ETV Bharat / sports

ವೆಸ್ಟ್​ ಇಂಡೀಸ್​ ತಂಡದ ಎಲ್ಲ ಸ್ವರೂಪದ ಕ್ರಿಕೆಟ್​ಗೆ​ ಕೋಚ್​ ಆಗಿ RCB ಮಾಜಿ ಆಟಗಾರ ನೇಮಕ​! - WEST INDIES COACH

RCB ತಂಡದ ಮಾಜಿ ಆಟಗಾರ ಇದೀಗ ವೆಸ್ಟ್​ ಇಂಡೀಸ್​ ತಂಡದ ಎಲ್ಲಾ ಮೂರು ಸ್ವರೂಪದ ಕ್ರಿಕೆಟ್​ಗೆ ಕೋಚ್​ ಆಗಿ ನೇಮಕ ಆಗಿದ್ದಾರೆ.

DAREN SAMMY  WEST INDIES NEW COACH  DAREN SAMMY WEST INDIES COACH  ಡ್ಯಾರೆನ್ ಸ್ಯಾಮಿ
West Indies Team (IANS)
author img

By ETV Bharat Sports Team

Published : 3 hours ago

West Indies New Coach: ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (CWI) ಮಾಜಿ ಆಲ್ ರೌಂಡರ್ ಡ್ಯಾರೆನ್ ಸ್ಯಾಮಿಗೆ ದೊಡ್ಡ ಜವಾಬ್ದಾರಿ ವಹಿಸಿದೆ. ಸ್ಯಾಮಿ ಅವರನ್ನು ವೆಸ್ಟ್ ಇಂಡೀಸ್ ಪುರುಷರ ತಂಡದ ಎಲ್ಲ ಮೂರು ಸ್ವರೂಪಗಳಲ್ಲಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಮಂಡಳಿಯ ಕ್ರಿಕೆಟ್ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ವೆಸ್ಟ್​ ಇಂಡೀಸ್​ನ ಮಾಜಿ ಕ್ರಿಕೆಟಿಗ ಮತ್ತು ನಾಯಕನಾಗಿದ್ದ ಡ್ಯಾರೆನ್ ಸ್ಯಾಮಿ ಈ ಹಿಂದೆ ಸೀಮಿತ ಓವರ್‌ ಕ್ರಿಕೆಟ್​ಗೆ ಮಾತ್ರ ಕೋಚ್ ಆಗಿದ್ದರು. ಇದೀಗ ಟೆಸ್ಟ್ ತಂಡದ ಜವಾಬ್ದಾರಿ ವಹಿಸಲಾಗಿದೆ. ಸದ್ಯ ಟೆಸ್ಟ್‌ ತಂಡಕ್ಕೆ ಕೋಚ್ ಆಗಿರುವ ಆಂಡ್ರೆ ಕೊಹ್ಲಿ ಅವರ ಸ್ಥಾನಕ್ಕೆ ಸ್ಯಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ತಂಡವನ್ನು ಎರಡು ಬಾರಿ T20 ವಿಶ್ವಕಪ್ ಚಾಂಪಿಯನ್ ಮಾಡಿದ ಸಾಮಿ, ಏಪ್ರಿಲ್ 1, 2025 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪೂರ್ಣಾವಧಿ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ಸ್ಯಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡವನ್ನು ಯಾವುದೇ ಸಾಮರ್ಥ್ಯದಲ್ಲಿ ಪ್ರತಿನಿಧಿಸುವುದು ನನಗೆ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು. ವೆಸ್ಟ್ ಇಂಡೀಸ್ ಕ್ರಿಕೆಟ್​ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟ್​​ ದಾಖಲೆ: ವೆಸ್ಟ್ ಇಂಡೀಸ್‌ನ ಯಶಸ್ವಿ ನಾಯಕರಲ್ಲಿ ಡ್ಯಾರೆನ್ ಸ್ಯಾಮಿ ಕೂಡ ಒಬ್ಬರು. ಅವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ (2012 ಮತ್ತು 2016) T20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಡಿಸೆಂಬರ್ 20 ರಂದು 41 ನೇ ವರ್ಷಕ್ಕೆ ಕಾಲಿಡಲಿರುವ ಸ್ಯಾಮಿ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ 232 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 2004 ರಿಂದ 2017 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು.

ಈ ಅವಧಿಯಲ್ಲಿ 38 ಟೆಸ್ಟ್‌ಗ ಪಮದ್ಯಗಳನ್ನು ಆಡಿ 1323 ರನ್‌ಗಳನ್ನು ಗಳಿಸಿದ್ದಾರೆ ಮತ್ತು 84 ವಿಕೆಟ್‌ಗಳನ್ನು ಪಡೆದಿದ್ದಾರೆ. ಉಳಿದಂತೆ ಏಕದಿನದಲ್ಲಿ 126 ಪಂದ್ಯಗಳಲ್ಲಿ 1871 ರನ್ ಗಳಿಸಿದ್ದಲ್ಲದೆ, 81 ವಿಕೆಟ್​ ಕಿತ್ತಿದ್ದಾರೆ. ಇದೇ ವೇಳೆ, 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದು 587 ರನ್​ಗಳನ್ನು ಕಲೆಹಾಕಿದ್ದಾರೆ ಮತ್ತು 44 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದಲ್ಲದೇ ಐಪಿಎಲ್​ನಲ್ಲೂ ಭಾಗಿಯಾಗಿದ್ದರು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಸನ್​ ರೈಸರ್ಸ್​ ಹೈದರಾಬಾದ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳನ್ನು ಸ್ಯಾಮಿ ಪ್ರತಿನಿಧಿಸಿದ್ದರು. ಒಟ್ಟು 22 ಐಪಿಎಲ್​ ಪಂದ್ಯಗಳನ್ನು ಆಡಿರುವ ಸ್ಯಾಮಿ 295 ರನ್​ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 11 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: 3ನೇ ಟೆಸ್ಟ್​: ಕೆಎಲ್​ ರಾಹುಲ್​ ಅರ್ಧಶತಕ; ಕುಸಿದ ಭಾರತಕ್ಕೆ ಕನ್ನಡಿಗನ ಆಸರೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.