IND vs AUS, 1st Test: ಆಸ್ಟ್ರೇಲಿಯಾ-ಭಾರತ ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ (BGT) ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಪರ್ತ್ ಮೈದಾನದಲ್ಲಿ ನಡೆಯುತ್ತಿದೆ. ಯಶಸ್ವಿ ಜೈಸ್ವಾಲ್(3), ದೇವದತ್ ಪಡಿಕ್ಕಲ್(0), ವಿರಾಟ್ ಕೊಹ್ಲಿ(5), ಕೆ.ಎಲ್.ರಾಹುಲ್(26), ಧ್ರುವ್ ಜುರೆಲ್(11), ವಾಷಿಂಗ್ಟನ್ ಸುಂದರ್(4) ವಿಕೆಟ್ ಕಳೆದುಕೊಂಡಿರುವ ತಂಡ, 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಆಟ ಮುಂದುವರೆಸಿತ್ತು. ಇದಾದ ಬಳಿಕ ರಿಷಬ್ ಪಂತ್(37) ಮತ್ತು ನಿತಿಶ್ ರೆಡ್ಡಿ (41), ಹರ್ಷಿತ್ ರಾಣಾ (7) ಮತ್ತು ಬುಮ್ರಾ (8) ರನ್ ಕೊಡುಗೆ ನೀಡಿದರು.
ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಸರಣಿ ಸೋಲನುಭವಿಸಿದ್ದ ಟೀಂ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಹಾದಿ ಕಠಿಣವಾಗಿದೆ. ಇದೀಗ WTC ರೇಸ್‌ನಲ್ಲಿ ಉಳಿಯಬೇಕಾದರೆ ಭಾರತ ಈ ಸರಣಿಯಲ್ಲಿ 4 ಪಂದ್ಯಗಳನ್ನೂ ಗೆಲ್ಲಲೇಬೇಕು.
ಭಾರತ ತಂಡದಲ್ಲಿ ದೊಡ್ಡ ಬದಲಾವಣೆ:ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಆರಂಭಿಕರಾಗಿ ತಂಡ ಸೇರಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಶುಭಮನ್ ಗಿಲ್ ಹೊರಗುಳಿದಿದ್ದು, ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಅವರಿಗೆ ಅವಕಾಶ ಸಿಕ್ಕಿದೆ.
ಟೆಸ್ಟ್ಗೆ ಪದಾರ್ಪಣೆ:ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಮೂಲಕ ಭಾರತ ತಂಡದಲ್ಲಿ ಇಬ್ಬರು ಯುವ ಆಟಗಾರರಾದ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಪಾದಾರ್ಪಣೆ ಮಾಡಿದ್ದಾರೆ.
ಹವಾಮಾನ ವರದಿ: ಕಳೆದ ಕೆಲವು ದಿನಗಳಿಂದ ಪರ್ತ್‌ನಲ್ಲಿ ಮಳೆಯಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆಯೂ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪಂದ್ಯದ ಮೂರನೇ ದಿನ ಶೇ.25ರಷ್ಟು ಮಳೆಯಾಗಬಹುದೆಂದು ಹವಾಮಾನ ವರದಿಗಳು ತಿಳಿಸಿವೆ.