WPL RCB Full Squad: ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ಮಿನಿ ಹರಾಜು ಎರಡು ದಿನಳ ಹಿಂದೆ ಮುಕ್ತಾಯಗೊಂಡಿದೆ. ₹3.25 ಕೋಟಿ ರೂಪಾಯಿಗಳೊಂದಿಗೆ ಹರಾಜಿಗೆ ಪ್ರವೇಶಿಸಿದ್ದ RCB ಕೇವಲ 1.5 ಕೋಟಿ ಖರ್ಚು ಮಾಡಿ ನಾಲ್ಕು ಆಟಗಾರರನ್ನು ಖರೀದಿಸಿತು. ಇದರೊಂದಿಗೆ ಉಳಿದ ನಾಲ್ಕು ಸ್ಲಾಟ್‌ಗಳನ್ನು ಭರ್ತಿ ಮಾಡಿದೆ.
ಮಿನಿ ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಮೇಲೆ ಆರ್‌ಸಿಬಿ ಅತಿ ಹೆಚ್ಚು ಬಿಡ್ ಮಾಡಿತು. ಅವರಿಗೆ 1.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇದೇ ವೇಳೆ, ಉಳಿದ ಮೂರು ಆಟಗಾರರನ್ನು ಮೂಲ ಬೆಲೆಯೊಂದಿಗೆ ತಂಡಕ್ಕೆ ಸೇರಿಸಿತು. ಆಲ್‌ರೌಂಡರ್ ಜೋಶಿತಾ ವಿಜೆ, ರಾಘ್ವಿ ಬಿಸ್ಟ್ ಮತ್ತು ಬೌಲರ್ ಜಾಗರ್ವಿ ಪವಾರ್‌ಗೆ ಫ್ರಾಂಚೈಸಿ ತಲಾ 10 ಲಕ್ಷ ರೂ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ. ಇದರೊಂದಿಗೆ ಮತ್ತೊಮ್ಮೆ ಚಾಂಪಿಯನ್ ಆಗಲು RCB 18 ಆಟಗಾರನ್ನೊಳಗೊಂಡ ಬಲಿಷ್ಠ ತಂಡವನ್ನು ಕಟ್ಟಿದೆ.
ಉತ್ತರಾಖಂಡದ ಪ್ರೇಮಾ 10 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಅವರಿಗಾಗಿ ಭಾರಿ ಬಿಡ್ಡಿಂಗ್ ಪೈಪೋಟಿ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ಅನ್‌ಕ್ಯಾಪ್ಡ್ ಸ್ಪಿನ್ನರ್ ಮೇಲೆ ಹೆಚ್ಚಿನ ಆಸಕ್ತಿ ತೋರಿಸಿತು, ಇದರಿಂದಾಗಿ ಪ್ರೇಮಾ ಅವರ ಹರಾಜು ಬೆಲೆ 1 ಕೋಟಿ ರೂ.ಗೆ ತಲುಪಿತು. ಅಂತಿಮವಾಗಿ ಆರ್‌ಸಿಬಿ ಯಶಸ್ವಿಯಾಯ್ತು. ₹1.20 ಕೋಟಿ ರೂಪಾಯಿಗೆ ಪ್ರೇಮಾ ಅವರನ್ನು ಖರೀದಿ ಮಾಡಿತು.
ಉತ್ತರಾಖಂಡ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಮಸ್ಸೂರಿ ಥಂಡರ್ಸ್ ತಂಡದ ಪರ ಆಡಿದ್ದ ಪ್ರೇಮಾ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಆಕರ್ಷಿಸಿದ್ದರು. ಅವರು ಆಡಿದ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಮತ್ತು ಫೀಲ್ಡಿಂಗ್ ಮೂಲಕವೂ ಗಮನ ಸೆಳೆದಿದ್ದರು. ಪ್ರೇಮಾ ಅವರ ಆಗಮನದಿಂದ ಆರ್ಸಿಬಿಯ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡದ 18 ಆಟಗಾರರ ಪಟ್ಟಿ ಈ ಕೆಳಗಿದೆ.
ಮಹಿಳಾ ಪ್ರೀಮಿಯರ್ ಲೀಗ್ 2025, RCB ತಂಡ
ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಜಾರ್ಜಿಯಾ ವಾರೆಹಮ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ಪ್ರೇಮಾ ರಾವತ್, ಸೋಫಿ ಡಿವೈನ್, ರೇಣುಕಾ ಸಿಂಗ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಜಗರ್ ಘೋವರ್, ಜಗರ್ ಘೋವರ್ , ಎಲಿಸ್ ಪೆರ್ರಿ, ಜೋಶಿತಾ ವಿ.ಜೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ತಂಡದ ಎಲ್ಲ ಸ್ವರೂಪದ ಕ್ರಿಕೆಟ್ಗೆ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ!