ETV Bharat / sports

ಅರ್ಧಕ್ಕೆ ನಿಂತ ಭಾರತ-ಇಂಗ್ಲೆಂಡ್ 2ನೇ ಏಕದಿನ ಪಂದ್ಯ: ಏನಾಯ್ತು? - WHY IND VS ENG 2ND ODI STOPPED

Ind vs Eng 2nd ODI: ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ನಡೆಯುತ್ತಿರುವ 2ನೇ ಏಕದಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

INDIA VS ENGLAND 2ND ODI  IND VS ENG 2ND ODI STOPPED MIDWAY  BARABATI GROUND  INDIA VS ENGLAND ODI STOPPED MIDWAY
Why was india vs england 2nd odi stopped midway (AFP)
author img

By ETV Bharat Sports Team

Published : Feb 9, 2025, 7:01 PM IST

Ind vs Eng 2nd ODI: ಭಾರತ ಮತ್ತು ಇಂಗ್ಲೆಂಡ್​ ನುಡವಿನ ಏರಡನೇ ಏಕದಿನ ಪಂದ್ಯ ಇಂದು ನಡೆಯುತ್ತಿದೆ. ಒಡಿಶಾದ ಬಾರಾಬತಿ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಟಾಸ್​​ ಗೆದ್ದು ಬ್ಯಾಟಿಂಗ್​ ಮಾಡಿರುವ ಇಂಗ್ಲೆಂಡ್​​ ಮೊದಲ ಇನ್ನಿಂಗ್ಸ್​ನಲ್ಲಿ 304 ರನ್​ ಗಳಿಸಿ ಆಲೌಟ್​ ಆಗಿದೆ. ಸದ್ಯ, ಈ ಗುರಿಯನ್ನು ಬೆನ್ನತ್ತಿರುವ ಭಾರತ 6 ಓವರ್​​ ಮುಕ್ತಾಯಕ್ಕೆ ಯಾವುದೇ ವಿಕೆಟ್​ ನಷ್ಟವಿಲ್ಲದೇ 48 ರನ್​ ಗಳಿಸಿದೆ.

ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದಿದ್ದಾರೆ. ಸತತ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ನಾಯಕ ರೋಹಿತ್​ ಶರ್ಮಾ ಮತ್ತೆ ಲಯಕ್ಕೆ ಮರಳಿದಂತೆ ಕಾಣುತ್ತಿದೆ. ವೇಗದ ಬ್ಯಾಟಿಂಗ್​ ಮೂಲಕ ಕೇವಲ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ ಸಹಾಯದಿಂದ 29 ರನ್​ ಗಳಿಸಿದ್ದಾರೆ. ಮತ್ತೊಂದು ಬದಿಯಲ್ಲಿ ಶುಭಮನ್​ ಗಿಲ್​ ಕೂಡ ರೋಹಿತ್​ ಶರ್ಮಾಗೆ ಉತ್ತಮ ಸಾತ್​ ನೀಡುತ್ತಿದ್ದಾರೆ. 19 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಾಯದಿಂದ 17 ರನ್​ ಕಲೆಹಾಕಿದ್ದಾರೆ.

ಏತನ್ಮಧ್ಯೆ, ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟಿಂಗ್​ ವೇಳೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. 6.1 ಓವರ್​ನಲ್ಲಿ ಪಂದ್ಯವನ್ನು ನಿಲ್ಲಿಸಲಾಗಿತ್ತು. ವಾಸ್ತವಾಗಿ ಮೈದಾನದಲ್ಲಿನ ಫ್ಲೆಡ್​ಲೈಟ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಪಂದ್ಯದ ನಡುವೆಯೆ ಬಂದ್​ ಆಗಿತ್ತು. ಸುಮಾರು 10 ನಿಮಿಷಗಳು ಕಳೆದರು ಲೈಟ್​ ಸಮಸ್ಯೆ ಬಗೆಹರಿಯದ ಕಾರಣ ರೋಹಿತ್​ ಶರ್ಮಾ, ಶುಭಮನ್​ ಗಿಲ್​ ಸೇರಿದಂತೆ ಇಂಗ್ಲೆಂಡ್​ ಆಟಗಾರರು ಪೆವಿಲಿಯನ್​ಗೆ ವಾಪಾಸ್​ ಆಗಿದ್ದರು. 23 ನಿಮಿಷಗಳ ಬಳಿಕ ಫ್ಲೆಡ್​ ಲೈಟ್​ ಸರಿಪಡಿಸಲಾಗಿದೆ.

6 ವರ್ಷಗಳ ಬಳಿಕ ಏಕದಿನ ಪಂದ್ಯ: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಪಂದ್ಯ ಒಡಿಶಾದ ಬಾರಾಬತಿ ಮೈದಾನದಲ್ಲಿ ನಡೆಯುತ್ತಿದೆ. ಬರೋಬ್ಬರಿ 6 ವರ್ಷಗಳ ಬಳಿಕ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಅಂತರಾಷ್ಟ್ರೀಯ ಪಂದ್ಯ ಇದಾಗಿದೆ. ಈ ಹಿಂದೆ 2019ರಲ್ಲಿ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಕೊನೆಯ ಬಾರಿಗೆ ಏಕದಿನ ಪಂದ್ಯ ನಡೆದಿತ್ತು. ಅದಾದ ಬಳಿಕ ಒಂದೇ ಒಂದು ಪಂದ್ಯ ನಡೆದಿರಲಿಲ್ಲ.

ಭಾರತ ಗೆಲುವಿಗೆ ಬೇಕು 257 ರನ್​: ಇಂಗ್ಲೆಂಡ್​ ನೀಡಿರುವ 304 ರನ್​ಗಳ ಗುರಿಯನ್ನು ಬೆನ್ನತ್ತಿರುವ ಭಾರತೀಯ ಪಡೆ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 43.5 ಓವರ್​​ಗಳಲ್ಲಿ 257 ರನ್​ ಬೇಕಾಗಿದೆ.

ಜಡೇಜಾ ಕಮಾಲ್​: ಬೌಲಿಂಗ್​ನಲ್ಲಿ ಆಲ್​ರೌಂಡರ್​ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಾರೆ. 10 ಓವರ್​ ಬೌಲ್​ ಮಾಡಿರುವ ಜಡೇಜಾ ಒಂದು ಮೇಡನ ಓವರ್​ನೊಂದಿಗೆ 35 ರನ್​ ನೀಡಿ 23 ವಿಕೆಟ್​ ಪಡೆದಿದ್ದಾರೆ. ಇದರಲ್ಲಿ ಜೋ ರೂಟ್​, ಬೆನ್​ ಡಕೆಟ್​, ಜೇಮೀ ಓವರ್​ಟನ್​ ವಿಕೆಟ್​ಗಳನ್ನು ಉರುಳಿಸಿ ಆಂಗ್ಲರಿಗೆ ಶಾಕ್​ ನೀಡಿದ್ದಾರೆ.

ಇದನ್ನೂ ಓದಿ: IND vs ENG: ಸಚಿನ್​​​ಗೂ ಸಾಧ್ಯವಾಗದ ದಾಖಲೆ ಬರೆಯಲು ವಿರಾಟ್​ ಕೊಹ್ಲಿ​ ಸಜ್ಜು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.