ವಾರಾಣಸಿ: ಮಹಾಕುಂಭ ಮೇಳಕ್ಕೆ ಪ್ರಯಾಗ್ರಾಜ್ಗೆ ಆಗಮಿಸುತ್ತಿರುವ ಭಕ್ತರ ದಂಡು, ವಾರಾಣಸಿಗೂ ಭೇಟಿ ನೀಡುತ್ತಿದೆ. ಪರಿಣಾಮವಾಗಿ ಇಲ್ಲೂ ಕೂಡ ಜನಸಂದಣಿ ಹೆಚ್ಚಿದೆ. ಕಳೆದ 9 ದಿನದಲ್ಲೇ ಸುಮಾರು 50 ಲಕ್ಷ ಯಾತ್ರಿಕರು ವಾರಾಣಸಿಗೆ ಭೇಟಿ ನೀಡಿದ್ದಾರೆ. ಇನ್ನು ವಾರಾಂತ್ಯದಲ್ಲಂತೂ ಈ ಸಂಖ್ಯೆ ಹೆಚ್ಚಿದೆ. ಫೆ. 8ರಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗರು ಆಗಮಿಸಿದ್ದು, ವಾರಾಣಸಿಯ ಗಡಿಯಲ್ಲಿಯೇ ಹೊರಗಿನ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ನಗರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಇದರ ಹೊರತಾಗಿಯೂ ವಾರಾಣಸಿಗೆ ನಿತ್ಯ 8 ರಿಂದ 10 ಲಕ್ಷ ಜನ ಆಗಮಿಸುತ್ತಿದ್ದಾರೆ. ದೇವರ ದರ್ಶನ ಪಡೆಯಲು ಭಕ್ತರು 4 ಕಿ.ಮೀ ಉದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.
9 ದಿನದ ಯಾತ್ರಿಕರ ಸಂಖ್ಯೆ: ಫೆ.1ರಿಂದ ಫೆ.9ರವರೆಗೆ ದೇಗುಲಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಯನ್ನು ಆಡಳಿತ ಮಂಡಳಿ ಬಿಡುಗಡೆ ಮಾಡಿದೆ. ಅದರಲ್ಲಿ 5,69,360 ಮಂದಿ ಭಕ್ತರು ಭೇಟಿ ನೀಡಿದ್ದಾರೆ. ಫೆ. 1ರಂದು 1, 4,61,759, ಫೆ. 2ರಂದು 5,84,224, ಫೆಬ್ರವರಿ 3ರಂದು 5,09,133, ಫೆ 4ರಂದು 4,89,223, ಫೆಬ್ರವರಿ 5ರಂದು 4,56,586, ಫೆಬ್ರವರಿ 6, 4,94,854, ಫಬ್ರವರಿ 7, 6,21,307 ಭೇಟಿ ನೀಡಿದ್ದಾರೆ. ಫೆಬ್ರವರಿ 8ರಂದು 4,39,690 ಭಕ್ತರು ದೇವರ ದರ್ಶನ ಪಡೆದಿದ್ದಾರೆ.
![crowd-record-brokenvaranasi-vishwanath-temple-50-lakh-devotees-visited-in-9-days-prayagraj-maha-kumbh-mela-2025](https://etvbharatimages.akamaized.net/etvbharat/prod-images/10-02-2025/up-03-baba-vishvnath-photo-7209211_09022025233352_0902f_1739124232_1020.jpg)
ಈ ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ದಾಖಲೆ ನಿರ್ಮಾಣವಾಗಿದೆ. ಈ ಮಟ್ಟದ ಜನಸಂದಣಿಯನ್ನು ಇದುವರೆಗೆ ಶ್ರಾವಣ ಮತ್ತು ಶಿವರಾತ್ರಿಯಲ್ಲೂ ಕಂಡಿಲ್ಲ ಎಂದು ಹೇಳಲಾಗುತ್ತಿದೆ.
