IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಗಾಬಾ ಮೈದಾನದಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾದ ವಿರುದ್ಧ ಫಾಲೋ ಆನ್ ಮಾಡುವ ಗುರಿಯಲ್ಲಿರುವ ಆಸ್ಟ್ರೇಲಿಯಾ ಪಂದ್ಯದ ಮೇಲೂ ಹಿಡಿತ ಸಾಧಿಸಿದೆ.
ನಾಲ್ಕನೇ ದಿನವಾದ ಇಂದು ಮಳೆಯ ನಡುವೆಯೆ ಆಸೀಸ್ ಬೌಲರ್ ಭರ್ಜರಿ ಪ್ರದರ್ಶನ ತೋರಿ 3 ವಿಕೆಟ್ಗಳನ್ನು ಉರುಳಿಸಿದ್ದಾರೆ. ಸಧ್ಯ ಭಾರತ 62.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿದೆ. 74 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಾಹುಲ್ ಮತ್ತು ಜಡೇಜಾ ನೆರವಾದರು. ರೋಹಿತ್ ಶಮಾ (10) ನಿರ್ಗಮಿಸಿದ ಬಳಿಕ ಬ್ಯಾಟಿಂಗ್ಗೆ ಬಂದ ಜಡೇಜಾ, ರಾಹುಲ್ ಅವರೊಂದಿಗೆ ಸೇರಿ ತಂಡದ ಸ್ಕೋರ್ ಸುಧಾರಿಸುವಲ್ಲಿ ಯಶಸ್ವಿಯಾದರು.
ಆಸೀಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಈ ಇಬ್ಬರು ಅರ್ಧಶತಕ ಪೂರೈಸಿದರು. ಆದರೇ 84 ರನ್ ಗಳಿಸಿದ್ದ ರಾಹುಲ್, ನಥಾನ್ ಲಿಯಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಸಧ್ಯ ಜಡೇಜಾ ಕ್ರೀಸ್ನಲ್ಲಿದ್ದು ಅಜೇಯವಾಗಿ 65 ರನ್ ಕಲೆಹಾಕಿದ್ದಾರೆ.
ಏತನ್ಮಧ್ಯೆ, ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಗಾಯಕ್ಕೆ ತುತ್ತಾಗಿ ಪಂದ್ಯದ ಅರ್ಧದಲ್ಲೆ ಮೈದಾನ ತೊರೆದಿದ್ದಾರೆ. ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ ಹೇಜಲ್‌ವುಡ್ ಕೇವಲ ಒಂದು ಓವರ್ ಮಾತ್ರ ಬೌಲ್ ಮಾಡಿದ್ದರು. ಬಳಿಕ ಅವರಿಗೆ ಸ್ನಾಯು ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಪಂದ್ಯದ ಅರ್ಧದಲ್ಲೆ ಅವರು ಮೈದಾನ ತೊರೆದಿದ್ದಾರೆ. ನಂತರ ಅವರನ್ನು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.
ಜೋಶ್ ಹೇಜಲ್ವುಡ್ನ ಗಾಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಎಕ್ಸ್ ಹ್ಯಾಂಡಲ್ ಮೂಲಕ ಅಪ್‌ಡೇಟ್ ನೀಡಿದೆ. ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ವಕ್ತಾರರು ತಿಳಿಸಿದ್ದಾರೆ. ಗಾಯದ ತೀವ್ರತೆಯನ್ನು ನಿರ್ಧರಿಸಲು ಅವರನ್ನು ವೈದ್ಯಕೀಯ ಸ್ಕ್ಯಾನಿಂಗ್ಗೆ ಒಳಪಡಿಸಲಾಗುತ್ತದೆ. ಬಳಿಕ ಪಂದ್ಯದಲ್ಲಿ ಆಡಲಿದ್ದಾರೆಯೇ ಅಥವಾ ಇಲ್ಲವೆ ಎಂಬುದನ್ನು ನಿರ್ಧರಿಸಲಾಗುತ್ತದೆ.
ಎರಡನೇ ಟೆಸ್ಟ್ನಲ್ಲೂ ಗಾಯ:ಪರ್ತ್‌ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಜೋಶ್ ಹೇಜಲ್‌ವುಡ್ ಅದ್ಭುತ ಬೌಲಿಂಗ್ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಗಾಯದ ಕಾರಣದಿಂದಾಗಿ ಅಡಿಲೇಡ್ ಟೆಸ್ಟ್ ತಪ್ಪಿಸಿಕೊಂಡರು. ಅವರ ಸ್ಥಾನಕ್ಕೆ ಸ್ಕಾಟ್ ಬೌಲ್ಯಾಂಡ್ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಂಡಿದ್ದರು. ಆದಾಗ್ಯೂ, ಗಾಯದಿಂದ ಚೇತರಿಸಿಕೊಂಡ ನಂತರ, ಜೋಶ್ ಗಬ್ಬಾ ಟೆಸ್ಟ್‌ನಲ್ಲಿ ಪುನರಾಗಮನ ಮಾಡಿದ್ದರು. ಆದರೆ ಅವರ ಗಾಯ ಮತ್ತೊಮ್ಮೆ ಕಾಂಗರೂ ತಂಡಕ್ಕೆ ಆತಂಕ ತಂದಿದೆ.
ಇದನ್ನೂ ಓದಿ:ವೆಸ್ಟ್ ಇಂಡೀಸ್ ತಂಡದ ಎಲ್ಲ ಸ್ವರೂಪದ ಕ್ರಿಕೆಟ್ಗೆ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ!