ಬೆಂಗಳೂರು:ನವೆಂಬರ್ 23ರಿಂದ ಆರಂಭವಾಗಲಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಗೆ ಮಯಾಂಕ್ ಅಗರ್ವಾಲ್ ನೇತೃತ್ವದ 15 ಆಟಗಾರರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
ನಿರೀಕ್ಷೆಯಂತೆ ತಂಡಕ್ಕೆ ಅನುಭವಿ ಮಯಾಂಕ್ ಅಗರ್ವಾಲ್ ನಾಯಕ ಹಾಗೂ ಉಪನಾಯಕರಾಗಿ ಮನೀಶ್ ಪಾಂಡೆ ಅವರು ಮುಂದುವರೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವು ಮೊದಲ ಎದುರಾಳಿಯಾಗಿ ನವೆಂಬರ್ 23ರಂದು ಉತ್ತರಾಖಂಡದ ಸವಾಲು ಎದುರಿಸಲಿದೆ.
ಆ ಬಳಿಕ, ನವೆಂಬರ್ 25ರಂದು ತ್ರಿಪುರಾ ತಂಡದ ವಿರುದ್ಧ ಆಡಲಿದೆ. ನ.27ರಂದು ಸೌರಾಷ್ಟ್ರ ತಂಡದ ವಿರುದ್ಧ ಮೈದಾನಕ್ಕಿಳಿಯಲಿದೆ. ನ.29ರಂದು ಸಿಕ್ಕಿಂ ತಂಡದ ವಿರುದ್ಧ ಹಣಾಹಣಿ ನಡೆಸಲಿದೆ. ಕರ್ನಾಟಕ ತಂಡವು ಡಿಸೆಂಬರ್ 1ರಂದು ತಮಿಳುನಾಡು ವಿರುದ್ಧ ಕಣಕ್ಕಿಳಿಯಲಿದೆ. ಡಿಸೆಂಬರ್ 3ರಂದು ಬರೋಡಾ ಹಾಗೂ ಡಿಸೆಂಬರ್ 5ರಂದು ಗುಜರಾತ್ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ:IND vs SA 4th T20: ದಕ್ಷಿಣ ಆಫ್ರಿಕಾ ವಿರುದ್ಧ ಇತಿಹಾಸ ಬರೆಯಲು ಸಜ್ಜಾದ ಟೀಂ ಇಂಡಿಯಾ, 18 ವರ್ಷದಲ್ಲಿ ಇದೇ ಮೊದಲು!
ಡಿಸೆಂಬರ್ 9 ಹಾಗೂ 11ರಂದು ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ತದನಂತರ, ಡಿ.13ರಂದು ಸೆಮಿಫೈನಲ್ಗಳು ಹಾಗೂ ಡಿ.15ರಂದು ಪೈನಲ್ ಪಂದ್ಯ ಜರುಗಲಿದೆ.
ಕರ್ನಾಟಕ ತಂಡ ಹೀಗಿದೆ:ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ಉಪನಾಯಕ), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್), ವೈಶಾಕ್ ವಿ., ಮ್ಯಾಕ್ನೈಲ್ ಹೆಚ್.ನೊರೊನ್ಹಾ, ಕೌಶಿಕ್ ವಿ., ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್.ಆರ್. (ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ ಹಾಗೂ ಮನ್ವಂತ್ ಕುಮಾರ್ ಎಲ್.
ಇದನ್ನೂ ಓದಿ:39 ವರ್ಷದ ಬಳಿಕ ರಣಜಿಯಲ್ಲಿ ಸಂಚಲನ ಸೃಷ್ಟಿಸಿದ ಯುವ ಬೌಲರ್: ತಂಡದಿಂದ ಕೈಬಿಟ್ಟು ಪಶ್ಚಾತ್ತಾಪ ಪಡುತ್ತಿರುವ ಮುಂಬೈ ಇಂಡಿಯನ್ಸ್!