Gold Rate Today : ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಸ್ವಲ್ಪ ಹೆಚ್ಚಾಗಿದೆ. ಭಾನುವಾರ 10 ಗ್ರಾಂ ಚಿನ್ನದ ಬೆಲೆ ರೂ.87,600 ಇದ್ದರೆ, ಸೋಮವಾರ ರೂ.440 ಏರಿಕೆಯಾಗಿ ರೂ.88,040ಗೆ ತಲುಪಿದೆ. ಭಾನುವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.97,700ರಷ್ಟಿದ್ದರೆ ಸೋಮವಾರ ರೂ.100ರಷ್ಟು ಏರಿಕೆಯಾಗಿ ರೂ.97,800ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ : ಸಿಲಿಕಾನ್ ಸಿಟಿಯಲ್ಲಿ 24 ಕ್ಯಾರೆಟ್ನ 10ಗ್ರಾಂ ಚಿನ್ನದ ಬೆಲೆ 87,060 ರೂ ಇದೆ. ಇಂದು ಸುಮಾರು 390 ರೂ ಹೆಚ್ಚಳ ಕಂಡಿದೆ. ಇನ್ನು 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 79,800 ರೂ ಆಗಿದೆ. ಸುಮಾರು 350 ರೂಪಾಯಿ ಏರಿಕೆಯಾಗಿದೆ.
ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.88,040 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 97,800 ರೂ.
ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.88,040. ಪ್ರತಿ ಕೆಜಿ ಬೆಳ್ಳಿ ಬೆಲೆ 97,800 ರೂ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬಹುದು.
ಸ್ಪಾಟ್ ಗೋಲ್ಡ್ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಾಗಿದೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 2,860 ಡಾಲರ್ ಆಗಿದ್ದರೆ ಸೋಮವಾರದ ವೇಳೆಗೆ 12 ಡಾಲರ್ ಏರಿಕೆಯಾಗಿ 2,872 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.97 ಡಾಲರ್ ಇದೆ.
ಸ್ಟಾಕ್ ಮಾರ್ಕೆಟ್: ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ಇಳಿಕೆಯೊಂದಿಗೆ ದಿನಾರಂಭ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ದುರ್ಬಲ ಸಂಕೇತಗಳಿಂದಾಗಿ ದೇಶೀಯ ಸೂಚ್ಯಂಕಗಳು ಸಹ ಇಳಿಕೆ ಕಂಡಿವೆ. ಈ ವಾರ ಬಿಡುಗಡೆಯಾಗಲಿರುವ ಕಾರ್ಪೊರೇಟ್ ಸಂಸ್ಥೆಗಳ ಹಣಕಾಸು ಫಲಿತಾಂಶಗಳ ಮೇಲೆ ಹೂಡಿಕೆದಾರರು ಚಿತ್ತ ಹರಿಸಿರುವುದರಿಂದ ಈ ಬೆಳವಣಿಗೆ ಕಂಡು ಬಂದಿದೆ.
ಬೆಳಗ್ಗೆ 9;20ರ ಸಮಯದಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 371 ಅಂಕಗಳ ನಷ್ಟ ಅನುಭವಿಸಿದ್ದು, 77,488ರಲ್ಲಿ ವಹಿವಾಟು ನಡೆಸುತ್ತಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಸಹ ಆ ಸಮಯದಲ್ಲಿ ಸುಮಾರು ನಿಫ್ಟಿ 116 ಅಂಕ ಕಳೆದುಕೊಂಡು ವಹಿವಾಟು ನಿರತವಾಗಿತ್ತು.
ರೂಪಾಯಿ ಮೌಲ್ಯ; ರೂಪಾಯಿ ಮೌಲ್ಯವು ಸಾರ್ವಕಾಲಿಕವಾಗಿ ಕುಸಿಯುತ್ತಾ ಸಾಗಿದೆ. ಇಂದು ಮತ್ತೆ 44 ಪೈಸೆ ಕುಸಿದು 87.94 ರ ಹೊಸ ಜೀವಮಾನದ ಕನಿಷ್ಠ ಮಟ್ಟವನ್ನು ತಲುಪಿತು.
ಇದನ್ನು ಓದಿ:ಎಲ್ಐಸಿ ಬಳಿಯ ₹880 ಕೋಟಿಗೆ ವಾರಸುದಾರರೇ ಇಲ್ಲ : ನಿಮ್ಮ ಕುಟುಂಬಸ್ಥರ ಹಣವೂ ಇದೆಯಾ ಚೆಕ್ ಮಾಡಿ
ಇದನ್ನು ಓದಿ: EXPLAINER:ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಏನಿದೆ? ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ!