Ind vs Aus: ಬಾರ್ಡರ್ - ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಸರಣಿಯ 3ನೇ ಪಂದ್ಯದ ನಾಲ್ಕನೇ ದಿನದಾಟ ಪ್ರಾರಂಭವಾಗಿದೆ.
52/4 ರನ್ನೊಂದಿಗೆ ದಿನದಾಟವನ್ನು ಆರಂಭಿಸಿದ ಭಾರತ 74 ರನ್ ಕೆಲೆ ಹಾಕತ್ತಿದ್ದಂತೆ 5ನೇ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 10 ರನ್ ಗಳಿಸಿ ಕಮಿನ್ಸ್ ಎಸೆತದಲ್ಲಿ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಪ್ರಸ್ತುತ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಮುಂದುವರೆಸಿದ್ದಾರೆ.
ಕುಸಿದ ಭಾರತಕ್ಕೆ ರಾಹುಲ್ ಆಸರೆ: ಮಳೆ ಪೀಡಿತ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 445 ರನ್ಗಳನ್ನು ಕಲೆಹಾಕಿದೆ. ಇದಕ್ಕುತ್ತರವಾಗಿ ಭಾರತ ತನ್ನ ಇನ್ನಿಂಗ್ಸ್ನಲ್ಲಿ 74 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ ಕುಸಿದ ಭಾರತಕ್ಕೆ ಕನ್ನಡಿಗ ರಾಹುಲ್ ಆಸರೆಯಾಗಿದ್ದಾರೆ. 33 ರನ್ ಗಳಿಸಿದ್ದ ವೇಳೆ ಸಿಕ್ಕ ವರದಾನವನ್ನು ಸದುಪಯೋಗ ಪಡಿಸಿಕೊಂಡ ರಾಹುಲ್ ಅರ್ಧಶತಕ ಬಾರಿಸಿ ಆಟವನ್ನು ಮುಂದುವರೆಸಿದ್ದಾರೆ. 35 ಓವರ್ ಮುಕ್ತಾಯದ ವೇಳೆಗೆ ರಾಹುಲ್ 77 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಕೂಡ ರಾಹುಲ್ಗೆ ಸಾಥ್ ನೀಡುತ್ತಾ 15 ರನ್ ಗಳಿಸಿದ್ದಾರೆ. 35 ಓವರ್ ಮುಕ್ತಾಯಕ್ಕೆ ಭಾರತದ ಸ್ಕೋರ್ 125 ಆಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಒಟ್ಟು ಏಳು ಟೆಸ್ಟ್ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ 5 ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಗಬ್ಬಾದಲ್ಲಿ ಭಾರತ 2021ರಲ್ಲಿ ಗೆಲುವು ಸಾಧಿಸಿತ್ತು. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತ್ತು.
ಇದನ್ನೂ ಓದಿ: ಬಲಿಷ್ಠ ಭಾರತದ ವಿರುದ್ಧ ಟೆಸ್ಟ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಟಾಪ್-5 ವಿದೇಶಿ ಆಟಗಾರರು