ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವೇಗದ ಬೌಲಿಂಗ್ನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳನ್ನು ಬರೆದಿರುವ ಶಮಿ 2023ರ ಏಕದಿನ ವಿಶ್ವಕಪ್ನಲ್ಲಿ ಸೆನ್ಸೇಷನಲ್ ಬೌಲರ್ ಆಗಿ ಹೊರಹೊಮ್ಮಿದ್ದರು. ಈ ವಿಶ್ವ ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ 24 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶಮಿ ಬೌಲಿಂಗ್ ಸಹಾಯದಿಂದ ಭಾರತ ಫೈನಲ್ಗೂ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಹಣಾಹಣಯಲ್ಲಿ ಸೋಲನುಭವಿಸಿತ್ತು.
ವಿಶ್ವಕಪ್ನ ಮೊದಲ ಮೂರು ಪಂದ್ಯಗಳಲ್ಲಿ ಶಮಿ ಅವರನ್ನು ಭಾರತೀಯ ಇಲೆವೆನ್ ತಂಡದಿಂದ ಹೊರಗಿಡಲಾಗಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ಬಳಿಕ ಶಮಿ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ದೊರೆತಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಶಮಿ ಇಡೀ ಟೂರ್ನಿಯುದ್ದಕ್ಕೂ ಮಾರಕ ಬೌಲಿಂಗ್ ಮಾಡಿ ಅದ್ಭುತವನ್ನೇ ಸೃಷ್ಟಿಸಿದ್ದರು. ಜತೆಗೆ 5 ಹೊಸ ದಾಖಲೆಗಳನ್ನು ಬರೆದಿದ್ದರು. ಅವು ಯಾವುವು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
2023ರ ವಿಶ್ವಕಪ್ನಲ್ಲಿ ಶಮಿ ದಾಖಲೆಗಳು;
ಏಳು ವಿಕೆಟ್ ಪಡೆದ ಬೌಲರ್:ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಅತ್ಯದ್ಭುತ ಪ್ರದರ್ಶನ ತೋರಿದ್ದರು. ಈ ಪಂದ್ಯದಲ್ಲಿ ಅವರು 57 ನರ್ಗಳಿಗೆ 7 ವಿಕೆಟ್‌ಗಳನ್ನು ಉರುಳಿಸಿದ್ದರು. ಇದರೊಂದಿಗೆ ವಿಶ್ವಕಪ್ನ ಸೆಮಿಫೈನಲ್ ಪಂದ್ಯವೊಂದರಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.