![crowd-record-brokenvaranasi-vishwanath-temple-50-lakh-devotees-visited-in-9-days-prayagraj-maha-kumbh-mela-2025](https://etvbharatimages.akamaized.net/etvbharat/prod-images/10-02-2025/up-03-baba-vishvnath-photo-7209211_09022025233352_0902f_1739124232_220.jpg)
ವಿಶೇಷ ವ್ಯವಸ್ಥೆ: ಈ ಕುರಿತು ಮಾತನಾಡಿರುವ ದೇಗುಲದ ಪಿಆರ್ಒ ಗಜೇಂದ್ರ, ಮಹಾಕುಂಭಮೇಳಕ್ಕೆ ಹಿನ್ನೆಲೆ ಕಾಶಿ ವಿಶ್ವನಾಥನಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ದೇಗುಲದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಜಸಂದಣಿ ನಿರ್ವಹಣೆಗೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಹಾಗೇ ಆರೋಗ್ಯ ಮತ್ತು ಶೌಚ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ಸರತಿ ಸಾಲನ್ನು ವ್ಯವಸ್ಥೆ ಮಾಡಲಾಗಿದೆ.
![crowd-record-brokenvaranasi-vishwanath-temple-50-lakh-devotees-visited-in-9-days-prayagraj-maha-kumbh-mela-2025](https://etvbharatimages.akamaized.net/etvbharat/prod-images/10-02-2025/up-03-baba-vishvnath-photo-7209211_09022025233352_0902f_1739124232_870.jpg)
ಲಕ್ಷ ದಾಟುತ್ತಿರುವ ಭಕ್ತರ ಸಂಖ್ಯೆ: ಮಹಾಕುಂಭ ಮೇಳ ಶುರುವಾದಾಗಿನಿಂದ ಆಯೋಧ್ಯೆ ಮತ್ತು ವಾರಾಣಸಿಗೆ ಬರುವ ಭಕ್ತರು ಸಂಖ್ಯೆ ಹೆಚ್ಚಿದೆ. ವಾರಣಾಸಿಯ ಗಂಗಾನದಿಯಲ್ಲಿ 8 ರಿಂದ 10 ಲಕ್ಷ ಜನರು ಸ್ನಾನ ಮಾಡುತ್ತಿದ್ದಾರೆ. ಈ ಸಂಖ್ಯೆ ಭಕ್ತರು ಆಗಮಿಸುತ್ತಿರುವ ಹಿನ್ನೆಲೆ ರೈಲು ನಿಲ್ದಾಣ, ಬಸ್ ನಿಲ್ದಾಣಗಳು ಜನಸಂದಣಿಯಿಂದ ತುಂಬಿದೆ. ನಗರದ ರಸ್ತೆಗಳಲ್ಲಿ ಪ್ರವಾಸಿ ವಾಹನಗಳ ಸಾಲುಗಟ್ಟಿ ನಿಂತಿದೆ. ಇದರಿಂದ ಜನರಿಗೆ ಓಡಾಡುವುದೇ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ವಾರಾಣಸಿ ಗಡಿಯಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗದಂತೆ ಗಮನ ವಹಿಸಲಾಗುತ್ತಿದೆ.
![crowd-record-brokenvaranasi-vishwanath-temple-50-lakh-devotees-visited-in-9-days-prayagraj-maha-kumbh-mela-2025](https://etvbharatimages.akamaized.net/etvbharat/prod-images/10-02-2025/up-03-baba-vishvnath-photo-7209211_09022025233352_0902f_1739124232_910.jpg)
ಇದನ್ನೂ ಓದಿ: ಅಪಘಾತಕ್ಕೀಡಾದ ಮಹಾಕುಂಭಕ್ಕೆ ಆಗಮಿಸುತ್ತಿದ್ದ ನೇಪಾಳಿ ಯಾತ್ರಿಕರಿದ್ದ ಬಸ್ ; 40 ಮಂದಿಗೆ ಗಾಯ
ಇದನ್ನೂ ಓದಿ: ಮಹಾಕುಂಭ ವೈಭವ: ಪ್ರಯಾಗರಾಜ್ಗೆ ಭಕ್ತರ ಪ್ರವಾಹ, ಟ್ರಾಪಿಕ್ ಜಾಮ್ - ರೈಲು ನಿಲ್ದಾಣವೇ ಬಂದ್