Cricketer Died: ಕ್ರಿಕೆಟ್ ಲೋಕದಲ್ಲಿ ಶೋಕ ಆವರಿಸಿದೆ. ರಣಜಿ ಆಟಗಾರ ಹಠಾತ್ ನಿಧನರಾಗಿದ್ದು ಕ್ರೀಡಾಲೋಕಕ್ಕೆ ಆಘಾತವಾಗಿದೆ.
ಹೌದು, ವಿಜಯ್ ಹಜಾರೆ, ರಣಜಿ ಟ್ರೋಫಿಯಂತಹ ಪ್ರತಿಷ್ಠತ ಟೂರ್ನಿಗಳಲ್ಲಿ ಭಾಗಿಯಾಗಿ ತಂಡವನ್ನು ಗೆಲ್ಲಿಸಿದ್ದ ಬ್ಯಾಟರ್ ಹಠಾತ್ ನಿಧನ ಹೊಂದಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ಬಂಗಾಳದ ರಣಜಿ ಟ್ರೋಫಿಯ ಮಾಜಿ ಆಟಗಾರನಾಗಿದ್ದ ಶುಭೋಜಿತ್ ಬ್ಯಾನರ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
2014ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಒಡಿಶಾ ವಿರುದ್ಧ ಬಂಗಾಳಕ್ಕೆ ಪಾದಾರ್ಪಣೆ ಮಾಡಿದ್ದ ಶುಭೋಜಿತ್, ಮೂರು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದರು. ಸದ್ಯ ಅವರು ಸ್ಥಳೀಯ ಕ್ರಿಕೆಟ್ಗಳನ್ನು ಆಡುತ್ತ ಖ್ಯಾತಿ ಪಡೆದಿದ್ದರು. ಕುಟುಂಬ ಸದಸ್ಯರ ಪ್ರಕಾರ, ಶುಭೋಜಿತ್ ಬ್ಯಾನರ್ಜಿ ಅವರು ಬೆಳಗಿನ ಉಪಾಹಾರ ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಕೆಲ ಗಂಟೆಗಳೂ ಕಳೆದರೂ ತಮ್ಮ ಕೋಣೆಯಿಂದ ಹೊರ ಬರದೆ ಇದ್ದುದಕ್ಕೆ, ಆತಂಕಗೊಂಡ ಪೋಷಕರು ಕೋಣೆ ಪ್ರವೇಶಿಸಿ ನೋಡಿದಾಗ ಶುಭೋಜಿತ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಕೂಡಲೇ ವೈದ್ಯರನ್ನು ಕರೆಯಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ 39 ವರ್ಷದ ಶುಭೋಜಿತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಘಟನೆ ಸೋಮವಾರ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಘಟನೆಯಿಂದ ಕ್ರೀಡಾಲೋಕ ಆಘಾತಕ್ಕೊಳಗಾಗಿದೆ.
ಜೈಪುರದಲ್ಲಿ ಮಾಜಿ ರಣಜಿ ಪ್ಲೇಯರ್ ನಿಧನ; ಮತ್ತೊಂದೆಡೆ ಜೈಪುರದಲ್ಲೂ ಇಂತಹದ್ದೇ ಘಟನೆ ಸಂಭವಿಸಿದೆ. ವೆಟರನ್ಸ್ ಡಬಲ್ ವಿಕೆಟ್ ಟೂರ್ನಿಯ ವೇಳೆ ರಾಜಸ್ಥಾನದ ಮಾಜಿ ರಣಜಿ ಆಟಗಾರ ಯಶ್ ಗೌರ್ (58 ವರ್ಷ) ಪಂದ್ಯದ ನಡುವೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ಅವರು ಹಠಾತ್ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಯಾವುದೇ ಪ್ರಯೋಜನೆ ಆಗಲಿಲ್ಲ. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಗೌರ್ ಅವರ ಹಠಾತ್ ನಿಧನಕ್ಕೆ ಜೈಪುರ ಮತ್ತು ರಾಜಸ್ಥಾನದ ಕ್ರಿಕೆಟ್ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.
ಪಂದ್ಯದ ವೇಳೆ ಮೈದಾನದಲ್ಲಿದ್ದ ಮಾಜಿ ರಣಜಿ ಕ್ರಿಕೆಟಿಗ ನಳಿನ್ ಜೈನ್ ಪ್ರಕಾರ, ಯಶ್ ಗೌರ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರಿಗೆ ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗಾಗಲೇ ಅವರು ಉಸಿರು ಚೆಲ್ಲಿದ್ದರು ಎಂದು ಘಟನೆ ಬಗ್ಗೆ ತಿಳಿಸಿದ್ದಾರೆ.
80ರ ದಶಕದಲ್ಲಿ ರಾಜಸ್ಥಾನ ರಣಜಿ ತಂಡಕ್ಕೆ ಆಯ್ಕೆಯಾಗಿದ್ದ ಯಶ್ ಅವರಿಗೆ ಪ್ಲೇಯಿಂಗ್-11ರಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಇಷ್ಟೆಲ್ಲಾ ಆದರೂ ಕ್ರಿಕೆಟ್ ಮೇಲಿನ ಅವರ ಉತ್ಸಾಹ ಕಡಿಮೆಯಾಗಿರಲಿಲ್ಲ. ಅವರು ಸ್ಥಳೀಯ ಕ್ರಿಕೆಟ್ಗಳಲ್ಲಿ ಭಾಗಿಯಾಗಿ ಖ್ಯಾತಿ ಪಡೆದಿದ್ದರು.
ಇದನ್ನೂ ಓದಿ: ಭಾರತದ ಸ್ಟಾರ್ ಕ್ರಿಕೆಟಿಗನ ತಂದೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ: ಆಗಿದ್ದೇನು?