ETV Bharat / bharat

ಶಂಭು ಗಡಿಯಿಂದ ದೆಹಲಿಗೆ 101 ರೈತರಿಂದ ಕಾಲ್ನಡಿಗೆ ಜಾಥಾ ಜ.21 ರಿಂದ ಪುನಾರಂಭ - FARMERS PROTEST

ಶಂಭು ಗಡಿಯಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಪುನಾರಂಭಿಸುವುದಾಗಿ ರೈತರು ಘೋಷಿಸಿದ್ದಾರೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ
ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ (ians)
author img

By PTI

Published : Jan 16, 2025, 1:59 PM IST

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ಜಾರಿ ಮಾಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು 101 ರೈತರ ಗುಂಪು ಜನವರಿ 21ರಂದು ಶಂಭು ಗಡಿಯಿಂದ ದಿಲ್ಲಿಗೆ ಪಾದಯಾತ್ರೆಯನ್ನು ಪುನರಾರಂಭಿಸಲಿದೆ ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಗುರುವಾರ ತಿಳಿಸಿದ್ದಾರೆ.

101 ರೈತರ ಗುಂಪು ಕಳೆದ ವರ್ಷ ಡಿಸೆಂಬರ್ 6, ಡಿಸೆಂಬರ್ 8 ಮತ್ತು ಡಿಸೆಂಬರ್ 14 ರಂದು ಶಂಭು ಗಡಿಯ ಮೂಲಕ ಕಾಲ್ನಡಿಗೆಯಲ್ಲಿ ದೆಹಲಿಗೆ ಹೋಗಲು ಮೂರು ಬಾರಿ ಪ್ರಯತ್ನ ಮಾಡಿತ್ತು. ಆದರೆ ಹರಿಯಾಣದಲ್ಲಿ ಪೊಲೀಸರು ಅವರನ್ನು ಅಡ್ಡಗಟ್ಟಿದ್ದರು.

ಉಪವಾಸ ನಿರತ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸ ಗುರುವಾರ 52 ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಿ 111 ರೈತರ ಮತ್ತೊಂದು ಗುಂಪು ಖಾನೌರಿ ಬಳಿಯ ಗಡಿಯ ಹರಿಯಾಣ ಭಾಗದಲ್ಲಿ ಆಮರಣಾಂತ ಉಪವಾಸ ಆರಂಭಿಸಿದೆ. ಅದಾಗಿ ಒಂದು ದಿನದ ನಂತರ ಈಗ 101 ರೈತರ ಗುಂಪು ದೆಹಲಿಗೆ ಜಾಥಾ ನಡೆಸಲು ತೀರ್ಮಾನಿಸಿದೆ.

ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಪಂಧೇರ್, ಕಳೆದ 11 ತಿಂಗಳುಗಳಿಂದ ಶಂಭು ಮತ್ತು ಖನೌರಿಯಲ್ಲಿ ಕ್ಯಾಂಪ್ ಮಾಡುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"101 ರೈತರ ಗುಂಪು ಜನವರಿ 21 ರಂದು ಶಂಭು ಗಡಿಯಿಂದ ದೆಹಲಿಗೆ ತಮ್ಮ ಜಾಥಾವನ್ನು ಪುನರಾರಂಭಿಸಲು ಎಸ್​ಕೆಎಂ-ರಾಜಕೀಯೇತರ, ಕೆಎಂಎಂ ಈ ಎರಡೂ ವೇದಿಕೆಗಳು ನಿರ್ಧರಿಸಿವೆ" ಎಂದು ಪಂಧೇರ್ ಹೇಳಿದರು.

"ನಾವು ನೋಡುತ್ತಿರುವಂತೆ ಸರ್ಕಾರ ನಮ್ಮೊಂದಿಗೆ ಯಾವುದೇ ಮಾತುಕತೆಗೆ ಸಿದ್ಧವಾಗಿಲ್ಲ ಎಂಬುದು ನಮಗೆ ಗೊತ್ತಾಗುತ್ತಿದೆ. ಹೀಗಾಗಿ ಆಂದೋಲನವನ್ನು ತೀವ್ರಗೊಳಿಸಲು ಎರಡೂ ವೇದಿಕೆಗಳು ನಿರ್ಧರಿಸಿವೆ" ಎಂದು ಪಂಧೇರ್ ತಿಳಿಸಿದರು.

ಜನವರಿ 15 ರಂದು 111 ರೈತರ ಗುಂಪು ತಮ್ಮ ನಾಯಕ ದಲ್ಲೆವಾಲ್ ಅವರಿಗೆ ಬೆಂಬಲವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಬೇಡಿಕೆಗಳು ಈಡೇರುವವರೆಗೂ ತಾವು ಪಟ್ಟು ಬಿಡುವುದಿಲ್ಲ ಎಂದು ರೈತರು ಪ್ರತಿಜ್ಞೆ ಮಾಡಿದ್ದಾರೆ. ದಲ್ಲೆವಾಲ್ ಕಳೆದ ವರ್ಷ ನವೆಂಬರ್ 26 ರಿಂದ ಪಂಜಾಬ್ ಭಾಗದ ಖನೌರಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ರೈತರ ಗುಂಪು ಜಾಥಾ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಹರಿಯಾಣ ಪೊಲೀಸರು ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಅನ್ನು ಈಗಾಗಲೇ ವಿಧಿಸಲಾಗಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಬಂದ ಅಳಿಯನಿಗೆ 452 ಬಗೆಯ ಖಾದ್ಯಗಳಿಂದ ವಿಶೇಷ ಆತಿಥ್ಯ! - SPECIAL DISHES FOR SON IN LAW

ETV Bharat Logo

Copyright © 2025 Ushodaya Enterprises Pvt. Ltd., All Rights Reserved.