Mercedes-Maybach GLS 600: ಬಾಲಿವುಡ್ ನಟ ಶಾಹಿದ್ ಕಪೂರ್ ಮನೆಗೆ ಹೊಸ ಅತಿಥಿಯೊಂದು ಸೇರ್ಪಡೆಯಾಗಿದೆ. ಹೌದು, ಅವರು ತಮ್ಮ ಮನಗೆ ಅದ್ಭುತವಾದ ಐಷಾರಾಮಿ ಕಾರೊಂದನ್ನು ತಂದಿದ್ದಾರೆ. ಶಾಹಿದ್ ಕಪೂರ್ ಅವರ ಕಾರು ಸಂಗ್ರಹಕ್ಕೆ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ರ ನೈಟ್ ಸೀರಿಸ್ ಮಾಡೆಲ್ ಜೊತೆಯಾಗಿದೆ.
ಮರ್ಸಿಡಿಸ್ ಮೇಬ್ಯಾಕ್ನ ಈ ವಿಶೇಷ ಆವೃತ್ತಿಯ ಮಾದರಿಯನ್ನು ಭಾರತದಲ್ಲಿ 3.71 ಕೋಟಿ ರೂ.ಗಳ ಎಕ್ಸ್-ಶೋರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಹೊಸ ಮಾದರಿಯ ವಿನ್ಯಾಸವನ್ನು ಸುಧಾರಿಸಲಾಗಿದೆ. ಅಷ್ಟೇ ಅಲ್ಲ, ಈ ಕಾರನ್ನು ಅನೇಕ ಉತ್ತಮ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಇದು ಶಾಹಿದ್ ಕಪೂರ್ ಅವರ ಮೊದಲ ಮೇಬ್ಯಾಕ್ ಅಲ್ಲ ಎಂಬುದು ಗಮನಾರ್ಹ.. ಬಾಲಿವುಡ್ ನಟ ಈ ಹಿಂದೆ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ರ ಸ್ಟ್ಯಾಂಡರ್ಡ್ ವರ್ಸನ್ ಸಹ ಖರೀದಿಸಿದ್ದಾರೆ.
ಮೇಬ್ಯಾಕ್ GLS 600 ನೈಟ್ ಸೀರಿಸ್ : ಮರ್ಸಿಡಿಸ್ ಮೇಬ್ಯಾಕ್ GLS 600 ರ ನೈಟ್ ಸೀರಿಸ್ ಮಾಡೆಲ್ ಅದರ ಸ್ಟ್ಯಾಂಡರ್ಡ್ ಮಾದರಿಗಿಂತ 25 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ. ಈ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾಡೆಲ್ನ ವಿಶೇಷ ಆವೃತ್ತಿಯಾಗಿದೆ. ಈ ಮರ್ಸಿಡಿಸ್ ಕಾರು ಡ್ಯುಯಲ್ ಟೋನ್ ಥೀಮ್ನೊಂದಿಗೆ ಬರುತ್ತದೆ. ಇದನ್ನು ಮೊಜಾವೆ ಸಿಲ್ವರ್ ಮತ್ತು ಓನಿಕ್ಸ್ ಬ್ಲ್ಯಾಕ್ ಸ್ಕೀಮ್ನಲ್ಲಿ ನೋಡಬಹುದಾಗಿದೆ. ಈ ನೈಟ್ ಸೀರಿಸ್ ಆವೃತ್ತಿಯಲ್ಲಿ, ಕ್ರೋಮ್ ಎಲಿಮೆಂಟ್ಸ್ ಅನ್ನು ಕಡಿಮೆ ಮಾಡಲಾಗಿದೆ ಮತ್ತು ಬ್ಲ್ಯಾಕ್ಡ್ ಔಟ್ ಡಿಟೇಲ್ಸ್ ಅನ್ನು ಜೋಡಿಸಲಾಗಿದೆ.
