ETV Bharat / technology

ಇನ್​ಸ್ಟಾಗ್ರಾಂ ಬಳಕೆದಾರರಿಗೆ ಅದ್ಭುತ ಫೀಚರ್​ ಪರಿಚಯಿಸುತ್ತಿದೆ ಮೆಟಾ - AI PROFILE PICTURE GENERATOR

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಹೊಸ ಫೀಚರ್​ ಹೊರತರಲು ಕೆಲಸ ಮಾಡುತ್ತಿದೆ. ಎಐ ಸಹಾಯದಿಂದ ಅದ್ಭುತ ಪ್ರೊಫೈಲ್ ಫೋಟೋಗಳನ್ನು ರಚಿಸಲು ಇದು ಬಳಕೆದಾರರಿಗೆ ನೆರವಾಗುತ್ತದೆ.

INSTAGRAM NEW AI FEATURE  INSTAGRAM AI FEATURE  META  INSTAGRAM
ಇನ್​ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸುತ್ತಿದೆ ಮೆಟಾ (ಸಂಗ್ರಹ ಚಿತ್ರ ETV Bharat)
author img

By ETV Bharat Tech Team

Published : Nov 14, 2024, 9:48 AM IST

Instagram AI Profile Picture Generation Feature: ಮೆಟಾ ಒಡೆತನದ ಇನ್​ಸ್ಟಾಗ್ರಾಂ ಶ್ರೀಘ್ರದಲ್ಲೇ ಹೊಸ ಎಐ(ಕೃತಕ ಬುದ್ಧಿಮತ್ತೆ) ಫೀಚರ್​ ಪರಿಚಯಿಸಲಿದೆ. ಇದು ಬಳಕೆದಾರರಿಗೆ ಎಐ ಪ್ರೊಫೈಲ್​ ಫೋಟೋಗಳನ್ನು ಕ್ರಿಯೆಟ್​ ಮಾಡಲು ಅನುಮತಿಸುತ್ತದೆ. ಹೊಸ ಎಐ ಫೀಚರ್​ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯದಿದ್ದರೂ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮೆಟಾ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಾಗಿ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ನಿರ್ದಿಷ್ಟ ಅವಧಿಯ ನಂತರ ಅಪ್ಲಿಕೇಶನ್ ಅನ್ನು ತೆರೆಯುವಾಗ ಸ್ವಯಂಚಾಲಿತ ಫೀಡ್ ರಿಫ್ರೆಶ್ ಅನ್ನು ಸೇವೆಯಿಂದ ಕೈಬಿಡಲಾಗಿದೆ ಎಂದು ಇನ್​ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಇತ್ತೀಚೆಗೆ ಘೋಷಿಸಿದ್ದರು.

ಡೆವಲಪರ್ ಅಲೆಸ್ಸಾಂಡ್ರೊ ಪಲುಝಿ ಅವರು ಇನ್​ಸ್ಟಾಗ್ರಾಂ ಹೊಸ ಎಐ ಫೀಚರ್​ನ​ ಒಂದು ಲುಕ್​ ಅನ್ನು ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಅಪ್​ಡೇಟ್​ ಮಾಡುವಾಗ ಅವರು ಎಐ ಪ್ರೊಫೈಲ್ ಫೋಟೋ ರಚಿಸಿ ಎಂಬ ಹೊಸ ಮೆನು ಆಯ್ಕೆ ಬಗ್ಗೆ ತಿಳಿಸಿದ್ದಾರೆ.

ಈ ವೈಶಿಷ್ಟ್ಯವು ಎಷ್ಟು ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುವುದು ಕಷ್ಟ. ಸದ್ಯ ಅಭಿವೃದ್ಧಿಯ ಹಂತದಲ್ಲಿದೆ. ಮೆಟಾದ ಲಾಮಾ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳಲ್ಲಿ (ಎಲ್‌ಎಲ್‌ಎಂ) ಒಂದರಿಂದ ಚಾಲಿತವಾಗಿರುತ್ತದೆ. ಈ ಫೀಚರ್​ ಎರಡು ರೀತಿಯಲ್ಲಿ ಕೆಲಸ ಮಾಡಬಹುದು. ಪಠ್ಯ-ಆಧರಿತ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಮೊದಲಿನಿಂದಲೂ ಎಐ ಚಿತ್ರವನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಪ್ರೊಫೈಲ್ ಚಿತ್ರಗಳನ್ನು ಎಐ ಬಳಸಿಕೊಂಡು ವಿಭಿನ್ನ ಶೈಲಿಗಳಾಗಿ ಪರಿವರ್ತಿಸಲು ಬಳಕೆದಾರರಿಗೆ ಅವಕಾಶ ನೀಡಬಹುದಾಗಿದೆ.

ಇದು ಇನ್​ಸ್ಟಾಗ್ರಾಂನಲ್ಲಿ ಬರುವ ಮೊದಲ ಎಐ ವೈಶಿಷ್ಟ್ಯವಲ್ಲ. ಈಗಾಗಲೇ ಸಂವಾದಾತ್ಮಕ ಚಾಟ್‌ಬಾಟ್ ಮೆಟಾ ಎಐ ಅನ್ನು ನೀಡುತ್ತದೆ. ಡಿಎಂ ಸಂದೇಶಗಳಿಗಾಗಿ ಎಐ ರಿರೈಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರು ತಾವು ಕಳುಹಿಸಿರುವ ಸಂದೇಶಗಳನ್ನು ಮತ್ತೆ ಸರಿಪಡಿಸಬಹುದಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಕಲಿ​ ಜಾಹೀರಾತುಗಳನ್ನು ಪತ್ತೆ ಹಚ್ಚಲು ಎಐ-ಚಾಲಿತ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ ಎಂದು ಇತ್ತೀಚೆಗೆ ಮೆಟಾ ತಿಳಿಸಿತ್ತು. ಈ ವೈಶಿಷ್ಟ್ಯವು ಬಳಕೆದಾರರನ್ನು ಆಕರ್ಷಿಸಲು ತಮ್ಮ ಜಾಹೀರಾತುಗಳಲ್ಲಿ ಸಾರ್ವಜನಿಕ ವ್ಯಕ್ತಿಗಳನ್ನು ಮೋಸದಿಂದ ಬಳಸುವ ಜಾಹೀರಾತುಗಳನ್ನು ಗುರುತಿಸುತ್ತದೆ ಮತ್ತು ನಿರ್ಬಂಧಿಸುತ್ತದೆ.

ಇದನ್ನೂ ಓದಿ: ಸುರಕ್ಷತಾ ಪರಿಶೀಲನೆಗೆ ಒಳಪಟ್ಟ ನಂತರವೇ ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯಾಚರಿಸಲು ಸಾಧ್ಯ: ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.