ಕರ್ನಾಟಕ

karnataka

ETV Bharat / sports

ಗುಜರಾತ್ ಎದುರು ಮಂಕಾದ ಸನ್‌ರೈಸರ್ಸ್: ಗಿಲ್​​ ಪಡೆಗೆ 7 ವಿಕೆಟ್​ ಗೆಲುವು - IPL 2024 - IPL 2024

ಸನ್‌ರೈಸರ್ಸ್ ಹೈದರಾಬಾದ್ ಎದುರು ಗುಜರಾತ್ ಟೈಟನ್ಸ್ 7 ವಿಕೆಟ್​ಗಳ​ ಭರ್ಜರಿ ಜಯ ದಾಖಲಿಸಿದೆ.

ಗುಜರಾತ್ ಟೈಟನ್ಸ್​
ಗುಜರಾತ್ ಟೈಟನ್ಸ್​

By ETV Bharat Karnataka Team

Published : Mar 31, 2024, 7:18 PM IST

Updated : Mar 31, 2024, 10:54 PM IST

ಅಹಮದಾಬಾದ್ :​ ಸನ್‌ರೈಸರ್ಸ್ ಹೈದರಾಬಾದ್ ನೀಡಿದ 163 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್​ ತಂಡವು​ 5 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಉತ್ತಮ​ ಬ್ಯಾಟಿಂಗ್​ ಪ್ರದರ್ಶನ ನೀಡಿದ ಗುಜರಾತ್​ ಬ್ಯಾಟರ್​ಗಳು ತಂಡಕ್ಕೆ ಜಯ ತಂದು ಕೊಡುವಲ್ಲಿ ಯಶಸ್ವಿಯಾದರು.

ಸಾಯಿ ಸುದರ್ಶನ್​ ತಾಳ್ಮೆಯ ಆಟ ಹಾಗೂ ಡೇವಿಡ್ ಮಿಲ್ಲರ್​ ಅವರ ಆಕ್ರಮಣಕಾರಿ ಬ್ಯಾಟಿಂಗ್​ನಿಂದ​​ ಹೈದರಾಬಾದ್​ ಸೋಲು ಅನುಭವಿಸಿತು. ಹೈದರಾಬಾದ್​ ಪರ ಶಹಬಾಜ್ ಅಹ್ಮದ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಮಯಾಂಕ್ ಮಾರ್ಕಾಂಡೆ ಒಂದು ವಿಕೆಟ್​ ಪಡೆದು ತೃಪ್ತಿಪಟ್ಟರು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ​ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 ರನ್​ ಬಾರಿಸಿತ್ತು.

ಎರಡನೇ ಇನ್ನಿಂಗ್ಸ್​ ಆರಂಭಿಸಿದ ಗುಜರಾತ್ ಮೊದಲ ವಿಕೆಟ್​ಗೆ 36 ರನ್​ಗಳ ಜೊತೆಯಾಟ ಕಂಡಿತ್ತು.​ ವೃದ್ಧಿಮಾನ್​ ಸಹಾ 23 ರನ್​ಗಳಿಸಿ ಔಟ್​ ಆದರು. ನಾಯಕ ಶುಭಮನ್​ ಗಿಲ್​ ಕೂಡ 36 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಈ ಹಂತದಲ್ಲಿ ಸಾಯಿ ಸುದರ್ಶನ್​ ಹಾಗೂ ಡೇವಿಡ್ ಮಿಲ್ಲರ್​ ಜೊತೆಯಾಟ ಗುಜರಾತ್​ ತಂಡದ ಎರಡನೇ ಗೆಲುವಿಗೆ ಶ್ರಮಿಸಿತು.

ಒಂದೆಡೆ ಯುವ ಆಟಗಾರ ಸಾಯಿ ಸುದರ್ಶನ್​ ಸ್ವಲ್ಪ ತಾಳ್ಮೆ ನಿಂದ ಬ್ಯಾಟ್​ ಬೀಸಿ ರನ್​ ಕಲೆ ಹಾಕಿದರು. ಇನ್ನೊಂದೆಡೆ ಅನುಭವಿ ಆಟಗಾರ ಡೇವಿಡ್​ ಮಿಲ್ಲರ್​ ತಮ್ಮ ಹೊಡಿ ಬಡಿ ಆಟವನ್ನು ಮುಂದುವರೆಸಿದರು. 64 ರನ್​ಗಳ ಜೊತೆಯಾಟದ ಮೂಲಕ ಗುಜರಾತ್​ ಗೆಲುವನ್ನು ಈ ಜೋಡಿ ನಿಶ್ಚಯವಾಗಿಸಿತು. ಒಂದು ಸಿಕ್ಸರ್​, ನಾಲ್ಕು ಬೌಂಡರಿ ಮೂಲಕ 36 ಎಸೆತಗಳಲ್ಲಿ 45 ಹೊಡೆದು ಸಾಯಿ ಸುದರ್ಶನ್​ ವಿಕೆಟ್​ ಕಳೆದುಕೊಂಡರು. 27 ಎಸೆತಗಳಲ್ಲಿ 2 ಆರ್ಕಷಕ ಸಿಕ್ಸರ್​ ಮತ್ತು 4 ಬೌಂಡರಿಗಳೊಂದಿಗೆ ಡೆವೀಡ್​ ಮಿಲ್ಲರ್​ 44 ಬಾರಿಸಿ, ಆಲ್ ರೌಂಡರ್​ ವಿಜಯ ಶಂಕರ್​ (14) ಅವರೊಂದಿಗೆ ಪಂದ್ಯ ಗೆಲ್ಲಿಸಿ ಅಜೇಯರಾಗಿ ಉಳಿದರು.

ತಂಡಗಳು: ಗುಜರಾತ್ ಟೈಟಾನ್ಸ್ :ವೃದ್ಧಿಮಾನ್ ಸಹಾ(ವಿ.ಕೀ), ಶುಭಮನ್ ಗಿಲ್(ನಾಯಕ), ಅಜ್ಮತ್​ಉಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ

ಸನ್‌ರೈಸರ್ಸ್ ಹೈದರಾಬಾದ್ :ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿ.ಕೀ.), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್

ಇದನ್ನೂ ಓದಿ :ಐಪಿಎಲ್​ 2024: ಮೋಹಿತ್​ ಶರ್ಮಾ ಅದ್ಭುತ ಸ್ಪೆಲ್;​ ಗುಜರಾತ್ ಬೌಲಿಂಗ್​ ಎದುರು ಪತರುಗುಟ್ಟಿದ​ ​ಹೈದರಾಬಾದ್ ಬ್ಯಾಟರ್ಸ್ - IPL 2024

Last Updated : Mar 31, 2024, 10:54 PM IST

ABOUT THE AUTHOR

...view details