ETV Bharat / state

ಪೊಲೀಸ್ ಠಾಣೆಯಲ್ಲೇ ಬೈಕ್ ಕಳವು: ಇಬ್ಬರ ಬಂಧನ - BIKE THEFT FROM POLICE STATION

ಪೊಲೀಸ್ ಠಾಣೆಯಲ್ಲೇ ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

BIKE THEFT FROM POLICE STATION
ಬೈಕ್ ಕದ್ದ ಆರೋಪಿಗಳು (ETV Bharat)
author img

By ETV Bharat Karnataka Team

Published : Feb 10, 2025, 10:57 AM IST

ಚಾಮರಾಜನಗರ: ಪೊಲೀಸ್ ಠಾಣೆಯ ಗೇಟ್​​ನ ಬೀಗ ಮುರಿದು ಒಳ ನುಗ್ಗಿ ಜಪ್ತಿ ಮಾಡಿ ಇಡಲಾಗಿದ್ದ ಬೈಕ್​​ ಕದ್ದಿರುವ ಘಟನೆ ಚಾಮರಾಜನಗರದ ಸಿಇಎನ್ ಠಾಣೆಯಲ್ಲಿ ನಡೆದಿದೆ. ಬೈಕ್ ಕದ್ದೊಯ್ದಿದ್ದ ಚಾಮರಾಜನಗರದ ಅರ್ಫಾಜ್ ಹಾಗೂ ಇಮ್ರಾನ್ ಎಂಬ ಆರೋಪಿಗಳನ್ನು ಪಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ತಡರಾತ್ರಿ ಅರ್ಫಾಜ್ ಮತ್ತು ಇಮ್ರಾನ್ ಕಾಂಪೌಂಡ್ ಹಾರಿ ಠಾಣಾ ಆವರಣಕ್ಕೆ ಬಂದು ಗೇಟಿನ ಬೀಗ ಮುರಿದಿದ್ದಾರೆ‌‌. ಬಳಿಕ, ಎನ್​​ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಿದ್ದ ಹೊಂಡಾ ಶೈನ್ ಬೈಕ್​ನ್ನು ಕದ್ದೊಯ್ದಿದ್ದರು.

ಬೆಳಗ್ಗೆ ಠಾಣೆಗೆ ಬಂದ ಪೊಲೀಸರು ಗೇಟ್​​ನ ಬೀಗ ಇಲ್ಲದಿರುವುದನ್ನು ಕಂಡು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರು ಬೈಕ್ ಕದ್ದೊಯ್ದಿರುವುದು ಗೊತ್ತಾಗಿದೆ. ಕೂಡಲೇ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ‌. ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರನ್ನು ಬಂಧಿಸಿ, ಬೈಕ್ ವಶಕ್ಕೆ ಪಡೆಯಲಾಗಿದೆ.

ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 48 ಬೈಕ್​​​​​ ಕಳ್ಳತನ ಮಾಡಿದ್ದ ಖದೀಮನ ಬಂಧಿಸಿದ ಪೊಲೀಸರು: ಚೋರನಿಂದ ಬೈಕ್​​ ವಶಕ್ಕೆ ಪಡೆದ ಖಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.