ಮರ್ಸಿಡಿಸ್ ಮೇಬ್ಯಾಕ್ನ ಈ ಮಾದರಿಯು ಕಪ್ಪು ಬಣ್ಣದ ಗ್ರಿಲ್ ಅನ್ನು ಹೊಂದಿದೆ. ಈ ಕಾರು ರೋಸ್-ಗೋಲ್ಡ್ನ ಶೇಡ್ ಜೊತೆ ಹೆಡ್ಲೈಟ್ಗಳನ್ನು ನೀಡಲಾಗಿದೆ. ಈ ಮರ್ಸಿಡಿಸ್ ಕಾರಿನಲ್ಲಿ 22 ಇಂಚಿನ ಆಲ್ ಬ್ಲ್ಯಾಕ್ ಮೇಬ್ಯಾಕ್ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಎಕ್ಸ್ಟಿರಿಯರ್ ಮೇಲೆ ನೈಟ್ ಸೀರಿಸ್ ಎಂದು ಬರೆಯುವ ಮೂಲಕ ಬ್ರ್ಯಾಂಡಿಂಗ್ ಅನ್ನು ಸಹ ಮಾಡಲಾಗಿದೆ.
ಮರ್ಸಿಡಿಸ್ ಮೇಬ್ಯಾಕ್ ಪವರ್ : ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ನೈಟ್ ಸೀರಿಸ್ 4.0-ಲೀಟರ್, ಟ್ವಿನ್-ಟರ್ಬೊ, ವಿ8 ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ. ಕಾರಿನಲ್ಲಿರುವ ಈ ಎಂಜಿನ್ 542 ಬಿಎಚ್ಪಿ ಪವರ್ ಮತ್ತು 730 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 48V EQ ಬೂಸ್ಟ್ ಮೈಲ್ಡ್-ಹೈಬ್ರಿಡ್ ವ್ಯವಸ್ಥೆಯನ್ನು ಸೇರಿಸುವುದರಿಂದ 21 bhp ಹೆಚ್ಚಿನ ಪವರ್ ಮತ್ತು 250 Nm ಹೆಚ್ಚಿನ ಟಾರ್ಕ್ ದೊರೆಯುತ್ತದೆ. ಈ ಕಾರಿನ ಎಂಜಿನ್ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒದಗಿಸಲಾಗಿದೆ. ಈ ಕಾರು 4MATIC ಆಲ್-ವ್ಹೀಲ್ ಡ್ರೈವ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್ 600 ನೈಟ್ ಸೀರಿಸ್ ಫೀಚರ್ಸ್ : ಮರ್ಸಿಡಿಸ್ನ ಈ ಅದ್ಭುತ ಐಷಾರಾಮಿ ಕಾರು 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಅಲ್ಲದೆ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಕಾರು ನೈಟ್ ಸೀರಿಸ್ ಅನಿಮೇಷನ್ನೊಂದಿಗೆ ಬರುತ್ತದೆ. ಮೇಬ್ಯಾಕ್ ಜಿಎಲ್ಎಸ್ 600 27 ಸ್ಪೀಕರ್ಗಳು ಮತ್ತು 64-ಕಲರ್ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಒಳಗೊಂಡಿದೆ. ಕಾರಿನ ಹಿಂಭಾಗ ಪ್ರಯಾಣಿಕರ ಮನರಂಜನೆಗಾಗಿ ಎರಡು 11.6-ಇಂಚಿನ ಟಚ್ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಹಿಂಭಾಗದ ಸೀಟುಗಳು ಮಸಾಜ್ ಫಂಕ್ಷನ್ ಹೊಂದಿವೆ.
ಓದಿ: ಓಹೋ! BMW iX ಫೇಸ್ಲಿಫ್ಟ್ ದೇಶಿಯ ಮಾರುಕಟ್ಟೆಗೆ ಬರುತ್ತಿದೆ - ಸಿಂಗಲ್ ಚಾರ್ಜ್ಗೆ 700 ಕಿ.ಮೀ. ವ್ಯಾಪ್ತಿ ಪ್ರಯಾಣ!