ETV Bharat / bharat

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಹಲವು ವರ್ಷಗಳಿಂದ ಮುಚ್ಚಿದ್ದ ಮತ್ತೊಂದು ದೇಗುಲ ಓಪನ್​ - ANOTHER TEMPLE REOPENED

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಹಲವು ವರ್ಷಗಳ ನಂತರ ಮತ್ತೊಂದು ದೇಗುಲದ ಬಾಗಿಲು ತೆರೆಯಲಾಗಿದೆ.

another-temple-remained-closed-for-several-years-has-been-reopened-in-sambhal
ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ರಾಧಾ ಕೃಷ್ಣ ದೇಗುಲ (IANS)
author img

By ETV Bharat Karnataka Team

Published : Dec 17, 2024, 5:28 PM IST

ಸಂಭಾಲ್(ಉತ್ತರ ಪ್ರದೇಶ)​: ಸಂಭಾಲ್‌ನಲ್ಲಿ ಒತ್ತುವರಿ ತೆರವುಗೊಳಿಸುತ್ತಿರುವ ಪೊಲೀಸರು ದಶಕಗಳಿಗೂ ಹೆಚ್ಚು ಕಾಲದಿಂದ ಬಂದ್​ ಆಗಿದ್ದ ಮತ್ತೊಂದು ದೇಗುಲವನ್ನು ಪತ್ತೆ ಮಾಡಿದ್ದಾರೆ.

ಸರಯತರೀನ್​ ಪ್ರದೇಶದಲ್ಲಿರವ ರಾಧಾ ಕೃಷ್ಣ ದೇಗುಲವನ್ನು ಇದೀಗ ತೆರೆಯಲಾಗಿದೆ. ಹಿಂದೆ ಈ ದೇಗುಲದಲ್ಲಿ ಹಿಂದೆ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಪೂಜೆ ನಡೆಯುತ್ತಿತ್ತು. ಆದರೆ, ಕಳೆದ 10 ವರ್ಷದಿಂದ ಸಂಪೂರ್ಣವಾಗಿ ಬಂದ್​ ಆಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ದೇಗುಲವಿರುವ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ ಪುರಾತತ್ವ ಇಲಾಖೆ (ಎಎಸ್​ಐ) ಅಧಿಕಾರಿಗಳು ದೇಗುಲವನ್ನು ತೆರೆದಿದ್ದು, ಶುಚಿತ್ವ ಕೆಲಸ ಆರಂಭಿಸಲಾಗಿದೆ. ಎಂದಿನಂತೆ ಪೂಜೆ, ಪುನಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಸ್ಥಳೀಯ ನಿವಾಸಿ ರಿಶಿಪಾಲ್​ ಸಿಂಗ್ ಮಾತನಾಡಿ​, "1982ರಲ್ಲಿ ರಾಧಾ ಕೃಷ್ಣ ದೇಗುಲ ನಿರ್ಮಾಣಕ್ಕೆ ಸ್ಥಳೀಯರು ಭೂಮಿ ನೀಡಿದ್ದರು. 1992ರಲ್ಲಿ ಉತ್ತರ ಪ್ರದೇಶದಲ್ಲಿ ಗಲಭೆಗಳು ಸಂಭವಿಸಿದ ಬಳಿಕ ಪೂಜೆ ನಿಂತಿತ್ತು. ಸರಣಿ ಹಿಂಸಾಚಾರ ಮತ್ತು ಕೊಲೆಗಳು ಹಿಂದೂ ಸಮುದಾಯದ ಜನರಲ್ಲಿ ಭೀತಿ ಮೂಡಿಸಿದ ಹಿನ್ನೆಲೆಯಲ್ಲಿ ಅವರು ಇಲ್ಲಿಂದ ಸ್ಥಳಾಂತರಗೊಂಡರು. ಇಲ್ಲಿ ಸುರಕ್ಷತೆಯ ಭಯದಿಂದ ಹಿಂದೂಗಳು ಕೇವಲ ಹಬ್ಬದ ಸಮಯದಲ್ಲಿ ಮಾತ್ರ ದೇಗುಲಕ್ಕೆ ಆಗಮಿಸುತ್ತಿದ್ದರು. ಕಳೆದ 10 ವರ್ಷದಿಂದ ದೇಗುಲ ಸಂಪೂರ್ಣ ಬಂದ್​ ಆಗಿದೆ. ಇಲ್ಲಿ 1978ರಿಂದ ಕೋಮು ಗಲಭೆ ಸೇರಿದಂತೆ ಅನೇಕ ಹಿಂಸಾತ್ಮಕ ಘರ್ಷಣೆ ನಡೆದಿದೆ" ಎಂದರು.

ಸಂಭಾಲ್​ ಸಿಒ ಅನುಜ್​ ಕುಮಾರ್​ ಚೌಧರಿ ಪ್ರತಿಕ್ರಿಯಿಸಿ, "ಸ್ಥಳೀಯರು ಇಲ್ಲಿ ದೇಗುಲದ ಭೂಮಿ ಒತ್ತುವರಿ ಮಾಡಿಕೊಂಡಿರುವ ಕುರಿತು ನಮಗೆ ಮಾಹಿತಿ ಲಭ್ಯವಾಗಿದೆ. ನಾವು ಸ್ಥಳವನ್ನು ಪರಿಶೀಲಿಸಿದಾಗ ದೇಗುಲ ಪತ್ತೆಯಾಯಿತು" ಎಂದು ತಿಳಿಸಿದರು.

ಇತ್ತೀಚಿಗೆ 46 ವರ್ಷಗಳಿಂದ ಮುಚ್ಚಿದ್ದ ಶಿವನ ದೇಗುಲವನ್ನು ಇಲ್ಲಿ ತೆರೆಯಲಾಗಿತ್ತು. 1978ರಲ್ಲಿ ನಡೆದ ಗಲಭೆ ಬಳಿಕ ಇದನ್ನು ಮುಚ್ಚಲಾಗಿತ್ತು. ಅಂದಿನಿಂದ ಇಲ್ಲಿ ಪೂಜಾದಿಗಳು ಸ್ಥಗಿತಗೊಂಡಿದ್ದವು. ಡಿ. 14ರಂದು ಬಾಗಿಲು ತೆರೆದು ಶುಚಿಗೊಳಿಸುತ್ತಿದ್ದಾಗ ಅವರದಲ್ಲಿರುವ ಬಾವಿಯಲ್ಲಿ ಮಣ್ಣು ಅಗೆಯುವಾಗ ಮೂರು ದೇವರ ವಿಗ್ರಹಗಳು ಪತ್ತೆಯಾಗಿದ್ದವು.(ಐಎಎನ್​ಎಸ್​)

ಇದನ್ನೂ ಓದಿ: 46 ವರ್ಷದ ಬಳಿಕ ತೆರೆದ ಶಿವನ ದೇಗುಲ​; ಬಾವಿ ಅಗೆಯುವ ವೇಳೆ ಸಿಕ್ಕವು ಮೂರು ದೇವರ ವಿಗ್ರಹಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.