ETV Bharat / state

ಕಡಲೆ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ರೂ. ಮೌಲ್ಯದ ಕಡಲೆ‌ ಬೆಂಕಿಗೆ ಆಹುತಿ - FIRE IN A CHICKPEA FIELD

ಕಡಲೆ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರೈತರೊಬ್ಬರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.

THE MISCREANTS WHO SET CHICKPEA STOCK ON FIRE IN DHARWAD
ಕಡಲೆ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ರೂ. ಮೌಲ್ಯದ ಕಡಲೆ‌ ಬೆಂಕಿಗೆ ಆಹುತಿ (ETV Bharat)
author img

By ETV Bharat Karnataka Team

Published : Feb 10, 2025, 11:24 AM IST

ಹುಬ್ಬಳ್ಳಿ: ಕಡಲೆ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಡಲೆ ಬಣವೆ ಸುಟ್ಟಿರುವ ಘಟನೆ ಭಾನುವಾರ ರಾತ್ರಿ ತಾಲೂಕಿನ ಕುಸುಗಲ್​​​ ಗ್ರಾಮದ ಹೊಲದಲ್ಲಿ ನಡೆದಿದೆ.

ಭೀಮಪ್ಪ ಸುಂಕದ ಎಂಬುವವರಿಗೆ ಸೇರಿದ ಬಣವೆ ಇದಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಈ ದುಷ್ಕತೃ ಮೆರೆದ ಕಿಡಿಗೇಡಿಗಳು ಯಾರು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಕಡಲೆ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಲಕ್ಷಾಂತರ ರೂ. ಮೌಲ್ಯದ ಕಡಲೆ‌ ಬೆಂಕಿಗೆ ಆಹುತಿ (ETV Bharat)

"ಕಿಡಿಗೇಡಿಗಳಿಂದ ಅಪಾರ ಪ್ರಮಾಣದ ಕಡಲೆ ಹಾಳಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದ್ದು, ನಮಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಇಂತಹ ಹೀನ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಸಾಲ ಸೂಲ ಮಾಡಿ ಫಸಲು ಬೆಳೆದಿದ್ದೆವು. ಆದರೆ ಎಲ್ಲಾ ಮಣ್ಣು ಪಾಲಾಗಿದೆ" ಎಂದು ಭೀಮಪ್ಪ ಸುಂಕದ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬೈಕ್ ಕಳವು: ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.