ETV Bharat / state

ಬಿಗ್​ ಬಾಸ್​ ವಿಜೇತ​ ಹನುಮಂತಗೆ ಅಭಿಮಾನಿಗಳಿಂದ ಅದ್ಧೂರಿ ಮೆರವಣಿಗೆ: ಮಗನಿಗೆ ಆರತಿ ಬೆಳಗಿ ಬರಮಾಡಿಕೊಂಡ ಅಪ್ಪ-ಅವ್ವ - GRAND WELCOME TO HANUMANTHA

ಸ್ವಗ್ರಾಮಕ್ಕೆ ಆಗಮಿಸಿದ ಬಿಗ್​ ಬಾಸ್​ ವಿನ್ನರ್​ ಹನುಮಂತ ಅವರನ್ನು ಊರಿನ ಜನ ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.

Huge procession of Bigg Boss winner Hanuman
ಬಿಗ್​ ಬಾಸ್​ ವಿಜೇತ​ ಹನುಮಂತಗೆ ಅಭಿಮಾನಿಗಳ ಅದ್ಧೂರಿ ಮೆರವಣಿಗೆ (ETV Bharat)
author img

By ETV Bharat Karnataka Team

Published : Jan 30, 2025, 5:52 PM IST

Updated : Jan 30, 2025, 6:55 PM IST

ಹಾವೇರಿ: ಬಿಗ್ ಬಾಸ್​ ಸೀಸನ್​ 11ರ ವಿಜೇತ ಹನುಮಂತ ಸ್ವಗ್ರಾಮ ಸವಣೂರು ತಾಲೂಕು ಚಿಲ್ಲೂರು ಬಡ್ನಿಗೆ ಆಗಮಿಸಿದ್ದು, ಸವಣೂರು ಪಟ್ಟಣದಲ್ಲಿ ಹನುಮಂತ ಅವರಿಗೆ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.

ತೆರೆದ ವಾಹನದಲ್ಲೇ ಹಾಡು ಹೇಳಿ ರಂಜಿಸಿದ ಹನುಮಂತ; ಬ್ರಹ್ಮಲಿಂಗೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಯುವಕರು ಗುಲಾಲ್ (ಬಣ್ಣದ ಪುಡಿ) ಎರಚಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ರಸ್ತೆ ಬದಿಗಳಲ್ಲಿ ನಿಂತ ಮಹಿಳೆಯರು ಕೈಬೀಸಿ ಹನುಮಂತ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ, ಕೆಲವರು ಹೂವಿನ ಮಾಲೆಯ ಹಾರ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಹನುಮಂತ ತೆರೆದ ವಾಹನದಲ್ಲೇ "ಪಾತ್ರಧಾರಿ ನಾವೆಲ್ಲ ಸೂತ್ರಧಾರಿ ಶಿವ ಮ್ಯಾಲ" ಎಂಬ ಹಾಡು ಹೇಳಿ ರಂಜಿಸಿದರು.

ಬಿಗ್​ ಬಾಸ್​ ವಿಜೇತ​ ಹನುಮಂತಗೆ ಅಭಿಮಾನಿಗಳಿಂದ ಅದ್ಧೂರಿ ಮೆರವಣಿಗೆ (ETV Bharat)

ಮತ ಹಾಕಿ ಬೆಂಬಲಿಸಿದವರಿಗೆ ಧನ್ಯವಾದ; ಬಿಗ್ ಬಾಸ್ ವಿನ್ನರ್ ಕಪ್ ಹಿಡಿದು ಹನುಮಂತ ಅಭಿಮಾನಿಗಳತ್ತ ಕೈಬೀಸಿ, ಕೈಮುಗಿದು ತಮ್ಮ ಗೆಲುವಿಗೆ ಕಾರಣರಾದ ಮತ ಹಾಕಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಸವಣೂರು ಪಟ್ಟಣದಲ್ಲಿ ಆರಂಭಗೊಂಡು, ಸ್ವಗ್ರಾಮ ಚಿಲ್ಲೂರು ಬಡ್ನಿಯಲ್ಲಿರುವ ಅವರ ಮನೆಯವರೆಗೂ ಅಭಿಮಾನಿಗಳು ಮೆರವಣಿಗೆ ನಡೆಸಿದರು. ಮೆರವಣಿಗೆ ಮೂಲಕ ಮನೆಗೆ ಬಂದ ಮಗನನ್ನು ತಂದೆ, ತಾಯಿ, ಅತ್ತಿಗೆ, ಅಣ್ಣ, ಸಂಬಂಧಿಕರು ಆರತಿ ಮಾಡಿ ಮನೆಗೆ ಬರಮಾಡಿಕೊಂಡರು. ಬಿಗ್​ ಬಾಸ್ 11ರ ವಿನ್ನರ್ ಹನುಮಂತ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಈಟಿವಿ ಭಾರತ ದೊಂದಿಗೆ ಹನುಮಂತ ಲಮಾಣಿ ಅವರ ತಾಯಿ ಶೀಲವ್ವ ಮಾತನಾಡಿ, ಹನುಮಂತನನ್ನು ನೋಡೋಕೆ ಅವರ 3 ಜನ ಸಹೋದರಿಯರು ತವರು ಮನೆಗೆ ಆಗಮಿಸಿದ್ದಾರೆ. ಜಾನಪದ ಕಲಾವಿದ, ಹಾಡುಗಳಿಂದ ಜನರ ಮನಸ್ಸು ಗೆದ್ದಿರುವ ಹನುಮಂತನಿಗೆ ಮನೆ ಕಟ್ಟಿಸುವ ಆಸೆ ಇದೆ. ಮುಂದೆ ಮನೆ ಕಟ್ಟಿಸುತ್ತಾನೆ. ನಮ್ಮ ಕುಟುಂಬಕ್ಕೆ ಹೆಮ್ಮೆಯಾಗಿದೆ" ಎಂದು ಹೇಳಿದರು.

ಗಣರಾಜ್ಯೋತ್ಸವದಂದು ಬಿಗ್​ ಬಾಸ್​ ಕಿರೀಟ; ಜ. 26 ರಂದು ನಡೆದ ಬಿಗ್​ ಬಾಸ್​ ಫೈನಲ್​ನಲ್ಲಿ ಕಂಚಿನ ಕಂಠದ, ತನ್ನ ಸರಳ ನಡೆ ನುಡಿಗಳಿಂದ ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಗೆದ್ದು ಬೀಗಿದರು. ಅವರ ಈ ಜಯ ಮನೆ ಮಂದಿಗಷ್ಟೇ ಅಲ್ಲದೆ, ಜಿಲ್ಲೆಗೆ ಕೀರ್ತಿ ತಂದಿದೆ.

ಇದನ್ನೂ ಓದಿ: 'ಕುರಿ ಕಾಯೋದೆ ಭೇಷ್​​​' ಎಂದ ಹನುಮಂತ : ಬಿಗ್​ ಬಾಸ್​ ವಿಜೇತನಿಗೆ ಹೂಮಳೆ ಸ್ವಾಗತ; ಅದ್ಧೂರಿ ಮೆರವಣಿಗೆ

Last Updated : Jan 30, 2025, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.