗುಡ್ಡ, ಬನಶಂಕರಿ ಜಾತ್ರೆಗಳಿಗೆ NWKRTC ವಿಶೇಷ ಬಸ್ ವ್ಯವಸ್ಥೆ - NWKRTC SPECIAL BUS

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಯಲ್ಲಮ್ಮನ ಗುಡ್ಡ ಹಾಗೂ ಬನಶಂಕರಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

NWKRTC special bus
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್​ (ETV Bharat)
author img

By ETV Bharat Karnataka Team

Published : Jan 11, 2025, 9:51 AM IST

ಹುಬ್ಬಳ್ಳಿ: ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆಗಳಿಗೆ ತೆರಳುವ ಭಕ್ತಾದಿಗಳು ಹಾಗೂ ಇತರ ಸಾರ್ವಜನಿಕರ ಅನುಕೂಲಕ್ಕಾಗಿ ಜನವರಿ 11 ರಿಂದ 18ರ ವರೆಗೆ ವಿಶೇಷ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.

ಬನದ ಹುಣ್ಣಿಮೆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡ ಹಾಗೂ ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇವಿ ಜಾತ್ರೆಗಳು ಜನವರಿ 11ರಿಂದ 18ರವರೆಗೆ ವೈಭವದಿಂದ ಜರುಗಲಿವೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರ, ನವಲಗುಂದ ಹಾಗೂ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ಹೋಗಿ ಬರುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡ ಮತ್ತು ಬನಶಂಕರಿಗೆ ನೇರ ವಿಶೇಷ ಜಾತ್ರಾ ಬಸ್​​ಗಳು ಸಂಚರಿಸಲಿವೆ.

ಜ.11ರಂದು (ಇಂದು), 12ರಂದು ರವಿವಾರ, 13ರಂದು ಸೋಮವಾರ ರಥೊತ್ಸವ ಹಾಗೂ ಜ.14ರಂದು ಮಂಗಳವಾರ ದೇವಿಯ ವಾರ ಮತ್ತು ಮಕರ ಸಂಕ್ರಾಂತಿ ಸಾರ್ವಜನಿಕ ರಜೆ ಇದೆ. ಈ ಅವಧಿಯಲ್ಲಿ ಹೆಚ್ಚಿನ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ.

ಬಸ್ ಹೊರಡುವ ಸ್ಥಳ ಹಾಗೂ ಸಂಚಾರ ಮಾರ್ಗ: ಹುಬ್ಬಳ್ಳಿಯಲ್ಲಿ ಜಾತ್ರೆ ವಿಶೇಷ ಬಸ್​​ಗಳು ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.

ಇದನ್ನೂ ಓದಿ: ಸಂಕ್ರಾಂತಿಗೆ ಬೆಂಗಳೂರಿನಿಂದ ಕಲಬುರಗಿ, ಕಾರವಾರಕ್ಕೆ ವಿಶೇಷ ರೈಲು; ಸಂಚಾರ ದಟ್ಟಣೆಗೆ ಕ್ರಮ

ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್​​ಗಳು:

  • ಹೊಸೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ ಗಳು ನವನಗರ ಧಾರವಾಡ, ಸವದತ್ತಿ ಮಾರ್ಗವಾಗಿ ಹೋಗುತ್ತವೆ.
  • ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುವ ಬಸ್ ಗಳು ತಾರಿಹಾಳ ಬೈಪಾಸ್, ನರೇಂದ್ರ, ಧಾರವಾಡ, ಸವದತ್ತಿ ಮಾರ್ಗವಾಗಿ ಸಂಚರಿಸಲಿವೆ.
  • ನವಲಗುಂದ ಬಸ್ ನಿಲ್ದಾಣದಿಂದ ಹೊರಡುವ ಬಸ್ ಗಳು ಗೊಬ್ಬರಗುಂಪಿ, ಅಳಗವಾಡಿ, ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ತೆರಳಲಿವೆ.

ಬನಶಂಕರಿಗೆ ಹೋಗುವ ಬಸ್​ಗಳು:

  • ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಹಾಗೂ ನವಲಗುಂದ ನಿಲ್ದಾಣದಿಂದ ಹೊರಡುತ್ತವೆ. ನರಗುಂದ, ಕೊಣ್ಣೂರು, ಕುಳಗೇರಿ, ಕ್ರಾಸ್, ಬಾದಾಮಿ ಮಾರ್ಗವಾಗಿ ಸಾಗಲಿವೆ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬ: ವಾಯವ್ಯ ಸಾರಿಗೆಯಿಂದ ಹೆಚ್ಚುವರಿ ವಿಶೇಷ ಬಸ್‌ಗಳ​ ವ್ಯವಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.